ಟಿ.ನರಸೀಪುರ : ಸಂತ ನೋರ್ಬರ್ಟ್ ಶಾಲೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿರುವ ಉತ್ತಮವಾದ ಶಾಲೆ ಇದಾಗಿದೆ ಮುಂದಿನ ದಿನಗಳಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದು ವಾಟಾಳು ಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವದಿಸಿದರು.
ಪಟ್ಟಣದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಸಂತ ನೋರ್ಬರ್ಟ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು “ನೋರ್ಬೀ ಗಾಲಾ ಡೇ” ಎಂಬ ಹೆಸರಿನಿಂದ ಆಚರಿಸಲಾಯಿತು.ಈ ಸಮಾರಂಭಕ್ಕೆ ಆಗಮಿಸಿದ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ ವರ್ಷ ಪೂರ್ತಿ ಆಟ,ಪಾಠದಲ್ಲಿ ಮಗ್ನರಾಗಿ ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ ಆಚರಿಸುವ ಶಾಲಾ ವಾರ್ಷಿಕೋತ್ಸವ ಮಕ್ಕಳ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವಾಗಿರುತ್ತದೆ.ಕಾರ್ಯಕ್ರಮಕ್ಕೆ ಪೋಷಕರು ಆಗಮಿಸಿ ಮಕ್ಕಳ ಸಾಧನೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡು ಹೋಗುತ್ತಾರೆ.ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ಮಕ್ಕಳ ಉತ್ತಮ ಬೆಳವಣಿಗೆಗೆ ಸದಾಕಾಲವೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಎಸ್ ಸಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಸಂಸ್ಥೆ ಕಲ್ಪಿಸಿದೆ.ಮಕ್ಕಳು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಹೊರಹೊಮ್ಮಿ ಎಂದರು.
ಆರಕ್ಷಕ ನಿರೀಕ್ಷಕರಾದ ಧನಂಜಯ್ ರವರು ಮಾತನಾಡಿ ಶಿಸ್ತು ಬದ್ಧ ಕಲಿಕೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದೆ ಎಂದು ಕೇಳಲ್ಪಟ್ಟಿದ್ದೇನೆ ಶಾಲೆ ಹೀಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಿ ಎಂದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಪೋಸ್ ಮುರಿಕನ್ , ಶಾಲಾ ವ್ಯವಸ್ಥಾಪಕರಾದ ಫಾದರ್ ಬೆನ್ನಿ ಥಾಮಸ್ , ಹಣಕಾಸಿನ ವ್ಯವಸ್ಥಾಪಕರಾದ ಫಾದರ್ ರೆನಿನ್ ಸೆಬಾಸ್ಟಿಯನ್, ಫಾದರ್ ವಿನೀತ್ ಜೋಶಮನ್ , ಸಿಸ್ಟರ್ ಸ್ಪಂದನ , ಸಿಸ್ಟರ್ ಶಾರ್ಲಿನ್ , ಡಾಕ್ಟರ್ ಲ್ಯಾನ್ಸಿ ಡಿಸೋಜಾ ಮತ್ತು ಪ್ರಾಂಶುಪಾಲರಾದ ಸಿಸ್ಟರ್ ಸುಮಿ ರೋಸಾ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಇದ್ದರು.
ಎಂ.ನಾಗೇಂದ್ರಕುಮಾರ್
