ಹೊಳೆನರಸೀಪುರ: ನವೆಂಬರ್ 11 — ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಸುಶ್ಮಿತಾ (26) ಎಂಬ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆ ಪ್ರಕಾರ ಇದು ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸುಶ್ಮಿತಾ ಒಕ್ಕಲಿಗ ಸಮುದಾಯದವರಾಗಿದ್ದು, ಸುಮಾರು ಐದು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ಗೂರಮಾರನಹಳ್ಳಿ ಗ್ರಾಯುವತಿಯ ಶವ ಬಾತ್ರೂಮ್ನಲ್ಲಿ ಪತ್ತೆಯಾದ ಪ್ರಕರಣಮದ ರಾಜು ಎಂಬುವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಮೂವರು ಗಂಡು ಮಕ್ಕಳು ಇದ್ದಾರೆ.
ಮೃತೆಯ ತಂದೆ ಬಾಲ್ಯದಲ್ಲೇ ತೀರಿಹೋಗಿದ್ದರಿಂದ, ತಟ್ಟೆಕೆರೆ ಗ್ರಾಮದ ಅಜ್ಜಿ ಸೀತಮ್ಮ ಹಾಗೂ ತಾಯಿ ಸುಮಿತ್ರ ಅವರ ಆರೈಕೆಯಲ್ಲಿ ಸುಶ್ಮಿತಾಳ ಬಾಲ್ಯ ಕಳೆದಿತ್ತು. ವಿವಾಹದ ನಂತರ ಗಂಡ-ಹೆಂಡತಿ ನಡುವೆ ಹಲವು ಬಾರಿ ಕಲಹ ಉಂಟಾಗಿದ್ದು, ಸುಶ್ಮಿತಾ ಹಲವು ಬಾರಿ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ದಿನಾಂಕ 11-11-2025ರ ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ತಟ್ಟೆಕೆರೆ ಗ್ರಾಮದ ಅಜ್ಜಿ ಮನೆಯ ಬಾತ್ರೂಮ್ನಲ್ಲಿ ಸುಶ್ಮಿತಾಳ ಶವ ಪತ್ತೆಯಾಯಿತು. ಶವವನ್ನು ಮೊದಲು ಕಂಡವರು ಅಜ್ಜಿ ಸೀತಮ್ಮ ಹಾಗೂ ತಾಯಿ ಸುಮಿತ್ರ. ಅವರು ತಕ್ಷಣ ಗ್ರಾಮಸ್ಥರಿಗೆ ವಿಷಯ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮೃತೆಯ ಕೆನ್ನೆ ಹಾಗೂ ತುಟಿ ಹತ್ತಿರ ರಕ್ತ ಹೆಪ್ಪುಗಟ್ಟಿದ ಗಾಯದ ಗುರುತುಗಳು ಕಂಡುಬಂದಿದ್ದು, ಸುಶ್ಮಿತಾಳನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಬಿಟ್ಟಿರಬಹುದೆಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಶವವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮರಣದ ನಿಖರ ಕಾರಣ ತಿಳಿಯಲು ಶವಪರೀಕ್ಷೆ ನಡೆಸಲಾಗಿದೆ.
ಗಂಡ ರಾಜು ಹಾಗೂ ಮೃತೆಯ ಕುಟುಂಬದ ನಡುವೆ ಇರುವ ವೈಮನಸ್ಯದ ಹಿನ್ನೆಲೆಯನ್ನೂ ಪೊಲೀಸರು ತನಿಖೆಗೊಳಪಡಿಸಿದ್ದಾರೆ.
ಪ್ರಕರಣದ ತನಿಖೆ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಮುಂದುವರೆಸಿದ್ದಾರೆ

[…] […]