ಕೆ.ಆರ್.ಪೇಟೆ: ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಪ್ರಭಾರ ಅಧ್ಯಕ್ಷರಾಗಿ ಎಂ.ಆರ್. ರಮೇಶ್ ಅವರು ಅಧಿಕಾರ ಸ್ವೀಕರಿಸಿದರು.
ಹಿಂದಿನ ಅಧ್ಯಕ್ಷರಾದ ಕಬ್ಬಲಗೆರೆ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆಯ ನಿಯಮದ ಪ್ರಕಾರ ನೂತನ ಪ್ರಭಾರ ಅಧ್ಯಕ್ಷರಾಗಿ ಹಾಲಿ
ಉಪಾಧ್ಯಕ್ಷ ಎಂ.ಆರ್. ರಮೇಶ್ ರವರು ಅಧಿಕಾರ ಸ್ವೀಕರಿಸಿದ್ದಾರೆ ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕ ಎಂ.ಆನಂದ್ ಪ್ರಕಟಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಪ್ರಭಾರ ಅಧ್ಯಕ್ಷ ಎಂ.ಆರ್ ರಮೇಶ್ ನಾನು ಮೊದಲ ಬಾರಿಗೆ ಬ್ಯಾಂಕ್ ನಿರ್ದೇಶಕರಾಗಿ ಸರ್ವಾನು ಮತದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿದ್ದ ನಿರ್ದೇಶಕರು ಈಗ ಮತ್ತೆ ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ಬ್ಯಾಂಕಿನ ಎಲ್ಲಾ ನಿರ್ದೇಶಕರಿಗೆ ಋಣಿಯಾಗಿರುತ್ತೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಬ್ಯಾಂಕಿನ ಶೇರುದಾರ ಸದಸ್ಯರಿಗೆ ಕೊಡಿಸಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಹಿರಿಯ ನಿರ್ದೇಶಕರಾದ ಕಬ್ಬಲಗೆರೆ ಪುಟ್ಟಸ್ವಾಮೀಗೌಡ ಅವರ ಮಾರ್ಗದರ್ಶನದಲ್ಲಿ ಶ್ರಮಿಸುತ್ತೇನೆ.

ಈ ಮೂಲಕ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ.ರೈತರಿಗೆ, ನಿರುದ್ಯೋಗಿಗಳಿಗೆ ಉಪ ಕಸುಬು ಕೈಗೊಳ್ಳಲು ಕುರಿ, ಕೋಳಿ, ಮೇಕೆ, ಫಾರಂ ಆರಂಭಿಸಲು ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಸಾಲ ಸೌಲಭ್ಯ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ನೂತನ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಆರ್.ರಮೇಶ್ ಅವರನ್ನು ಬ್ಯಾಂಕಿನ ನಿರ್ದೇಶಕರು ಮುಖಂಡರು ಹಾರ ಹಾಕಿ,ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿಕಟ ಪೂರ್ವ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ನಿರ್ದೇಶಕರಾದ ಅಣ್ಣೇಚಾಕನಹಳ್ಳಿ ನಾಗರಾಜೇಗೌಡ, ನಿರ್ದೇಶಕರಾದ ಮಾಳಗೂರು ಜಗದೀಶ್,ಬಣ್ಣೇನಹಳ್ಳಿ ಬಿ.ಎನ್. ಧನಂಜಯ್, ಲಕ್ಷ್ಮೀಫುರ ಚಂದ್ರೇಗೌಡ, ಬಂಡಿಹೊಳೆ ನಾಗೇಶ್, ಮಂಜುಳಾ ಕೃಷ್ಣೇಗೌಡ,ಕವಿತ ಚಂದ್ರೇಗೌಡ, ಅರೆಬೊಪ್ಪನಹಳ್ಳಿ ಸುನಿಲ್, ಗ್ರಾ.ಪಂ.ಸದಸ್ಯ ಹೊನ್ನೇನಹಳ್ಳಿ ಕೃಷ್ಣೆಗೌಡ ಸೇರಿದಂತೆ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
