ಹಿಂದು, ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಅಥವ ಯಾವುದೇ ಧರ್ಮ ತತ್ವದ ಹಿಂದೆ ಒಂದೇ ಒಂದು ಪರಮೋಚ್ಚ ಗುಣವನ್ನು ನಾವೆಲ್ಲಾ ಕಾಣಬಹುದು. ಇದು ಯಾವುದೆಂದರೆ “ಒಳ್ಳೆಯವನಾಗು ಮತ್ತು ಒಳ್ಳೆಯದನ್ನು ಮಾಡು”. ಇದು ಹೇಗೆ ಸಾಧ್ಯ? ಉದಾಹರಣೆಗೆ ಸಂತ ಅಷ್ಟ ವಕ್ರನ ಗೀತ ಸಾರ ಮತ್ತು ಭಾಗವತ್ ಗೀತ ಸಾರಾ ಎರಡೂ ಒಂದೆ.
ಅಷ್ಟ ವಕ್ರ, ಜನಕ ಮಹಾರಾಜನ ಅನುಮಾನದ ಕ್ಲೇಷಗಳನ್ನು ಮತ್ತು ಪರಮಾತ್ಮ ಕೃಷ್ಣನು ಅರ್ಜುನನ ಮನಸ್ಸಿನಲ್ಲಿದ್ದ ಗೊಂದಲಗಳನ್ನು ಅಧ್ಯಾತ್ಮಿಕವಾಗಿ ನಿವಾರಿಸಿದ್ದು ಮತ್ತು ಧರ್ಮವನ್ನು ಎತ್ತಿ ಹಿಡಿಯುವ ಬೋಧನೆ ಮಾಡಿದ್ದು. ಸಾವಿರಾರು ಉಪಮೆಗಳು, ಪೌರಾಣಿಕ ಕತೆಗಳು ಹಾಗು ಸೂಕ್ತಿ ನಿರೂಪಣೆಗಳು ಇದ್ದರೂ ಇವೆಲ್ಲಾ ನಾವು ನೋಡುವ ಸಿನಿಮಾಗಳು ಇದ್ದಂತೆ. ಹೇಗೆ ಅಂತಿರಾ…ಹೀಗೆ ಒಮ್ಮೆ ಯೋಚನೆ ಮಾಡೋಣ, ಸಾಮಾನ್ಯವಾಗಿ ಚಿತ್ರಗಳಲ್ಲಿ Shooting, location, actors ಬೇರೆ ಬೇರೆ ಇರುತ್ತವೆ. ನಾವು ನೋಡುವ ಸಿನಿಮಾದ ಕತೆ ಹೇಗಿರುತ್ತದೆ? Hero ವಿನ ಪಕ್ಕ lover ಇರುತ್ತಾಳೆ ಮತ್ತು ಹಿರೋ ಎದುರಿಗೆ villain ಕಾಣುತ್ತಾನೆ. ನಡುವೆ ಅನೇಕ ಪಾತ್ರಧಾರಿಗಳು. ಕೊನೆಗೆ ಖಳನಾಯಕನ ಸಂಹಾರ ಮತ್ತು ನಾಯಕನ ಪಟ್ಟಾಭಿಷೇಕ. ಸಾರಾಂಶ goodness. ಇಷ್ಟೇ ಅಲ್ಲವೆ? ನಾವೆಲ್ಲ ಸಿನಿಮಾ ನೋಡುತ್ತೇವೆ, ನೋಡಿದ ಮೇಲೆ ಮರೆತು ಬಿಡುತ್ತೇವೆ.
ಇದನ್ನು ಓದಿ: ಸಾಮಾಜಿಕ ಪರಮಾಣು (ವಾಸ್ತವಿಕ ಚಿಂತನೆ)
ಆದರೆ ಧರ್ಮ ಎನ್ನುವುದೇ ಬೇರೆ, ಧರ್ಮವನ್ನು ಯಾರು ಮರೆಯಬಾರದು. ಎಲ್ಲರಿಗೂ ಧರ್ಮ ಬೇಕು ಆದರೆ ಧರ್ಮಾಂಧತೆ ಇರಬಾರದು. ಧರ್ಮಾಂಧತೆ ಒಂದು ತರಹದ ಅಫೀಮು, ಅಮಲು. ಧರ್ಮದ ಅಂಧತೆಗೆ ( clinging to idealism) ಒಳಗಾದ ಮಾನವ ಧರ್ಮದ ಹೊರಗೆ ಬರವುದೇ ಇಲ್ಲ. ಇದೋಂತರ ಜೇನಿನ ತುಪ್ಪದ ಮೇಲೆ ನೊಣ ಬಿದ್ದ ಹಾಗೆ. ಇಂತಹ ಧರ್ಮಾಂಧತೆ ಒಳ್ಳೆಯವನಾಗಲು ಬಿಡುವುದೇ ಇಲ್ಲ. ಈ ಧರ್ಮಾಂಧತೆ ಬೋಧನೆಗಳಿಂದ ಜ್ಞಾನ ಮತ್ತು ವಿಕಸತೆ ಎರಡೂ ಮಣ್ಣುಪಾಲು. ಎಂತಾ ವಿಪರ್ಯಾಸ ಅಲ್ಲವೇ?
ಈಗ ರೋಬೋಟ್ ಬಗ್ಗೆ ಯೋಚಿಸೋಣ. ಇಂದು ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತೆ ತಂತ್ರಜ್ಞಾನಗಳು rocket ನ ವೇಗದಲ್ಲಿ ಸಾಗುತ್ತಿವೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಿಮ್ಮ ನಮ್ಮ ಅಕ್ಕ ಪಕ್ಕದಲ್ಲೇ ರೋಬೋಟ್ಗಳನ್ನು ನೋಡಬಹುದು. ಇಂತಹ ಕೃತಕ ರೋಬೋಟ್ಗಳ ಜೊತೆ ಜೀವನ ನಡೆಸಬೇಕು. ಈ ಸಮಯದಲ್ಲಿ ರೊಬೋಟ್ಗಳು ಒಳ್ಳೆಯದ ಅಥವ ಕೆಟ್ಟದ್ದ ಚರ್ಚೆ ಬೇಡ ಆದರೆ ಇವುಗಳ ಮತ್ತು ಮಾನವರ ಉದ್ದೇಶಗಳನ್ನು ತಿಳಿಸುವ ಸಾಮಾನ್ಯ ಪ್ರಯತ್ನ ನನ್ನದು.
ಇದನ್ನು ಓದಿ: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ)
ಭೂಮಿ ತಾಯಿ ಮಾನವನನ್ನು ಸೃಷ್ಟಿಸಿದೆ. ನಾವು ರೋಬೋಟ್ ತಯಾರಿಸಿದ್ದೇವೆ. ಮಾನವ ವಾನರಿಗೆ ಹೋಲಿಸಿದರೆ ಬುದ್ದಿವಂತ ಮತ್ತು ವಿಕಾಸತೆಯನ್ನು ಹೊಂದಿದ್ದಾನೆ. ಇವೆರೆಡನ್ನು ರೋಬೋಟ್ಗಳಿಗೆ ನಾವೆ ತುಂಬ ಬೇಕು. ಮಾನವ ತನ್ನ ಉದ್ದೇಶವನ್ನು ಮರೆತಿದ್ದಾನೆ ಅದರೆ ರೋಬೋಟ್ಗೆ ಉದ್ದೇಶವಿದೆ. ಮಾನವನ ಉದ್ದೇಶ ಸಂಪಾದನೆ, ಅಂತಸ್ತು ಮತ್ತು ದ್ವೇಷ. ರೋಬೋಟ್ನ ಉದ್ದೇಶ ಮಾನವ ಹೇಳಿದ್ದನ್ನು ಮಾಡುವುದು ಮತ್ತು ಉತ್ಪನ್ನ ಹೆಚ್ಚಿಸುವದು.
ಮಾನವನಿಗೆ “ಕರ್ಮ” ತಿಳಿದಿದೆ, ಆದರೆ ನೆಡೆದುಕೊಳ್ಳುವುದಿಲ್ಲ. ರೋಬೋಟ್ಗಳಿಗೆ ಕರ್ಮ ಸಿದ್ಧಾಂತ ಇಲ್ಲ. ಅವುಗಳ ಕರ್ಮ ನಾವೆ, ಸೃಷ್ಟಿಸಬಹುದು ಮತ್ತು ನಾಶಾ ಮಾಡಬಹುದು. ಆಡು ಭಾಷೆಯ “ಮಾಡಿದುಣ್ಣೋ ಮಾರಾಯ”ವೇ ಅಧ್ಯಾತ್ಮದ ಕರ್ಮ. Cause and effect (dynamic and cyclical) ಎಂದು ಇಂಗ್ಲೀಷಿನಲ್ಲಿ ಕರೆಯಲಾಗಿದೆ. ನಾನು ಮೊದಲಿಂದಲೂ ಹೇಳುತ್ತಾ ಬಂದಿರುವೆ, ಈಗಲೂ ಇದೇ ಹೇಳುವೆ. ಸೃಷ್ಟಿಕರ್ತ ಒಂಥರಾ ಖಳನಾಯಕ. ನಮ್ಮನ್ನು ಸೃಷ್ಟಿಸಿದೆ ಬಿಡುವುದಿಲ್ಲ. ಅವನಿಗೆ ಸಂಸಾರ ಬೇಕು. ಸಂಸಾರ ಇಲ್ಲವಾದರೆ ನಾವಿಲ್ಲ. ಅವನನ್ನು ಅರಿಯಲು ನಾವಿರಬೇಕು. ನಾವಿಲ್ಲ ಎಂದರೆ ಸೃಷ್ಟಿಕರ್ತನಿಲ್ಲ. ಅಲ್ಲಿಗೆ ಪ್ರಳಯ ಶತ ಸಿದ್ದ.
ಇದನ್ನು ಓದಿ: ಸಸ್ಪೆಂಡೆಡ್ ಕಣ (ಒಂದು ವಿಮರ್ಶೆ)
ಈಗ ಕಾಲ್ಪನಿಕವಾಗಿ ಯೋಚನೆ ಮಾಡೋಣ. ಭೂಮಿಯ ಮೇಲೆ ನಾವಿಲ್ಲ ಎಂದು ಕೊಳ್ಳೋಣ, ವಿಶ್ವದಲ್ಲಿ ಕೃತಕ ಬುದ್ಧಿಮತಿಗಳೇ ಇದ್ದಾರೆ, ಆಗ ಮಾನವರ ಸಂತತಿ ಏನಾಗಬಹುದು? ನೈಸರ್ಗಿಕವಾಗಿ ಸೃಷ್ಟಿಯಾಗಿರುವ ನಮಗೆ ಸಂಸಾರ ಬೇಕಲ್ಲವೆ. ವಿಪರ್ಯಾಸ ಎಂದರೆ ಇಂದು ಮಾನವನಿಗೆ ರೋಬೋಟ್ ಸಂಗಾತಿ. ಇಲ್ಲಿಗೆ ಮುಗಿಯಿತು ನಮ್ಮ ಸಂತತಿ ಎಂದುಕೊಳ್ಳೋಣವೇ? ಇನ್ನು ಮುಂದೆ ಕರ್ಮದ ವಿಚಾರವಿಲ್ಲ. ಕಾರಣ ನಾನು ಕೆಟ್ಟದ್ದೊ ಅಥವ ಒಳ್ಳೆಯದನ್ನು ಮಾಡಿದ್ದರೆ ನಮ್ಮ ವಂಶವಾಹಿನಿ ಜೀವತಂತುವಿನ ಮೂಲಕ ಮುಂದಿನ ಸಂತತಿಗೆ ಪ್ರವಹಿಸಬೇಕು. ಮಾನವ ನಿರ್ಮಿಸಿರುವ ರೋಬೋಟ್ ಜೊತೆಗೆ ಇನ್ನೇಂತ ನೈಸರ್ಗಿಕ ಕ್ರಿಯೆ? ನಿವೇ ಹೇಳಿ?
ಮಹಾ ಋಷಿ ಪತಂಜಲಿ ಸಾವಿರಾರು ವರ್ಷಗಳ ಹಿಂದೆ ಹೇಳಿದ್ದರು, “ಇಂದು ಒಳ್ಳೆಯದನ್ನು ಮಾಡಿದರೆ, ಈ ಒಳ್ಳೆಯತನ 5 ಅಥವ 6 ಮುಂದಿನ ತಲೆಮಾರುಗಳವರಿಗೂ ಜೀವತಂತುವಿನ ಮೂಲಕ ಪ್ರವಹಿಸುತ್ತದೆ” ಎಂದು.
ಇದನ್ನು ಓದಿ: ಯಮ ಮಹಾರಾಜ (ವೈಯಕ್ತಿಕ ಸಿದ್ಧಾಂತ)
ಲೋಕಿಕವಾಗಿ ನಾವು ದುಡಿಯುವ ರೋಬೋಟ್ ಅಗಿದ್ದೇವೆ. ಆದರೆ ಧರ್ಮಾಂಧತೆ ಬೋಧನೆಗೆ ಮಾನವರಾಗಿ ಉಳಿದಿಲ್ಲ. ಧರ್ಮಾಂಧತೆ ಕೆಲವರನ್ನು ಕೊಲ್ಲುವ ರೋಬೋಟ್ಗಳಾಗಿ ಮಾರ್ಪಟ್ಟಿಸಿದ್ದಾವೆ. ಇದರಿಂದ “ಕರ್ಮ” ಸತ್ತು ಹೋಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ನಾನು ವಿಜ್ಞಾನಿ ಅಲ್ಲ, ವಿವಾದ ಹುಟ್ಟು ಹಾಕುವ ಯತ್ನವೂ ನನಲ್ಲಿ ಇಲ್ಲ. ನಾನು ತಿಳಿಸಿರುವ ವಿಷಯಗಳು ಸ್ವಂತದ್ದು. ಅಧ್ಯಾತ್ಮಿಕ ವಿಚಾರವಾದ “ಜೀವನ ಮುಕ್ತಿ” ಈ ತಲೆಮಾರಿನಲ್ಲೇ ಆಗುವ ಕ್ರಿಯೆ ಅಲ್ಲ. ಇಂದಿನಿಂದ ನಾವು ವಿಕಾಸದತ್ತ ಹೆಜ್ಜೆ ಇಡುವ ಪ್ರಯತ್ನ ಮಾಡಿದರೆ ಮುಂದೊಂದು ಸಂತತಿಯಲ್ಲಿ ಮುಕ್ತಿ ಸಿಗಬಹುದು. ವಾನರಿಗೆ forebrain ಇದ್ದರೂ ವಿಕಸತೆ ಹೊಂದಿಲ್ಲ. ನಮಗೆ forebrain ಇದ್ದು ವಿಕಾಸತೆ ಹೊಂದಿದ್ದಾದರೂ ನಾವು ವಾನರಂತೆ ನೆಡೆದುಕೊಳ್ಳುತ್ತೇವೆ. ಇವೆ ವಾಸ್ತವಿಕ ವಿರೋಧಾಭಾಸಗಳು (paradoxes).
ಇದನ್ನು ಓದಿ: ಮೆದುಳೆಂಬ ಬ್ರಹ್ಮಾಂಡ ಮನೆ (ವೈಜ್ಞಾನಿಕ ವಿವರಣೆ)
“ಧರ್ಮೋ ರಕ್ಷತಿ ರಕ್ಷಿತಹ”, ಇರಲಿ ಧರ್ಮ, ಅದರೆ ಧರ್ಮಾಂಧತೆಯ ಕಡೆ ವಾಲಬಾರದು. ನೆನಪಿರಲಿ ಧರ್ಮಾಂಧತೆಯ ವ್ಯಕ್ತಿ ರೋಬೋಟ್ ಅಗುತ್ತಾನೆ. ಈ ವ್ಯಕ್ತಿಯು ಸಿಡಿಮದ್ದು, ಕತ್ತಿ, ಚಾಕು ಒಯ್ಯಬಹುದು. ಆದರೆ ಮುಗ್ಧ ಮಾತ್ರ ಧರ್ಮಾಂಧತೆಗೆ ಬಲಿಯಾಗುವನು. ಈಗ ಹೇಳಿ, ಮಾನವನಾಗಬೇಕೆ ಅಥವ ರೋಬೋಟ್ ಆಗಬೇಕೆ…
In this moment, I am drawing a conjectural assessments rather than solid or concrete object related answers. Once again, about ‘karma’ or the ‘gene’ theory, I am of the possible opinion that mere application of good and bad attitudes (ideas) and attributes (traits) to any particular race would have a tremendous impact for further generations of the same race to upgrade or degrade of their own generational progenies…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]