ಕೊರಟಗೆರೆ : -ತಾಲೂಕಿನ ಕೋಳಾಲ ಹೋಬಳಿಯ.ಜನಸ್ನೇಹಿಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಪೊಲೀಸ ಇಲಾಖೆ ಮಕ್ಕಳಿಗೂ ಆಪ್ತವೆನಿಸುವ ನಿಟ್ಟಿನಲ್ಲಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಪೊಲೀಸ್ ಠಾಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಡಿ ಪೊಲೀಸ್ ಠಾಣೆ ಮತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಬುಧವಾರ ಅರಿವು ಮೂಡಿಸಲಾಯಿತು.
ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಶಾಲಾ ಮಕ್ಕಳೊಂದಿಗೆ ವಿಷಯ ವಿನಿಮಯ ಮಾಡಿಕೊಂಡರು. ಪೊಲೀಸ್ ಎಂದರೆ ಭಯಬೇಡ ಸಾರ್ವಜನಿಕರ ಸಹಾಯಕರದಿಂದ ಕಾನೂನು ರಚನೆ ಮಾಡಲು ಸಾಧ್ಯ ಇದರಲ್ಲಿ ಮಕ್ಕಳು ವರ್ತಾಗಿಲ್ಲ ಅನವಶ್ಯಕವಾಗಿ ಪೊಲೀಸರ ಮೇಲೆ ತಪ್ಪು ಕಲ್ಪನೆಯ ಮನೋಭಾವ ಬೆಳೆಸಿಕೊಳ್ಳಬೇಡಿ. ಸಾಮಾನ್ಯವಾಗಿ ಮಕ್ಕಳಲ್ಲಿ ಪೊಲೀಸ್ ಎಂದರೆ ಭಯವಿರುತ್ತದೆ ಇಂಥ ಭಯ ಹೋಗಲಾಡಿಸಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ರಕ್ಷಣೆ ಅವಶ್ಯಕತೆ ಇದ್ದಾಗ ಪೊಲೀಸರ ಸಹಾಯ ಪಡೆಯಲು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಇಲಾಖೆ ಸದಾಕಾಲ ಸನ್ನದ್ಧವಾಗಿರುತ್ತದೆ ಎಂದು ಹೇಳುವುದರ ಮೂಲಕ ಮಕ್ಕಳು ಸಂಚಾರ ನಿಯಮಗಳನ್ನು ಪಾಲನೆಯನ್ನು ಮಾಡುವುದೇಗೆ ಅವುಗಳ ಉಲ್ಲಂಘನೆಯಿಂದ ಎದುರಿಸಬೇಕಾದ ದಂಡ ಹಾಗೂ ಶಿಕ್ಷೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ.ಲೈಂಗಿಕ ದೌರ್ಜನ್ಯ. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ. ಸರಗಳವೂ. ಸೈಬರ್ ಕ್ರೈಂ. ಮತ್ತಿತರ ವಿಚಾರಗಳ ಬಗ್ಗೆ ಪೊಲೀಸರು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಯಾವುದೇ ಅಪಾಯಕಾರಿ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಮಕ್ಕಳಿಗೆ ಠಾಣೆ ಆವರಣದಲ್ಲಿ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ರವರ ಸಮ್ಮುಖದಲ್ಲಿ ಎ ಎಸ್ ಐ ಯೋಗೇಶ್ ಹಾಗೂ ಎ ಎಸ್ ಐ ಕುಮಾರ್. ಎಸ್ಪಿ ಕಾನ್ಸ್ಟೇಬಲ್ ಪ್ರಕಾಶ್. ಪೊಲೀಸ್ ಕಾನ್ಸ್ಟೇಬಲ್ ಶಶಿಧರ್. ನಾಗರಾಜ್. ಮಂಜುನಾಥ್. ವಿಜಯಕುಮಾರ್. ರಂಜಿತಾ. ಮಾಲಾಶ್ರೀ. ಕಿರಣ್ರವರ ಸಹಭಾಗಿತ್ವದಲ್ಲಿ ಮಕ್ಕಳಿಗೆ ಪೊಲೀಸರ ಕರ್ತವ್ಯ ಜವಾಬ್ದಾರಿ ಕಾನೂನು ಮತ್ತಿತರ ವಿಷಯಗಳ ಬಗ್ಗೆ ಪಾಠ ಮಾಡಿದ್ದ ಬಂದಿದೆ.

ಠಾಣೆ ಅಧಿಕಾರಿಗಳು ನಮ್ಮ ಠಾಣೆಯಲ್ಲಿ ಸಿಗುವ ಸೌಲಭ್ಯಗಳು ಬಗ್ಗೆ ತಿಳಿಸಿದರು ನಾವು ಸಮಾಜದಲ್ಲಿ ಕಾನೂನು ಪಾಲನೆ ಯಾವ ರೀತಿ ಮಾಡಬೇಕು ತುರ್ತುಪರಿಸ್ಥಿತಿಯಲ್ಲಿ ಸಹಾಯವಾಣಿಗಳಬಳಕೆ ಹೇಗೆ ವಾಹನ ಚಲನೆ ಮಾಡುವಾಗ ಹೆಲ್ಮೆಟ್ ದರಿಸುವುದು ಹಾಗೂ ಇನ್ಸೂರೆನ್ಸ್ ಏಕೆ ಬೇಕು, ಅದರ ಮಹತ್ವ ತಿಳಿಸಿದ್ದಾರೆ ಠಾಣೆಯಲ್ಲಿ ಅಧಿಕಾರಿಗಳು ಯಾವ ಅಧಿಕಾರವನ್ನು ಹೊಂದಿರುತ್ತಾರೆ ಬಂದೂಕುಗಳು ಬಳಕೆ ಠಾಣೆಯಲ್ಲಿ ಕೊಠಡಿಗಳ ಮಾಹಿತಿಯನ್ನು ತಿಳಿದು ನಾವು ಮುಂದೆ ಜೀವನದಲ್ಲಿ ಉನ್ನತ ಅಧಿಕಾರಿ ಆಗಬೇಕು ಎಂಬ ಉತ್ಸಾಹ ಬಂದಿದೆ
ಜಯಶ್ರೀ 6ನೇ ತರಗತಿ ಚೇತನ ಇಂಟರ್ನ್ಯಾಷನಲ್ ಸ್ಕೂಲ್
ಕೋಳಾಲ ತೆರೆದ ಮನೆ ಕಾರ್ಯಕ್ರಮ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ.ನಡೆವೆ ಉತ್ತಮ ಬಾಂಧವ್ಯ ಬೆಳೆಸುವ ಒಂದು ಕಾರ್ಯಕ್ರಮವಾಗಿದ್ದು ಇದು ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆ ಹಾಗೂ ಠಾಣ ಅಧಿಕಾರಿಗಳು ಕರ್ತವ್ಯ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುತ್ತದೆ ಈ ಕಾರ್ಯಕ್ರಮವು ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಅವರಿಂದ ಸಹಾಯ ಪಡೆಯಲಾಗುತ್ತದೆ ಈ ಕಾರ್ಯಕ್ರಮದ ಉದ್ದೇಶವೇನೆಂದರೆ ಪೊಲೀಸ್ ವ್ಯವಸ್ಥೆಯ ಪರಿಚಯ ಮಕ್ಕಳಿಗೆ ಆಗಬೇಕು ಎಂಬುದು ಕಾನೂನು ಜಾಗೃತಿ ಸುರುಕ್ಷತೆ ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಬಾಂದವ್ಯವನ್ನು ಬೆಳೆಸುವ ಉದ್ದೇಶವಾಗಿದೆ ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ತೆರೆದ ಮನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು ರಾಜೃ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದರ್ಶನದಂತೆ ಎಲ್ಲಾ ಸರ್ಕಾರಿ ಖಾಸಿಗೆ ಶಾಲಾ ಮಕ್ಕಳಿಗೆ ಆಯೋಜಿಸಲಾಗಿರುವ ಕಾರ್ಯಕ್ರಮವನು ತಿಳಿಯಪಡಿಸಲಾಯಿತು
ವರದಿ ನರಸಿಂಹಯ್ಯ ಹೊಸಕೋಟೆ
