ಟಿ.ನರಸೀಪುರ : ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನ ಸಮಸ್ತ ದೇಶದ ರೈತರಿಗೆ ಬದುಕುವ ಹಕ್ಕನ್ನು ನೀಡಿದೆ.ಜೊತೆಗೆ ನಾವು ಹೇಗೆ ಬದುಕಬೇಕು ಹಾಗೂ ಜೀವನ ಶೈಲಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆಂದು ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರರಾದ ಪುಟ್ಟಸ್ವಾಮಿರವರು ಸ್ಮರಿಸಿದರು.

ತಾಲ್ಲೂಕಿನ ಹಸಿ ಭತ್ತ,ಬಿಸಿ ಬೆಲ್ಲದ ನಾಡೆಂದ ಪ್ರಸಿದ್ದವಾಗಿರುವ ಬನ್ನೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡ ರವರ ನೇತೃತ್ವದಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ದಿವಂಗತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರೈತ ಮುಖಂಡರು ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರರಾದಂತಹ ದಿವಂಗತ ಪ್ರೊ.ನಂಜುಂಡಸ್ವಾಮಿ ಹಾಗೂ ದಿವಂಗತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ ರೈತರು ಬೆವರು ಹರಿಸಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ದಲ್ಲಾಳಿಗಳು ಹರಾಜು ಮಾಡಿದ ದರಕ್ಕೆ ಮಾರಾಟ ಮಾಡಿ ಬರುತ್ತಿದ್ದೇವೆ ಇದಕ್ಕಿಂತ ಅವಮಾನ ನಮಗೆ ಬೇಕೇನ್ರಿ… ಈ ಪದ್ದತಿ ನಿಲ್ಬೇಕು ಕಣ್ರೀ… ಇದು ನಿಂತರೆ ಮಾತ್ರ ರೈತರು ಪಟ್ಚ ಶ್ರಮಕ್ಕೆ ತಕ್ಕ ಬೆಲೆ ಸಿಗುವುದೆಂದು ದಲ್ಲಾಳಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಕರಿ ಬ್ರಿಟೀಷರು 200 ವರ್ಷಗಳು ನಮ್ಮ ಚಿನ್ನ,ಬೆಳ್ಳಿ, ವಾಣಿಜ್ಯ ಬೆಳೆಗಳನ್ನು ದೋಚಿಕೊಂಡು ಹೋದರು.ಈಗ ಬಿಳಿ ಬ್ರಿಟೀಷರು ಅಂದರೆ ಎಂ.ಪಿ,,ಎಂ.ಎಲ್.ಎ.,ಎಂ.ಎಲ್.ಸಿ.,ಗಳು ಈಟ್ ಇಂಡಿಯಾ ಮಾಡುವ ಮೂಲಕ ಈಸ್ಟ್ ಇಂಡಿಯಾ ಕಂಪನಿಗೆ ಸಡ್ಜು ಹೊಡೆಯುತ್ತಿದ್ದಾರೆಂದು ಪ್ರಸ್ತುತ ರಾಜಕಾರಣಿಗಳು ಹಾಗೂ ಸರ್ಕಾರದ ವಿರುದ್ಧ ಗುಡುಗಿದರು.

ಹಸಿರು ಶಾಲು ನಮ್ಮ ಸಂಬಂಧವನ್ನು ಗಟ್ಟಿಗೊಳಿಸಿ ಒಟ್ಟುಗೂಡಿಸುತ್ತವೆ.ಆದರೀಗ ಈ ಶಾಲನ್ನು ರಾಜಕೀಯವಾಗಿ ಹೆಚ್ಚಾಗಿ ಬಳಸಲಾಗುತ್ತಿದೆ.ಯಾವ ಪಕ್ಷದ ನಾಯಕರನ್ನೇ ತಗೊಳ್ಳಿ ನಾವು ರೈತರಿಗೆ ಹುಟ್ಟಿರೋದು ಅಂತೇಳ್ತಾರೆ ಆದ್ರೆ ರೈತಪರವಾದಂತಹ ಕೃಷಿ ನೀತಿಗೆ ಸಂಬಂಧಪಟ್ಟಂತಹ ತಿದ್ದು ಪಡಿ ಮಾಡಲು ಒಂದೇ ಒಂದು ಅಧುವೇಶನದಲ್ಲೂ ತಿದ್ದುಪಡಿ ಮಾಡಲು ಕಳೆದ 78 ವರ್ಷಗಳಿಂದ ಚರ್ಚೆ ಆಗ್ಲಿಲ್ಲ ಅಂದ್ರೆ ಲೋಕಸಭೆಗೆ ಏನಿಕೆ ಹೋಗಿದ್ದಾರೆ ಕತ್ತೆ ಮೇಯ್ಸಕ್ಕೋಗಿದರಾ ಅಂತ ನಮ್ಮ ನಾಯಕರಾದ ಪ್ರೊ.ನಂಜುಂಡಸ್ವಾಮಿ ರವರು ಅಂದೇ ಜಾಡಿಸಿದ್ದಾರೆ.ಆದ್ರೆ ಇಲ್ಲಿವರ್ಗೂ ಸರ್ಕಾರಗಳು ನಮ್ಮ ಹಕ್ಕುಗಳನ್ನು ಎತ್ತಿ ಹಿಡಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಸರ್ಕಾರಿ ಶಾಲೆಗಳನ್ನು ಮುಟ್ಟಿಸಲು ವ್ಯವಸ್ಥಿತ ಪಿತೂರಿ,ಯೋಜನೆಗಳು ಸಿದ್ದಗೊಂಡಿದ್ದು,ಕಾರ್ಪೋರೇಟ್ ಸಂಸ್ಥೆಗಳಿಗೆ ನಮ್ಮನ್ನಾಳುವ ಸರ್ಕಾರಗಳು ಉತ್ತೇಜನ ನೀಡುತ್ತಾ ರೈತರು, ಬಡವರು,ಶೋಷಿತರು,ಹಿಂದುಳಿದವರಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ದೊರೆಯದಂತೆ ಮಾಡಬೇಕೆನ್ನುವುದು ಸರ್ಕಾರದ ಹುನ್ನಾರವಾಗಿದೆ ರೈತರು ಸೂಚ್ಯವಾಗಿ ಅರ್ಥ ಮಾಡಿಕೊಂಡು ಬಲಿಷ್ಟವಾಗಿ ಒಗ್ಗಟ್ಟು ಪ್ರದರ್ಶಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಟ ಅನಿವಾರ್ಯವಾಗಿದೆ ಎಂದರು.

ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗಗಳಿಂದ ನ್ಯಾಯ ಸಿಗುತ್ತಿಲ್ಲ.ನ್ಯಾಯ ಕೊಡಿಸುವ ಪತ್ರಿಕಾರಂಗ ಕೂಡ ಮಾರಾಟವಾಗಿ ನ್ಯಾಯ ಮರೀಚಿಗೆಯಾಗಿದೆ.ಮತ್ತೆಲ್ಲಿ ನಮಗೆ ನ್ಯಾಯ ಎಂಬ ಪ್ರಶ್ನೆ ನಮ್ಮ ಮುಂದಿದೆ.ಇದು ನಮ್ಮ ಎದುರಿರುವ ಪ್ರಸ್ತುತದ ದೊಡ್ಡ ಸವಾಲು.ನ್ಯಾಯಕ್ಕಾಗಿ ಹೋರಾಟವೊಂದೇ ಅಸ್ತ್ರ.ನಾವು ಕಾಳು,ಕಡ್ಡಿಗಳನ್ನು ಒಕ್ಕಣೆ ಮಾಡಿ ಜಳ್ಳು,ಕಸ,ಕಡ್ಡಿ ತೆಗೆದು ಹೊರಗಾಕಿ ಗಟ್ಟಿ ಕಾಳುಗಳನ್ನು ಉಳಿಸಿಕೊಳ್ಳುತ್ತೇವೆ.ಆಗೆ ರೈತರು ಗಟ್ಟಿ ಕಾಳುಗಳು.ಗಟ್ಟಿಯಾಗಿ ನಿಂತು ಹೋರಾಟಕ್ಕೆ ಸಿದ್ದರಾಗಿ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡ ಮಾತನಾಡಿ ಬನ್ನೂರು ಹೋಬಳಿ ಅನೇಕ ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ.ವಿಶ್ವ ರೈತ ದಿನಾಚರಣೆಯನ್ನು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರವರು ತಮ್ಮ ಅಧಿಕಾರವಧಿಯಲ್ಲಿ ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರ ಬಾಳನ್ನು ಹಸನಾಗಿಸಿದ್ದರು.ಅಂತಹ ನಾಯಕರ ಹುಟ್ಟು ಹಬ್ಬವನ್ನು ರೈತ ದಿನಾಚರಣೆಯಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರು ಹಾಗೂ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದಂತಹ ಹಿಂಡುವಾಳ್ ಚಂದ್ರಶೇಖರ್,ಹೆಗ್ಗೂರು ಹೊನ್ನೇಗೌಡರು,ಶ್ರೀರಂಗಪಟ್ಟಣ ಮಂಜೇಶ್ ಗೌಡ್ರು,ಮದ್ದೂರು ಸೊಸಿ ಪ್ರಕಾಶ್,ನಾಗಮಂಗಲ ಸುರೇಶ್,ತುಮಕೂರು ಯೋಗೇಶ್,ಬಿಜಾಪುರ ಜಿಲ್ಲೆ ನಡುಗುಂದದ ತಿರುಪತಿ ನರಸಪ್ಪ ಬಂಡಿಹೊಡೆಯರ್
ರಾಮಚಂದ್ರಪ್ಪ ಕೂಚಿ ಬಾಳ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರೈತ ಮುಖಂಡರು ಹಾಜರಿದ್ದರು.
ಎಂ.ನಾಗೇಂದ್ರಕುಮಾರ್
