ತುಮಕೂರು: ಕನ್ನಡಪರ ಸಂಘಟನೆಗಳು ಕನ್ನಡ, ಕನ್ನಡಿಗ, ಕರ್ನಾಟಕದ ರಕ್ಷಣೆಗೆ ಬದ್ಧವಾಗಿ ಸೇವೆ ಸಲ್ಲಿಸುತ್ತಿವೆ. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಧಕ್ಕೆಯಾದಾಗ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಹಿರೇಮಠದ ಡಾ.ಶಿವಾನಂದ ಶೀವಾಚಾರ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ನಗರದ ಹೊರವಲಯದ ಹಳೆ ನಿಜಗಲ್ ಬಳಿಯ ಹಿರೇಮಠದ ತಪೋವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕನ್ನಡಪರ ಹಾಗೂ ಇತರೆ ಸಂಘಟನೆಗಳ ಒಕ್ಕೂಟಕ್ಕೆ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಒಕ್ಕೂಟದ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಹಿರೇಮಠದ ಸ್ವಾಮೀಜಿ, ಕನ್ನಡದ ರಕ್ಷಣೆ ಕೇವಲ ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು ಮಾತ್ರವಲ್ಲ, ಎಲ್ಲರ ಜವಾಬ್ದಾರಿ ಇದೆ. ಕನ್ನಡ ನಾಡು, ನುಡಿಗೆ ಸಮಸ್ಯೆಯಾದಾಗ ಮೊದಲು ಧ್ವನಿ ಮಾಡುವುದು ಕನ್ನಡಪರ ಸಂಘಟನೆಗಳು. ಡಾ.ರಾಜ್ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಅನೇಕ ಸಂಘಟನೆಗಳು ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದವು. ಕನ್ನಡ ಭಾಷೆ, ನಾಡಿನ ರಕ್ಷಣೆಯಲ್ಲಿ ಅನೇಕ ಸಂಘಟನೆಗಳು ಪ್ರಮಾಣಿಕವಾಗಿ ಕೆಲಸ ಮಾಡುತ್ತಾ ಕನ್ನಡಿಗರ ಧ್ವನಿಯಾಗಿವೆ ಎಂದು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ. ಗೋಪಿ, ಗೌರವಾಧ್ಯಕ್ಷರಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಖಜಾಂಚಿಯಾಗಿ ಕರ್ನಾಟಕ ರಕ್ಷಣೆ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್ ನೇಮಕವಾದರು. ಅಲ್ಲದೆ, ಜಿಲ್ಲಾ ಉಪಾಧ್ಯಕ್ಷರಾಗಿ ಆದಿಲ್ ಪಾಷಾ, ವೀರೇಶ್ಪ್ರಸಾದ್, ಪ್ರಧಾನ ಕಾರ್ಯದರ್ಶಿ ಬಾಬು, ಸಂಘಟನಾ ಕಾರ್ಯದರ್ಶಿ ಟಿ.ಎಸ್.ರಕ್ಷಿತ್ಕುಮಾರ್, ಕಾರ್ಯದರ್ಶಿ ಜೆ.ಡಿ.ಸತೀಶ್, ನಿರ್ದೇಶಕರಾಗಿ ಪ್ರಸನ್ನಕುಮಾರ್, ವಿಜಯಕುಮಾರ್, ಮಹದೇವಯ್ಯ, ಎಸ್.ವಿ.ನಾಗರಾಜು, ಹೆಚ್.ರಾಜಣ್ಣ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ರಮ್ಯ ಮೊದಲಾದವರು ಭಾಗವಹಿಸಿದ್ದರು.

[…] […]
[…] […]