ತುಮಕೂರು:ವಿಶೇಷ ಚೇತನ ಮಕ್ಕಳು ಭಗವಂತನ ಮಕ್ಕಳು ಆರೋಗ್ಯವಂತ ಬುದ್ದಿ ಚೆನ್ನಾಗಿರುವ ಮಕ್ಕಳನ್ನೇ ನೋಡಿಕೊಳ್ಳಲು ಪೋಷಕರು ಸಾಕಪ್ಪಾ ಸಾಕು ಎನ್ನುತ್ತಾರೆ ಆದರೆ ನೂರಾರು ವಿಶೇಷಚೇತನ ಮಕ್ಕಳನ್ನು ಹಗಲುರಾತ್ರಿ ಎನ್ನದೇ ನೋಡಿಕೊಳ್ಳುವುದು ಕಷ್ಟ,ಸ್ಪಂದನ ಮಾನಸಿಕ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ಸುಮಾರು 80 ಜನ ಮಕ್ಕಳಿದ್ದು ಅವರನ್ನು ನೋಡಿಕೊಂಡು ಅವರಿಗೆ ಅನ್ನ, ಆಹಾರ,ವಿದ್ಯೆ ಎಲ್ಲವನ್ನೂ ನೋಡಿಕೊಳ್ಳುತ್ತಿರುವ ಸಂಸ್ಥೆಗೆ ನಮ್ಮ ನಮನಗಳು,ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ,ವಿಶೇಷ ಚೇತನ ಮಕ್ಕಳಿಗೆ ಪ್ರತಿ ತಿಂಗಳು ಸರ್ಕಾರಿ ವೈದ್ಯರ ನೆರವಿನೊಂದಿಗೆ ನಮ್ಮ ಸಂಸ್ಥೆ ಜೊತೆಗೂಡಿ ಉಚಿತ ವ್ಯದ್ಯಕೀಯ ತಪಾಸಣೆ ನಡೆಸುತ್ತೇವೆ,ಮಕ್ಕಳಿಗೆ ಅರೋಗ್ಯ ಇಲಾಖೆಯಿಂದ ಔಷಧಿಗಳು ದೊರೆಯದಿದ್ದರೆ ನಮ್ಮ ಎನ್.ಜಿ.ಓ.ವತಿಯಿಂದ ವಿತರಿಸಲಾಗುವುದು ನಮ್ಮ ಎನ್.ಜಿ.ಓ.ಸದಾ ನಿಮ್ಮೊಂದಿಗೆ ಇರುತ್ತದೆ ಇವರೆಲ್ಲರೂ ನಮ್ಮ ಮಕ್ಕಳು ಇದ್ದ ಹಾಗೆ ಮುಗ್ಧತೆಯಿಂದ ಕೂಡಿದ ಈ ಮಕ್ಕಳ ಹಾರೈಕೆಗೆ ನಾವುಗಳ ಸದಾ ಸಿದ್ಧರಿದ್ದೇವೆ ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ ಎನ್.ಜಿ.ಓ.(ರಿ) ದ ಗೌರವಾಧ್ಯಕ್ಷರಾದ ನಟರಾಜಶೆಟ್ಟಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಮಲಾನರಸಿಂಹರವರು ಮಕ್ಕಳು ದೇವರ ಸಮಾನದಂತೆ ಇವರನ್ನು ನೋಡಿದರೆ ಭಗವಂತನನ್ನು ನೋಡಿದಂತೆ ವಿಶೇಷ ಚೇತನ ಮಕ್ಕಳ ಹಾರೈಕೆ,ವೈದ್ಯಕೀಯ ಸಲಹೆ ನೀಡುತ್ತಿರುವ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಎನ್.ಜಿ.ಓ.ದವರ ಕಾರ್ಯಕ್ರಮ ಎಲ್ಲರೂ ಮೆಚ್ಚುವಂತದ್ದು ನಾವೆಲ್ಲರೂ ವಿಶೇಷಚೇತನ ಮಕ್ಕಳ ಹಾರೈಕೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀನಿವಾಸಮೂರ್ತಿರವರು, ನಗರದ ಹೃದಯಭಾಗದಲ್ಲಿರುವ ಈ ವಿಶೇಷಚೇತನ ಮಕ್ಕಳ ಶಾಲೆಗೆ ಬಂದು ಆರೋಗ್ಯ ತಪಾಸಣೆ ಮಾಡುತ್ತಿರುವ ನಮಗೆ ಸಂತೋಷವಾಗುತ್ತಿದೆ,ವಿಶೇಷಚೇತನ ಮಕ್ಕಳನ್ನು ಕಡೆಗಣಿಸಬಾರದು,ಅವರನ್ನು ಅತ್ಯಂತ ಜವಾಬ್ದಾರಿಯಿಂದ ನೋಡಿಕೊಂಡು ಅವರ ಶ್ರೇಯಸ್ಸಿಗೆ ನಾವೆಲ್ಲರೂ ಕೈಜೋಡಿಸಬೇಕು ಅವರ ವಿದ್ಯಾಭ್ಯಾಸಕ್ಕಾಗಿ,ಹಾರೈಕೆಗಾಗಿ ಉಧಾರ ಸಹಾಯ ಮಾಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಡಾ||ವಿನುತಾ,ಕಾರ್ಯದರ್ಶಿ ಗೀತಾನಾಗೇಶ್, ಜ್ಯೋತಿಆಚಾರ್ಯ, ಚೇತನ್, ಎನ್.ಎಸ್.ನಾಗೇಂದ್ರ, ಶ್ರೀಮತಿನಂದಿನಿ, ಮಹೇಶ್, ನಂಜುಂಡಸ್ವಾಮಿ, ನವೀನ್, ವೆಂಕಟೇಶ್, ಸಿಸ್ಟರ್ ಅನಿತಾ ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] […]