ತುಮಕೂರು: ಕನ್ನಡಪರ ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವ ಇತ್ತೀಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪ್ರಶಸ್ತಿ ಪಡೆದ ಸಮಾಜ ಸೇವಕ,ಕನ್ನಡಪರ ಹೋರಾಟಗಾರರಾದ ಶಬ್ಬೀರ್ ಅಹ್ಮದ್ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು. ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಅಂಬೇಡ್ಕರ್ ಪ್ರಚಾರ ಸಮಿತಿಯ ರಾಮಚಂದ್ರರಾವ್, ಮುಖಂಡರಾದ ರಾಜಣ್ಣ, ವಿಜಯಕುಮಾರ್, ರಮ್ಯಾ, ಆದಿಲ್ ಪಾಷಾ, ರಾಮಾಂಜನಪ್ಪ, ನಟರಾಜಶೆಟ್ಟಿ, ಇಂದ್ರಕುಮಾರ್, ಶಿವರಾಜ್ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ –

[…] ಇದನ್ನೂ ಓದಿ – ತುಮಕೂರು:ಕನ್ನಡಪರ ಹೋರಾಟಗಾರ ಶಬ್ಬೀರ್ ಅಹಮ… […]