ಕೆ.ಆರ್.ಪೇಟೆ:ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಹೊಳಲು ಗ್ರಾಮದ ಎಸ್.ಎಲ್.ಎನ್ ಸಮುದಾಯ ಭವನದಲ್ಲಿ ಕುರುಹೀನಶೆಟ್ಟಿ ಮಹಿಳಾ ಸಮಾಜ ವತಿಯಿಂದ ಬಿ.ಎನ್ ನಾಗಮ್ಮ ಪುಣ್ಯ ಸ್ಮರಣೆ ಅಂಗವಾಗಿ ನ್ಯೂ ಅಪೂರ್ವ ಸೂಪರ್ ಸ್ಪೆಷಲಿಟಿ ಆಸ್ಪತ್ರೆ, ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ: ಕೆ.ಆರ್.ಪೇಟೆ: ಮುರುಕನಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಎಳನೀರು ಜಗದೀಶ್ ಅವಿರೋಧವಾಗಿ ಆಯ್ಕೆ
ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು ಎಂದ ಅವರು ಇಂತಹ ಆರೋಗ್ಯ ಶಿಬಿರ ಹಳ್ಳಿಗಳಲ್ಲಿ ಹೆಚ್ಚು ನಡೆಯಬೇಕು ಇದರಿಂದ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವನ ಶೈಲಿಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಈ ಸಂದರ್ಭದಲ್ಲಿ ಕುರುಹೀನಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಸುಕನ್ಯ ರಂಗನಾಥ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಪುರಸಭಾ ಸದಸ್ಯ ಪ್ರವೀಣ್, ಡಾ ನಿರುಪ್, ರಾಜ್, ಡಾ. ಎಂ. ಎನ್ ಮಧುಮೇಹ, ಡಾ ಯತೀರಾಜ್,ಶಿಲ್ಪ, ತನುಶ್ರೀ, ಡಾ ಅನನ್ಯ, ಡಾ ನವ್ಯ, ಶ್ವೇತ ಅವಿನಾಶ್, ಎಸ್.ಎಲ್.ಎನ್ ರೈಸ್ ಮಿಲ್ ಮಾಲೀಕ ಚಲುವರಾಜು,ಯೋಗೇಶ್, ಎನ್. ಪರಮೇಶ್, ಮಮತಾ ಸತ್ಯನಾರಾಯಣ, ವನಿತಾ ಮುರುಳೆಶ್, ಅನುಪಮಾ ಅಶೋಕ್, ಶಾರದಾ ನಾರಾಯಣ್, ಶಾರದ ದುಂಡಶೆಟ್ಟಿ,ಯಶೋಧ ರಂಗನಾಥ್,ಸರಸ್ವತಿ ರಾಮಕೃಷ್ಣ,ಪದ್ಮಿನಿ ಪ್ರಸನ್ನ ಕುಮಾರ್,ಭಾಗ್ಯ ವೆಂಕಟೇಶ್,ಭಾಗ್ಯ ಶ್ರೀಧರ್,ವಂದನಾರ್ಪಣೆ ಶಶಿಕಲಾ ನಾಗೇಂದ್ರ,ಕುರುಹಿನ ಶೆಟ್ಟಿ ಮಹಿಳಾ ಸಮಾಜದ ಎಲ್ಲಾ ಪದಾಧಿಕಾರಿಗಳು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
