ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಶಾಸಕರ ಅನುದಾಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇವರಾಯಪಟ್ಟಣದಲ್ಲಿ ನೂತನವಾಗಿ ಆರಂಭವಾದ ಶುದ್ಧ ಗಂಗಾ ಘಟಕವನ್ನು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಉದ್ಘಾಟನೆ ಮಾಡಿದರು.
ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದಲ್ಲಿ 575 ಶುದ್ಧಗಂಗಾ ಘಟಕ ರಚನೆ ಆಗಿದ್ದು ಅದರಲ್ಲಿ ತುಮಕೂರು ತಾಲೂಕಿನಲ್ಲಿ ಸುಮಾರು 23 ಶುದ್ಧಗಂಗಾ ಘಟಕ, ನಗರ ಪ್ರದೇಶದಲ್ಲಿ 13 ಘಟಕ ರಚನೆ ಮಾಡಿ ತುಮಕೂರು ತಾಲೂಕಿಗೆ ಶುದ್ಧ ಕುಡಿಯುವ ನೀರು ವರದಾನವಾಗಿದೆ ಎಂದರು.
ಪೂಜ್ಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಈ ಸಮಾಜಮುಖಿ ಸೇವೆ ಈ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ.ಪೂಜ್ಯರಿಗೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಮಂಜುನಾಥ ಸ್ವಾಮಿ ಅನುಗ್ರಹ ನೀಡಲಿ ಎಂದು ಶುಭ ಹಾರೈಸಿದರು.
ಕಳೆದ 13 ವರ್ಷಗಳಿಂದ ಯೋಜನೆಯು ಉತ್ತಮವಾಗಿ ಕೆಲಸ ಮಾಡುತ್ತಿದ್ದು 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ತುಮಕೂರು ಜಿಲ್ಲೆ ಮಾಡಿದೆ ಎಂದು ಹೇಳಿ ಶುಭ ಹಾರೈಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡಿ ಶುದ್ಧಗಂಗಾ ಘಟಕದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವ ಕುರಿತು ಹಾಗೂ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ. ಮಾಜಿ ಪಾಲಿಕೆ ಸದಸ್ಯರಾದ ಬಸವರಾಜು, ಮುನಿಯಪ್ಪ ಹಾಗೂ ಮಂಜುನಾಥಗೌಡ, ಅಂಜಿನಪ್ಪ, ಶರತ್, ಕೃಷ್ಣಪ್ಪ, ಪಾಲನೇತ್ರಯ್ಯ, ವೇಣು, ಕೃಷ್ಣಮೂರ್ತಿ ಹಾಗೂ ಊರಿನ ಮುಖಂಡರು, ಮೇಲ್ವಿಚಾರಕರು, ಶುದ್ಧಗಂಗಾ ಮೇಲ್ವಿಚಾರಕರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
