ತುಮಕೂರು : ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಜನವರಿ 01 ರಂದು ಸಂಜೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಅಮಾನಿಕೆರೆ ಉದ್ಯಾನವನದಲ್ಲಿರುವ ಯೋಧರ ಧ್ವಜ ಸ್ಥಂಭಕ್ಕೆ ಕ್ಯಾಂಡಲ್ ದೀಪ ಬೆಳಗಿಸಿ, ಪುಷ್ವರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ, ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯದ ಆತ್ಮಗೌರವ ಕೋರೆಗಾಂವ್ ಯುದ್ಧ. ಸಮಾನತೆ ಮತ್ತು ಸ್ವಾಭಿಮಾನದ ಅಮರ ಪ್ರತೀಕವಾಗಿದ್ದು 1818ರ ಜನವರಿ 1ರಂದು ಭೀಮಾ ಕೋರೆಗಾಂವ್ನಲ್ಲಿ ನಡೆದ ಯುದ್ಧದಲ್ಲಿ ಐತಿಹಾಸಿಕ ವಿಜಯವು ಕೇವಲ ಸೈನಿಕ ಸಂಘರ್ಷದ ಫಲಿತಾಂಶವಾಗಿರಲಿಲ್ಲ, ಇದು ಶತಮಾನಗಳ ಅನ್ಯಾಯ, ದಮನ ಮತ್ತು ಅವಮಾನಗಳ ವಿರುದ್ಧ ಸ್ವಾಭಿಮಾನದಿಂದ ನಿಂತು ಹೋರಾಡಿದ 500 ಮಹಾನ್ ಸೈನಿಕರ ಅಸಾಮಾನ್ಯ ಧೈರ್ಯ, ಶೌರ್ಯ ಮತ್ತು ತ್ಯಾಗದ ಸ್ಮರಣೀಯ ಅಧ್ಯಾಯವಾಗಿದೆ ಎಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದರು.


ಸಮಾನತೆ, ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸಾರಿದ ಈ ಐತಿಹಾಸಿಕ ಹೋರಾಟವನ್ನು ಗೌರವದಿಂದ ಸ್ಮರಿಸಿ, ನ್ಯಾಯಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ ಎಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಯುವಘಟಕದ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಅಟ್ರಾಸಿಟಿ ಸದಸ್ಯರಾದ ಗೋವಿಂದರಾಜ್ ಮಾತನಾಡಿದರು.
ಇದನ್ನು ಓದಿ: ನಾಡು, ನುಡಿಗೆ ಸಂಘಟನೆಗಳು ಶಕ್ತಿಯಾಗಲಿ: ಹಿರೇಮಠಶ್ರೀ ಕನ್ನಡ-ಇತರೆ ಸಂಘಟನೆಗಳ ಒಕ್ಕೂಟಕ್ಕೆ ಜಿಲ್ಲಾಧ್ಯಕ್ಷರಾಗಿ ಎಂ.ಗೋಪಿ ಆಯ್ಕೆ
ದಲಿತರ ಸ್ವಾಭಿಮಾನದ ಸಂಕೇತವಾಗಿ ಕೋಟ್ಯಂತರ ದಲಿತ ಚಳವಳಿಗಳು ಬಹುದೊಡ್ಡ ಶಕ್ತಿಯಾಗಿದೆ. ಶೋಷಿತರಿಗೆ ಆತ್ಮಗೌರವದ ಹಾದಿಯನ್ನು ತೋರಿಸಿಕೊಟ್ಟ ಈ ಭೀಮ ಕೊರೆಗಾಂವ್ ಯುದ್ಧವು, ಸಮಾನತೆಯ ಭಾರತವನ್ನು ಕಟ್ಟುವಲ್ಲಿ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಪತ್ರಕರ್ತರು ಹಾಗೂ ಕೆ.ಯು.ಡಬ್ಲೂ.ಜೆ. ಜಿಲ್ಲಾ ಘಟಕದ ನಿರ್ದೇಶಕರಾದ ಯೋಗೀಶ್ ಮೆಳೆಕಲ್ಲಹಳ್ಳಿ ರವರು ತಿಳಿಸಿದರು.
ಲಕ್ಷ್ಮೀನಾರಾಯಣ ಎಸ್, ದಿಬ್ಬೂರು ಶ್ರೀನಿವಾಸ್, ಟೈಲರ್ ಜಗದೀಶ್, ವಿನಯ್, ಮೋಹಿನ್ ಅಹ್ಮದ್, ಕರ್ನಾಟಕ ಮಾದಿಗ ರಾಜೇಶ್ ಹೆಚ್.ಬಿ, ಶಿವರಾಜ್ (ಆಟೋ ಶಿವರಾಜ್), ಕಿರಣ್ ವೈ.ಎಸ್, ಮನು.ಟಿ, ರವಿಕುಮಾರ್ ಎನ್, ಇಲ್ಲಾಸ್ ಅಹ್ಮದ್, ಮಾರ್ಕೆಟ್ ಮಣ್ಣೆಪ್ಪ, ಹನುಮನರಸಯ್ಯ, ಚೆಲುವರಾಜ್, ರಂಗಸ್ವಾಮಯ್ಯ, ಕೊತ್ತಿಹಳ್ಳಿ ಶಿವಣ್ಣ, ಸೇರಿದಂತೆ ಇನ್ನು ಮುಂತಾದವರು ಉಪಸ್ಥಿರಿದ್ದರು.
– ಕೆ.ಬಿ.ಚಂದ್ರಚೂಡ

[…] […]