ಕೊರಟಗೆರೆ;- ಅಂಬೇಡ್ಕರ್ ಎಂದರೆ ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ,ಇಡಿ ಭಾರತದ ಪ್ರತಿಯೋಬ್ಬ ವ್ಯಕ್ತಿಯು ನೆನಪು ಮಾಡಿಕೊಳ್ಳುವ ದೇವರು ಎಂದರೆ ತಪ್ಪಾಗಲಾರದು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳು ಆಯೋಜಿಸಿದ್ದ ಡಾ ಬಿ ಆರ್ ಅಂಬೇಡ್ಕರ್ 69 ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ನರಸಿಂಹಮೂರ್ತಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು, ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದ ಮಹನೀಯರು ಶ್ರಮಿಸಿದರು.ವಿಶ್ವವಿದ್ಯಾಲಯಗಳಲ್ಲಿನ ಅಧ್ಯಯನ ಕೇಂದ್ರಗಳು ಮಹನೀಯರ ವಿಚಾರಧಾರೆಗಳು, ಆದರ್ಶಗಳನ್ನು ಜನರಿಗೆ ತಲುಪಿಸಬೇಕು’ ‘ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶ ಕಲ್ಪಿಸಿದ್ದಾರೆ. ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಮುದ್ದು ರಂಗಯ್ಯ ಮಾತನಾಡಿ, ಅವರ ಪ್ರತಿ ಹೆಜ್ಜೆಯ ಗುರುತುಗಳುನ್ನು ಇಲ್ಲಿಯೆ ಬಿಟ್ಟು ಹೋಗಿದ್ದಾರೆ ನನ್ನ ಜನ ರಾಜ್ಯಾಧಿಕಾರ ರಾಷ್ಟ್ರಧಿಕಾರ ಪಡೆಯಬೇಕು ಎಂದು ಕನಸು ಕಂಡವರು ಸಮಾನತೆ ಸಹೋದರತೆಗಾಗಿ ದುಡಿಯುವ ಮನೋಭಾವ ಉಳ್ಳವರು ನಾನು ಮನುಷ್ಯನಿಗಿಂತ ಅತಿ ಹೆಚ್ಚು ಪುಸ್ತಕಗಳನ್ನು ಪ್ರೀತಿಸುತ್ತೇನೆ ಎಂದು ಹೇಳಿದವರು ಬಾಬಾಸಾಹೇಬರು ಅವರು ಬೇರೆ ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು ಮನಸ್ಸು ಮಾಡಿದರೆ ಅಲ್ಲಿಯೇ ಐಶಾರಾಮಿ ಜೀವನ ಮಾಡಬಹುದಿತ್ತು ಆದರೆ ನನ್ನ ದೇಶ ನನ್ನ ಜನ ಮುಂದೆ ಬರಬೇಕು ಎಂದು ಭಾರತಕ್ಕೆ ಮರಳಿದರು ಒಂದು ವೇಳೆ ಅವರು ಪ್ರದೇಶದಲ್ಲಿ ಉಳಿದಿದ್ದರೆ ನಮ್ಮ ಗತಿ ಏನಾಗುತ್ತಿತ್ತು ಎಂದು ಒಂದು ನಿಮಿಷ ಯೋಚಿಸಬೇಕಿದೆ.

ನಮ್ಮಲ್ಲಿ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತ ಎಂದು ಬಿಂಬಿಸುವುದು ಬಹಳ ದುಃಖದ ಸಂಗತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದಿನ ದಿನಗಳಲ್ಲಿ ಮೂವತ್ತಕ್ಕೂ ಹೆಚ್ಚು ಪದವಿ ಪಡೆದವರು,
ನಾವು ಆರ್ಥಿಕವಾಗಿ ಸಮಾನತೆ ನಾವು ಕಂಡಿಲ್ಲ ಸಾಮಾಜಿಕವಾಗಿ ಮತ ಚಲಾಯಿಸುವ ಹಕ್ಕು ಬಿಟ್ಟರೆ ಬೇರೆ ಯಾವ ಕ್ಷೇತ್ರದಲ್ಲಿ ಇನ್ನೂ ಸಮಾನತೆ ಕಂಡಿಲ್ಲ ದಲಿತರಿಗೆ ಯಾರಿಗೂ ಹತ್ತು ಹದಿನೈದು ಎಕರೆ ಭೂಮಿ ಇಲ್ಲ , ದಲಿತರು ಹೆಚ್ಚು ವಿದ್ಯಾವಂತರು ಆದರೆ ಬಾಬಾ ಸಾಹೇಬ್ ಕಂಡ ಕನಸು ನನಸಾಗಲಿದೆ ಎಂದರು.
ದಾಡಿ ವೆಂಕಟೇಶ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದರು ಸ್ವಾರ್ಥಕ್ಕಾಗಿ ಬದುಕುವ ವ್ಯಕ್ತಿಗಳು ಬಹು ಬೇಗ ಸಮಾಜದ ನೆನಪಿನಲ್ಲಿ ಸಾಯುವರು ಸಮಾಜಕ್ಕಾಗಿ ಬದುಕುವವ ಬಹು ದಿನಗಳ ಕಾಲ ಜನರ ಮನಸ್ಸಿನಲ್ಲಿ ಬದುಕಿರುತ್ತಾರೆ, ಹೀಗೆ ನಮ್ಮ ಬಾಬಾ ಸಾಹೇಬ್ ರವರು ಸಮಾಜಕ್ಕಾಗಿ ಹಾಗೂ ದೇಶಕ್ಕಾಗಿ. ಮಹಿಳೆಯರ ಹಕ್ಕುಗಳಿಗಾಗಿ. ದೀನ ದಲಿತರಿಗೆ ಶಿಕ್ಷಣ, ಸಮಾನತೆಯ ಬದುಕು ಎಲ್ಲರಿಗೂ ಸಿಗಬೇಕು ಎಂಬ ಮನೋಭಾವ ಇಟ್ಟುಕೊಂಡಿದ್ದರು ಹಾಗಾಗಿ ಬಾಬಾಸಾಹೇಬರು ಇಂದಿಗೂ ಸಹ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಇದ್ದಾರೆ.
ಬೇರೆ ರಾಷ್ಟ್ರಗಳಲ್ಲಿ ಸಂವಿಧಾನದಲ್ಲಿ ಬಹಳ ಗಟ್ಟಿಯಾಗಿಲ್ಲ ಹಾಗಾಗಿ ಅಲ್ಲಿ ನಡೆಯುವ ಘಟನೆಗಳು ನೀವು ಮಾಧ್ಯಮಗಳಲ್ಲಿ ನೋಡಿ ಓದಿ ತಿಳಿದಿದ್ದೀರಾ, ಆದರೆ ಭಾರತದ ಸಂವಿಧಾನ ಬಹಳ ಗಟ್ಟಿಯಾಗಿದೆ ಹಾಗಾಗಿ ನಮ್ಮ ದೇಶ ಬಹಳ ಸುಭದ್ರವಾಗಿದೆ.ಪ್ರತಿಯೊಬ್ಬ ಭಾರತಿಯರು ಸಂವಿಧಾನದಲ್ಲಿರುವ ಮೊದಲ ಪುಟ ಪೀಠಿಕೆ ಓದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೂ ಹಾಗೂ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು ಹಾಗೂ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಸಮಾಜದ ಹಿರಿಯ ಹೋರಾಟಗಾರ ಬಂದಗುಂಟೆ ನಾಗರಾಜ್ ನವರಿಗೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯಮುನಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಡಿ ಪ್ರಭಾಕರ, ಓಬಳಪ್ಪ ಶಿವರಾಮಯ್ಯ, ರಾಜಣ್ಣ ರಂಗರಾಜು, ಶ್ರೀನಿವಾಸ್, ಕೆರೆಯಾಗಲಹಳ್ಳಿ ರಾಜಣ್ಣ, ಹೊಳವನಹಳ್ಳಿ ನರಸಿಂಹಮೂರ್ತಿ, ರೇಣುಕಾಪ್ರಸಾದ್, ಮಂಜುನಾಥ್, ನಾಗರಾಜ್, ಮಲಪನಹಳ್ಳಿ ನಾಗೇಶ್, ಮಂಜಮ್ಮ ಸಿದ್ದಗಂಗಮ್ಮ ಸೇರಿದಂತೆ ಸಮಾಜದ ಹಿರಿಯರು ಹಾಗೂ ಮುಖಂಡರು ಮಹಿಳೆಯರು ಇದ್ದರು.
– ಶ್ರೀನಿವಾಸ್, ಕೊರಟಗೆರೆ.

[…] […]