ಹಾಸನ : ಜಿಲ್ಲೆಯಲ್ಲಿ ಡಿಸೆಂಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಉಸ್ತುವಾರಿ ಹಾಗೂ ವಿವಿಧ ಇಲಾಖೆಗಳ ಸಚಿವರು ಆಗಮಿಸಲಿದ್ದು, ಸುಮಾರು 70 ಸಾವಿರ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೇವೆಗಳನ್ನು ಸಮರ್ಪಣೆ ಮಾಡುವ ಮಹಾಸಮಾವೇಶ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಹಿತಿ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಅರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತನ್ನು ನೇರವಾಗಿ ಹಸ್ತಾಂತರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. 70 ಸಾವಿರ ಫಲಾನುಭವಿಗಳಲ್ಲಿ ಹೆಚ್ಚಿನವರು ಕಂದಾಯ ಇಲಾಖೆಯ ಸೇವೆಗಳ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
“ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಿ, ಮಧ್ಯಾಹ್ನ 3 ಗಂಟೆಯ ಒಳಗೆ ಸಂಪನ್ನವಾಗುತ್ತದೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಸಾಧನೆ
ಜಿಲ್ಲಾಧಿಕಾರಿ ಲತಾಕುಮಾರಿ ಕಳೆದ ಎರಡು ವರ್ಷಗಳಲ್ಲಿ ಕಂದಾಯ ಇಲಾಖೆಯಲ್ಲಿ ಗಣನೀಯ ಸುಧಾರಣೆ ನಡೆದಿದೆ ಎಂದು ವಿವರಿಸಿದರು.
ಹತ್ತರ ವರ್ಷಗಳಿಂದ ಅಟಕೊಂಡಿದ್ದ ಪೋಡಿ, ದರಕಾಸ್ತು ಕೆಲಸಗಳನ್ನು ಅಭಿಯಾನ ರೂಪದಲ್ಲಿ ಪೂರ್ಣಗೊಳಿಸಲಾಗಿದೆ.
12 ಸಾವಿರ ಹೊಸ ಪಹಣಿಗಳು ಸೃಜಿಸಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೂ ಪೋಡಿ ಆಗದೇ ವರ್ಷಗಳ ಕಾಲ ರೈತರು ಅಲೆದಾಡುತ್ತಿದ್ದ ಸಮಸ್ಯೆಗೆ ತೆರೆ ಬಿದ್ದಿದೆ.
ರಾಜ್ಯದಲ್ಲಿ ಹಾಸನ ಪೋಡಿ–ದರಕಾಸ್ತು ಕೆಲಸದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಫಲಾನುಭವಿಗಳಿಗೆ ಪಹಣಿ, ಮ್ಯುಟೇಷನ್, ಆಕಾರ್ ಬಂದ್, ಟಿಪ್ಪಣಿ ಸ್ಕೆಚ್ ಒಳಗೊಂಡ ಸಂಪೂರ್ಣ ಫೋಲ್ಡರ್ಗಳನ್ನು ವಿತರಿಸಲಾಗುವುದು.
ಇ–ಪೌತಿ: ರಾಜ್ಯದಲ್ಲೇ ಮೊದಲ ಸ್ಥಾನ
ರಾಜ್ಯದ 19 ಲಕ್ಷ ಆರ್ಟಿಸಿ ದಾಖಲೆಗಳ ಪೈಕಿ 18 ಲಕ್ಷ ದಾಖಲೆಗಳಿಗೆ ಆಧಾರ್ ಜೋಡಣೆ ಪೂರ್ಣಗೊಂಡಿದ್ದು, ಇದು ರಾಜ್ಯದಲ್ಲೇ ಮೊದಲ ಸಾಧನೆ ಎಂದರು.
ವಾರಸುದಾರರಿಲ್ಲದ 2 ಲಕ್ಷ ಪಹಣಿದಾರರಿಗಾಗಿ ಇಂಡೀಕರಣ ಮಾಡಿ ಪಹಣಿ ಸರಿಪಡಿಸಲಾಗಿದೆ.
15 ಸಾವಿರ ಹೊಸ ಇ–ಪೌತಿ ಖಾತೆಗಳು ತೆರೆಯಲಾಗಿದೆ.
ಕಂದಾಯ ಗ್ರಾಮಗಳಲ್ಲಿದ್ದ ಗುಂಪು ಕುಟುಂಬಗಳಿಗೆ 5 ಸಾವಿರ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.
ಒಟ್ಟಾರ Gravely ಪೊಲೀಸಿಗೂ ಪೋಲಿ! ಅಪರಾರ್ಥದಿಂದ. ಕಂದಾಯ ಇಲಾಖೆಯ ಮೂಲಕ 50 ಸಾವಿರ ಕುಟುಂಬಗಳಿಗೆ ನೇರ ಲಾಭ ತಲುಪಿದೆ ಎಂದು ಅವರು ವಿವರಿಸಿದರು
300 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ಉದ್ಘಾಟನೆ–ಶಂಕುಸ್ಥಾಪನೆ
ಸಿಎಂ ಹಾಗೂ ಸಚಿವರು ಒಟ್ಟು 300 ಕೋಟಿ ರೂಪಾಯಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹಾಸನದ ಪ್ರಜಾಸೌಧ ಮತ್ತು ಸಕಲೇಶಪುರದ ಮಿನಿ ವಿಧಾನಸೌಧ ಸೇರಿದಂತೆ ಹಲವು ಪ್ರಮುಖ ಕಟ್ಟಡಗಳು ಉದ್ಘಾಟನೆಗೆ ಸಿದ್ಧವಾಗಿವೆ.
ಆರೋಪಗಳಿಗೆ ಉತ್ತರ
ಸರ್ಕಾರಿ ಭೂಮಿಯನ್ನು ಪ್ರಭಾವಿಗಳಿಗೆ ಮಂಜೂರು ಮಾಡಲಾಗಿದೆ ಎಂಬ ಮಾಜಿ ಸಚಿವ ರೇವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,
“ಅವರಿಗೆ ಬಹುಶಃ ಮಾಹಿತಿ ಕೊರತೆ ಇರಬಹುದು. ನಾನು ಯಾವುದೇ ಅಕ್ರಮ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಕುರಿತು ಕೇಳಿದ ಪ್ರಶ್ನೆಗೆ ಅವರು,
“306 ಪ್ರಕರಣ ತಲೆಮೇಲೆ ಇರುವ ಮಹಿಳೆಗೆ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಸರಿಯಲ್ಲ. ಮಹಿಳೆ ಎಂಬ ಕಾರಣಕ್ಕೆ ನೀಡಲಾಗಿದೆ, ಆಯ್ಕೆ ಮಾಡಿದ್ದು ನಾನು ಅಲ್ಲ, ಎಸಿ” ಎಂದು ಹೇಳಿದ್ದಾರೆ.
ಜಿಪಂ ಸಿಇಒ ಪೂರ್ಣಿಮಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
