ಚನ್ನರಾಯಪಟ್ಟಣ: ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಜಾನಪದ ನೃತ್ಯಮಾಡಿದರು ಕನ್ನಡ ನಾಡು, ನುಡಿ ಬಗ್ಗೆ ಸದಾ ಅಭಿಮಾನ ಇರಬೇಕು ಎಂದು ಟೈಮ್ಸ್ ಪಿಯು ಕಾಲೇಜು ಉಪನ್ಯಾಸಕ ಎಚ್.ಎಂ.ಶ್ರೀಕಂಠ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಪ್ರಾಚೀನ ಭಾಷೆ. ಕನ್ನಡ ನಮ್ಮ ಉಸಿರಾಗಬೇಕು. ನಮ್ಮಭಾವನೆಯನ್ನು ಸಮರ್ಪಕ ರೀತಿಯಲ್ಲಿ ವ್ಯಕ್ತಪಡಿಸಲು ಮಾತೃಭಾಷೆಯಿಂದ ಸಾದ್ಯ, ಪ್ರಾಥಮಿಕ ಶಿಕ್ಷಣ. ಮಾತೃ ಭಾಷೆಯಲ್ಲಿ ನೀಡಬೇಕು. ಸಂಗೀತ, ಸಾಹಿತ್ಯ, ಸಂಸ್ಕೃತಿ ಮುಖ್ಯವಾದುದು. ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ವ್ಯಕ್ತಿತ್ವದ ವಿಕಸನದ ಜತೆಗೆ ಬದುಕನ್ನು ಕಟ್ಟಿಕೊಡುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ ಮಾತನಾಡಿ, ಕನ್ನಡ ಹೃದಯದ ಭಾಷೆಯಾಗಬೇಕು ಎಂದು ಹೇಳಿದರು.
ಕಾಲೇಜು ಸಹಾಯಕ ಪ್ರಾದ್ಯಾಪಕ ಆರ್.ಕೆ. ಶಿವಪ್ಪ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಆಲೂರುವೆಂಕಟರಾವ್, ಡೆಪ್ಯುಟಿ ಚನ್ನಬಸಪ್ಪ, ಗುರಪ್ಪ ಹಳ್ಳಿಕೇರಿ ಸೇರಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕೀರ್ತನಾ, ಗಗನಾ (ಪ್ರಥಮ), ಚಂದನಶ್ರೀ, ಪವಿತ್ರಾ (ದ್ವಿತೀಯ), ಮಾನ್ಯಾ, ಸುಷ್ಮಾ (ತೃತೀಯ) ಬಹುಮಾನ ಪಡೆದರು. ಸಹಾಯಕ ಪ್ರಾದ್ಯಾಪಕ ಅಜೇಯ್ ಸೇರಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಹಾಯಕ ಪ್ರಾಧ್ಯಾಪಕರಾದ ಎನ್.ಟಿ. ನಾಗರಾಟ. ಬಿ.ಎನ್. ಚಂದ್ರಶೇಖರ್, ಕಲಾವತಿ,ಸಹಾಯಕ ಪ್ರಾಧ್ಯಾಪಕಿ ಎಂ.ನಿರುಪಮಾ,ಗ್ರಂಥಪಾಲಕಿ ಜೆ.ಎನ್.ಕವಿತಾ ಭಾಗವಹಿಸಿದ್ದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಕನ್ನಡದ ಬಾವುಟ, ಭುವನೇಶ್ವರಿ ತಾಯಿ ಮತ್ತು ಜ್ಞಾನಪೀಠ ಪ್ರಶಸ್ತಿಪುರಸ್ಕೃತ ಭಾವಚಿತ್ರ ಹಿಡಿದು ಪಟ್ಟದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ವರದಿ : ಮಂಜುನಾಥ್ ಐ ಕೆ
