ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ಬಲ್ಲೇನಹಳ್ಳಿ ಗ್ರಾಮದಲ್ಲಿ ಸೇವಂತಿಗೆ ಕನ್ನಡ ರಾಜ್ಯೋತ್ಷವ ಮತ್ತು ಷಷ್ಟಿ ಜಾತ್ರೆ ಪ್ರಯುಕ್ತ. ಎರಡನೇ ವರ್ಷದ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿಯನ್ನು ನ.28 ರಿಂದ ನ.30 ರವರೆವಿಗೆ ಆಯೋಜಿಸಲಾಗಿದೆ.
ಟೂರ್ನಿಯನ್ನು ತಹಶೀಲ್ದಾರ್ ಕರ್ನಲ್ ಡಾ. ಯು.ಎಸ್ ಅಶೋಕ್ ಉದ್ಘಾಟಿಸಲಿದ್ದಾರೆ. ಗ್ರಾಮದ ಮುಖಂಡರು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರಥಮ ಬಹುಮಾನವಾಗಿ ರೂ 50;ಸಾವಿರ, ದ್ವಿತೀಯ ಬಹುಮಾನ ರೂ.30ಸಾವಿರ ತೃತೀಯ ಬಹುಮಾನ ರೂ. 20 ಸಾವಿರ, ಚತುರ್ಥ ಬಹುಮಾನ ರೂ 10 ಸಾವಿರ ನಗದು ಬಹುಮಾನವಿದ್ದು , ಆಕರ್ಷಕ ಟ್ರೋಪಿ ನೀಡಲಾಗುತ್ತದೆ.
.ಬಹುಮಾನದ ಪ್ರಾಯೋಜಕತ್ವವನ್ನು ಗ್ರಾಮದ ಯುವ ಮುಖಂಡರಾದ ಬಿ. ನವೀನ್ ಕುಮಾರ್, ಆದ್ಯ ಪ್ರಾಪರ್ಟೀಸ್ ನ ಬಿ.ಎನ್.ಚೇತನ್ ಗೌಡ, ಸಂತೋಷ್, ಮೋಹನ್, ಡಿಂಕಾಶೆಟ್ಟಹಳ್ಳಿ ದಿಲೀಪ್, ವಹಿಸಿಕೊಂಡಿದ್ದು ಕ್ರೀಡಾಕೂಟವು ಹೂವಿನ ಮಾರುಕಟ್ಟೆ ಬಳಿ ನಡೆಯಲಿದೆ . ಟೂರ್ನಿಯನ್ನು ಯಶಸ್ವಿಗೊಳಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು ಆಸಕ್ತ ತಂಡಗಳು ನ. 27 ರೊಳಗೆ ಪ್ರವೇಶ ಶುಲ್ಕದೊಂದಿಗೆ ಹೆಸರು ನೊಂದಾಯಿಸಿಕೊಳ್ಳುವಂತೆ ಟೂರ್ನಿ ಸಂಘಟಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಬಿ.ಕೆ ಸಚಿನ್ (9845788128) ಬಿ.ಎನ್.ಉಮೇಶ್(9686316826)
ಬಿ.ಪಿ.ಪ್ರದೀಪ್ (9731677609) ಅವರುಗಳನ್ನು ಸಂಪರ್ಕಿಸಬಹುದಾಗಿದೆ.
– ಶ್ರೀನಿವಾಸ್ ಆರ್.
