ಸಕಲೇಶಪುರ, ನವೆಂಬರ್ 10: ರಾತ್ರಿ ಗಸ್ತಿನ ವೇಳೆ ಆನೆಮಹಲ್ ಹತ್ತಿರದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ (NH-75) ಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಕಾಡುಮರದ ಬಿಲೇಟ್ಸ್ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ:
ಗಾಡಿ ಸಂಖ್ಯೆ KA-12 C 3545ನಲ್ಲಿ ಸಾಗಿಸುತ್ತಿದ್ದ ಮರದ ಬಿಲೇಟ್ಸ್ಗಳನ್ನು ತಡೆದು ಪರಿಶೀಲಿಸಿದಾಗ, ಅಕ್ರಮ ಸಾಗಾಟ ಎಂದು ದೃಢಪಟ್ಟಿತು. ನಂತರ, ವಾಹನ ಮತ್ತು ವಸ್ತುಗಳನ್ನು ಅಮಾನತ್ತು ಮಾಡಲಾಗಿದ್ದು, ಸಂಬಂಧಿಸಿದ ಅರಣ್ಯ ಮೊಕದ್ದಮೆ ದಾಖಲಾಗಿದೆ.
ಇದನ್ನು ಓದಿ: ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು:
- ಸಕಲೇಶಪುರ ವಲಯ ಅರಣ್ಯಾಧಿಕಾರಿ: ಎಚ್.ಆರ್. ಹೇಮಂತ್ ಕುಮಾರ್
- ಉಪವಲಯ ಅರಣ್ಯಾಧಿಕಾರಿಗಳು: ಅರ್ಜುನ್, ಮಂಜುನಾಥ್
- ಅರಣ್ಯ ಪಾಲಕರು: ಲೋಕೇಶ್, ಉಮೇಶ್, ದೇವರಾಜ್
- ಅರಣ್ಯ ವೀಕ್ಷಕ: ಲೋಕೇಶ್
- ವಾಹನ ಚಾಲಕ: ಆಶ್ರಯ
ಅರಣ್ಯ ಇಲಾಖೆಯ ಈ ಕಾರ್ಯಾಚರಣೆ ಮೂಲಕ ಅಕ್ರಮ ಮರ ಸಾಗಾಟ ತಡೆಯಲು ಶಕ್ತಿ ಪ್ರದರ್ಶಿಸಲಾಗಿದೆ.
