ತುಮಕೂರು:ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಯನಗರ ಪೋಲೀಸ್ ಠಾಣೆಯ ನೂತನ ಕಟ್ಟಡವನ್ನು ಸಪ್ತಗಿರಿ ಬಡಾವಣೆಯಲ್ಲಿ ನಿರ್ಮಿಸಿದ್ದು ನಿರ್ಮಾಣಗೊಂಡ ಕಟ್ಟಡವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹಸಚಿವರಾದ ಡಾ||ಜಿ.ಪರಮೇಶ್ವರ್ ರವರು ಉದ್ಘಾಟಿಸಿದರು.
ನಂತರ ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಎಸ್.ವೀರಪ್ಪದೇವರು ರವರು ಮಾತನಾಡುತ್ತಾ ಈ ಹಿಂದೆ ಹತ್ತಾರು ವರ್ಷಗಳಿಂದ ಈ ಭಾಗದ ನಾಗರೀಕರು ಮತ್ತು ನಮ್ಮ ಜಯನಗರ ಹಿತರಕ್ಷಣಾ ಸಮಿತಿಯ ಮನವಿಯಂತೆ ಗೃಹಸಚಿವರು ನೀಡಿದ ವಾಗ್ದಾನದಂತೆ ಸುಮಾರು ಒಂದು ವರ್ಷ 3ತಿಂಗಳುಗಳ ಕಾಲಾವಧಿಯಲ್ಲಿ ನಿರ್ಮಿಸಿ ಸ್ವತಃ ಗೃಹಸಚಿವರೇ ಉದ್ಘಾಟಿಸಿದ್ದು ನಮ್ಮ ಭಾಗ್ಯ,ಈ ಬಡಾವಣೆಯಲ್ಲಿ ಸಿಸಿ ಕ್ಯಾಮೆರಾ ಅವಶ್ಯಕತೆ ಇದ್ದು ಮಹಾನಗರ ಪಾಲಿಕೆಯ ವತಿಯಿಂದ ಹಾಕಿಸಿಕೊಡಬೇಕು,ಹಾಲಿ ಇರುವ ಕಟ್ಟಡವು ನಮ್ಮ ಜಯನಗರ ಹಿತರಕ್ಷಣಾ ಸಮಿತಿಗೆ ಸೇರಿದ್ದಾಗಿದೆ,ಈ ಹಿಂದೆ ಈ ಕಟ್ಟಡವನ್ನು ನಾಗರೀಕ ಸಮಿತಿಯಿಂದ ನಿರ್ಮಿಸಿದ್ದು ಅದನ್ನು ತಾತ್ಕಾಲಿಕವಾಗಿ ಅಂದು ಎಸ್.ಪಿ.ರವರ ಮನವಿಯಂತೆ ಪೋಲೀಸ್ ಠಾಣೆಗೆ ಬಿಟ್ಟುಕೊಟ್ಟಿದ್ದೆವು, ಆದ್ದರಿಂದ ನೂತನ ಪೋಲೀಸ್ ಠಾಣೆಗೆ ಜಯನಗರ ಪೋಲೀಸ್ ಠಾಣೆಯು ಹೋದ ತಕ್ಷಣವೇ ನಮಗೆ ನಾಗರೀಕರ ಅನುಕೂಲಕ್ಕಾಗಿ ಬಿಟ್ಟುಕೊಡಬೇಕೆಂದು ಗೃಹಸಚಿವರಾದ ಡಾ||ಜಿ.ಪರಮೇಶ್ವರ್ ಮತ್ತು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರುಗಳಲ್ಲಿ ಮನವಿ ಮಾಡಿದರು.
ಜಯನಗರ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷರಾದ ಬಿ.ವಿ.ದ್ವಾರಕಾನಾಥ್ರವರು ಮಾತನಾಡುತ್ತಾ ಹಾಲಿ ಇರುವ ಕಟ್ಟಡವನ್ನು ನಮ್ಮ ಸಮಿತಿಗೆ ಬಿಟ್ಟುಕೊಟ್ಟರೆ ನಾಗರೀಕರಿಗೆ ಬೆಳಗಿನ ಯೋಗತರಬೇತಿ,ವಾಚನಾಲಯ,ಹಿರಿಯ ನಾಗರೀಕರು ಒಂದೆಡೆ ಕುಳಿತು ನ್ಯೂಸ್ ಪೇಪರ್ ಓದಲು,ಮತ್ತು ಸಂಘದ ಇತರೆ ಚಟುವಟಿಕೆಗಳಿಗೆ ಸಹ ಅನುಕೂಲವಾಗುತ್ತದೆ ಆದ್ದರಿಂದ ತಕ್ಷಣವೇ ಹಾಲಿ ಕಟ್ಟಡವನ್ನು ನಮಗೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ||ಎಸ್.ರಫೀಕ್ ಅಹಮದ್, ಮಹದೇವಯ್ಯ, ವೆಂಕಟೇಶ್, ರಮೇಶ್, ಗೋವಿಂದರಾಜು,ಎಸ್.ಪುಟ್ಟೀರಪ್ಪ,ಪಿ.ಕೆ.ರಾಘವೇಂದ್ರ,ಸತ್ಯಮೂರ್ತಿ,ಕೆ.ಆರ್.ಮಂಜುಳ,ಎಸ್.ಶ್ಯಾಮಲ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
