ಕೊರಟಗೆರೆ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಕುಂಚಿಟಿಗರ ಮಠವು ಮಹತ್ವದ ಧನಸಹಾಯ ಕಾರ್ಯಕ್ರಮವನ್ನು ಆಯೋಜಿಸಿತು. ಕೊರಟಗೆರೆ ತಾಲ್ಲೂಕಿನ ಎಲೆ ರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿಗಳು, ಕೇಂದ್ರ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರೂ ಹಾಗೂ ದಾನಿಗಳೂ ಆಗಿರುವ ಶ್ರೀ ಜಿ.ಎಲ್. ನರೇಂದ್ರಬಾಬು ಅವರ ಮೂಲಕ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಿದರು.
ಹುಬ್ಬಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲ್ಲೂಕಿನ ಕಸಬಾ ಹೋಬಳಿಯ ಹರಿ ಅಜ್ಜಿಹಳ್ಳಿ ಗ್ರಾಮದ ಯಂಜಾರಪ್ಪ ಅವರ ಪುತ್ರಿ ಯಮುನಾ ವೈ ಹಾಗೂ ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಗೋಣಿಹಳ್ಳಿ ಗ್ರಾಮದ ವೀರ ನಾಗಪ್ಪ ಅವರ ಅಣ್ಣ ನಾಗರಾಜು ಅವರ ಪುತ್ರ ಜಿ.ಎನ್. ವಿಕಾಸ್ ಅವರಿಗೆ ತಲಾ ರೂ.50,000ಗಳಂತೆ ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ದಾನಿಗಳಾದ ಜಿ.ಎಲ್. ನರೇಂದ್ರಬಾಬು, ನೇತಾಜಿ ಶ್ರೀಧರ್, ವಕೀಲರಾದ ಶಿವರಾಮ, ನಾಗಣ್ಣ, ಶ್ರೀನಾಥ್, ಎಸ್.ಕೆ. ನಾಗರಾಜು, ಮೆಡಿಕಲ್ ಹರ್ಷ, ತಿಮ್ಮೇಗೌಡ, ಮಂಜುನಾಥ್, ಈರಣ್ಣ, ಯಂಜಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-ನರಸಿಂಹಯ್ಯ, ಹೊಸಕೋಟೆ
