ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಕಚೇರಿಯ ಬಳಿ ಕರ್ನಾಟಕ ರಾಷ್ಟ್ರ ಸಮಿತಿ(ಕೆ.ಆರ್.ಎಸ್) ಪಕ್ಷದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕೆ.ಆರ್.ಎಸ್.ಪಕ್ಷದ ಅಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿ ಅವರ ನೇತೃಯ್ವದಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ ಎದ್ದೇಳು ಕನ್ನಡಿಗ, ಕೆ.ಆರ್.ಎಸ್ ಪಕ್ಷ ಸೇರುಬಾ ಎಂಬ ಕರೆಯೊಂದಿಗೆ ಕನ್ನಡಿಗರನ್ನು ಜಾಗೃತಗೊಳಿಸಿ, ಕರ್ನಾಟಕದ ಜನತೆಗೆ ಸುಳ್ಳು ಭರವಸೆಯೊಂದಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಜನತಾದಳ, ಕಾಂಗ್ರೆಸ್, ಬಿಜೆಪಿ( ಜೆಸಿಬಿ) ಪಕ್ಷಗಳನ್ನು ತಿರಸ್ಕರಿಸಬೇಕು.
ಪ್ರಾದೇಶಿಕ ನೆಲೆಗಟ್ಟಿನಲ್ಲಿ ಪ್ರಾಮಾಣಿಕ ಆಡಳಿತ, ಜನಪರ ಸ್ವಚ್ಚ ಆಡಳಿತಕ್ಕಾಗಿ, ಲಂಚಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ, ಕನ್ನಡ ನೆಲಜಲ, ಭಾಷೆಯ ರಕ್ಷಣೆಗಾಗಿ, ಜೆಸಿಬಿ ಪಕ್ಷಗಳನ್ನು ತಿರಸ್ಕರಿಸಿ ಕೆ.ಆರ್.ಎಸ್.ಪಕ್ಷ ಸೇರ್ಪಡೆ ಅಭಿಯಾನದಲ್ಲಿ ಪಕ್ಣ ಸೇರುವಂತೆ ಮನವಿ ಮಾಡಿದರು.

ಕೆ.ಆರ್.ಎಸ್.ಪಕ್ಷವು 2028ಕ್ಕೆ ಎಲ್ಲಾ 224ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ. ಜನಪರ ಹೋರಾಟದಲ್ಲಿ ನಿರತವಾಗಿರುವ, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಕೆ.ಆರ್.ಎಸ್ ಪಕ್ಷವು ಮುಂದೊಂದು ದಿನ ಪ್ರಭಲ ಪ್ರಾದೇಶಿಕ ಪಕ್ಷವಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಲಂಚಗುಳಿತನ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ, ನಿರುದ್ಯೋಗ ಸಮಸ್ಯೆ, ವಸತಿ ಸಮಸ್ಯೆ ಜಾಸ್ತಿ ಆದಾಗ ಯುವಜನತೆ ದಂಗೆ ಏಳುತ್ತಾರೆ.
ಅಸಗ ರಾಷ್ಟ್ರೀಯ ಪಕ್ಷಗಳು ನಿರ್ನಾಮ ಆಗಲಿವೆ. ಯುವ ಜನರಿಗೆ ಏಕೈಕ ಆಯ್ಕೆ ಕೆ.ಆರ್.ಎಸ್ ಪಕ್ಷವೇ ಆಗಿರುತ್ತದೆ ಹಾಗಾಗಿ ಸಾರ್ವಜನಿಕರು, ಯುವಕರು, ಕಾರ್ಮಿಕರು, ಮಹಿಳೆಯರು ಈಗಲೇ ಕೆ.ಆರ್.ಎಸ್ ಪಕ್ಷವನ್ನು ಸೇರುವ ಮೂಲಕ ಪಕ್ಷವನ್ನು ಬಲವರ್ಧನೆ ಪಡಿಸಲು ಸಹಕಾರ ನೀಡಬೇಕು ಎಂದ ಮನವಿ ಮಾಡಿದರು.

ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಯಶಸ್ವಿಯಾಗಿ ಸದಸ್ಯತ್ವ ಮಾಸಾಚರಣೆ ಮಾಡಲಾಗುತ್ತಿದೆ. ರಾಜ್ಯದ ಜನತೆ, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಕೂಲಿ ಕಾರ್ಮಿಕರು, ನೊಂದವರು ನಮ್ಮ ಕೆ.ಆರ್.ಎಸ್ ಪಕ್ಷವನ್ನು ನಿರೀಕ್ಷೆಗೂ ಮೀರಿ ಸೇರ್ಪಡೆಯಾಗುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಗೌಡ, ಜಿಲ್ಲಾ ಉಸ್ತುವಾರಿ ಮಲ್ಲೇಶ್ ಹೆಬ್ಬಕವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಜಿಲ್ಲಾ ಕಾರ್ಯದರ್ಶಿ ಯೋಗೇಶ್, ಕೆ.ಆರ್.ಎಸ್ ಪಕ್ಷದ ಅಧ್ಯಕ್ಷ ನಾಗರಾಜು, ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ್, ಶಂಕರ್, ಮಂಜೇಗೌಡ, ಸವಿತಾಶ್ರೀನಿವಾಸ್, ಇಂದ್ರಮ್ಮ, ಪಾಂಡವಪುರ ತಾಲ್ಲೂಕು ಕೆ.ಆರ್.ಎಸ್.ಪ್ರಧಾನ ಕಾರ್ಯದರ್ಶಿ ನಿರಂಜನ್ ಮತ್ತಿತರರು ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
