ತುಮಕೂರು : ಈ ಬಾರಿ ತುಮಕೂರು ವಿಶ್ವವಿದ್ಯಾಲಯ ದಲ್ಲಿ ಗೌರವ ಡಾಕ್ಟರೇಟ್ ಪಡೆದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಹಾಗೂ ಅಥ್ಲೆಟಿಕ್ಸ್ನ ಸಬ್ಜ್ಯೂನಿಯರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಗರದಕುಮಾರಿ ಪರೀಕ್ಷಾ ಹಾಗೂ ಸುದೀತಿ ಅವರನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಉದ್ಯಮಿ ಮಧುಗೋಲ್ಡ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಗೌವಿಸಿದರು.98 ವರ್ಷದ ಹಿರಿಯರು ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್.ರೇವಣ್ಣನವರ ಹೋರಾಟದ ಬದುಕನ್ನು ಗೌರವಿಸುವುದು ಹಾಗೂ ಚಿಕ್ಕ ವಯಸ್ಸಿನಲ್ಲೇ ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಅಭಿನಂದಿಸುವ ಮೂಲಕ ತಮ್ಮ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಿಕೊಂಡಿದ್ದಾಗಿ ಸಂಭ್ರಮಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ವಾತಂತ್ರ್ಯಹೋರಾಟಗಾರ ಟಿ.ಆರ್.ರೇವಣ್ಣ ಅವರು, ಶಾಲಾದಿನಗಳಲ್ಲಿ ತಾವು ಫುಟ್ ಬಾಲ್ಆಟಗಾರರಾಗಿದ್ದು, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದೆ.ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮಗಾಂಧಿಯವರು ತುಮಕೂರಿಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿ ಮಾಡಿ, ಅವರಿಂದ ಪ್ರೇರಣೆಯಾಗಿ ತಾವೂ ಸ್ವಾತಂತ್ರ್ಯ ಚಳವಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡೆ ಎಂದು ನೆನಪು ಮಾಡಿಕೊಂಡರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಧನಿಯಾಕುಮಾರ್, ವೀರಶೈವ ಸಹಕಾರ ಬ್ಯಾಂಕ್ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನಯ್ಯ, ಪಿ. ಮೂರ್ತಿ, ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪ್ರಜಾಪ್ರಗತಿ ಉಪಸಂಪಾದಕರಾದ ಟಿ.ಎನ್.ಮಧುಕರ್, ಪತ್ರಕರ್ತ ಕುಚ್ಚಂಗಿಪ್ರಸನ್ನ, ಹಿರಿಯ ವಕೀಲರಾದ ಗೂಳೂರು ಶ್ರೀನಿವಾಸ್, ಸಿಂಧೂರು ಶ್ರೀನಿವಾಸ್, ನಟರಾಜಶೆಟ್ಟಿ, ಜಗಜ್ಯೋತಿಸಿದ್ಧರಾಮಯ್ಯ, ದಿನೇಶ್, ಸುರೇಶ್, ತಿಮ್ಮಾರೆಡ್ಡಿ ಮತ್ತಿತರರು ಹಾಜರಿದ್ದು ಮಧುಗೋಲ್ಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯಕೋರಿದರು.
