ಚನ್ನರಾಯಪಟ್ಟಣ- ನೆಲದನಿ ಫೌಂಡೇಶನ್ ವತಿಯಿಂದ ಡಿ.6 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭೀಮ ನಮನ ಕಾರ್ಯಕ್ರಮವನ್ನು ರಂಗಕರ್ಮಿ ದಿಂಡಗೂರು ಸಂತೋಷ್ ನೇತೃತ್ವದಲ್ಲಿ ಭೀಮರಾವ್ ಅಂಬೇಡ್ಕರ್ ರವರ ಪುಣ್ಯ ಸ್ಮರಣೆಯ ದಿನದ ಅಂಗವಾಗಿ ಅಂಬೇಡ್ಕರ್ ಕುರಿತ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ನೆಲದನಿ ಫೌಂಡೇಶನ್ ನ ಕಾರ್ಯದರ್ಶಿ ನಂದಿನಿ ತಿಳಿಸಿದರು.
ಅದೇ ದಿನ ಸಂಜೆ 5:00 ಗಂಟೆಗೆ ಐದನೇ ವಾರ್ಡಿನ ತಗ್ಯಮ್ಮ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಭೀಮರಾವ್ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ನಡೆಸಲಾಗುವುದು, ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಎಂ ಜೆ ರತ್ನಾಕರ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನೀನಾಸಂ ಸಂತೋಷ್, ನಂದಿನಿ, ರಾಮು, ವೆಂಕಟೇಶ್, ಮಂಜುನಾಥ್ ಹಾಜರಿದ್ದರು.
– ಮಂಜುನಾಥ್ ಐ .ಕೆ
