ಬೆಂಗಳೂರು: ಕರ್ನಾಟಕ ಸರ್ಕಾರವು ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದೆ. ಪಡಿತರ ಚೀಟಿ ಬಿಪಿಎಲ್/ಎಪಿಎಲ್ ಫಲಾನುಭವಿಗಳಿಗಾಗಿ ಪ್ರಮುಖ ದಾಖಲೆಗಳಲ್ಲಿದ್ದು, ತಪ್ಪು ಅಥವಾ ನವೀಕರಣ ಅಗತ್ಯವಿರುವ ಪಡಿತರ ಚೀಟಿಗಳಿಗೆ ಇದೀಗ ಸುಲಭ ತಿದ್ದುಪಡಿ ಅವಕಾಶ ಲಭ್ಯವಾಗಿದೆ.
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾವಣೆ ಮಾಡುವ ಕಾರ್ಯ ಮುಂದುವರೆದಿದ್ದು, ಈ ಮಧ್ಯೆ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆ ಪುನರಾರಂಭವಾಗಿದೆ. ಫಲಾನುಭವಿಗಳು ಬೆಂಗಳೂರು ಒನ್, ಗ್ರಾಮ ಒನ್, ಸೈಬರ್ ಸೆಂಟರ್ಗಳಲ್ಲಿ ತಮ್ಮ ಪಡಿತರ ಚೀಟಿಯ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಹೊಸದಾಗಿ ಮಕ್ಕಳು ಅಥವಾ ಕುಟುಂಬದ ಇತರ ಸದಸ್ಯರ ಸೇರ್ಪಡೆಗೆ ಅವಕಾಶ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Ahara.kar.nic.in ಭೇಟಿ ನೀಡಬಹುದು.
ತಿದ್ದುಪಡಿ ಅವಕಾಶಗಳು:
- ಹೆಸರು ತಿದ್ದುಪಡಿ / ಸೇರ್ಪಡೆ / ತೆಗೆದುಹಾಕುವಿಕೆ
- ವಿಳಾಸ ಬದಲಾವಣೆ
- ಫೋಟೋ ಬದಲಾವಣೆ
- ಕುಟುಂಬ ಮುಖ್ಯಸ್ಥ ಬದಲಾವಣೆ
- ನ್ಯಾಯಬೆಲೆ ಅಂಗಡಿ ಬದಲಾವಣೆ
ಅಗತ್ಯ ದಾಖಲೆಗಳು:
- ಪಡಿತರ ಚೀಟಿ
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಒಬ್ಬ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 6 ವರ್ಷ ಮೇಲ್ಪಟ್ಟ ಸದಸ್ಯರ ಜಾತಿ ಮತ್ತು ಆದಾಯ ದಾಖಲೆ
- 6 ವರ್ಷೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
ಪತ್ನಿ ಅಥವಾ ಮಗುವಿನ ಹೆಸರು ಸೇರ್ಪಡೆಗೆ:
- ಪತ್ನಿ: ಆಧಾರ್ ಕಾರ್ಡ್, ಮದುವೆ ಪ್ರಮಾಣ ಪತ್ರ, ಪೋಷಕರ ಪಡಿತರ ಚೀಟಿ
- ಮಗು: ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ https://ahara.kar.nic.in/home ಭೇಟಿ ನೀಡಿ
- ಮುಖ್ಯ ಪುಟದಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ
- ತಿದ್ದುಪಡಿ / ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಮಾಡಿ
- ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ
- ಫಾರ್ಮ್ ಸಲ್ಲಿಸಿ; ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಮನೆಗೆ ಹೊಸ ಪಡಿತರ ಚೀಟಿ ತಲುಪುತ್ತದೆ
ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಕೆ ಸಾಧ್ಯ. ಕಳೆದ ಕೆಲ ದಿನಗಳ ಹಿಂದೆ ತಿದ್ದುಪಡಿ ನಿಲ್ಲಿಸಲಾಗಿತ್ತು, ಈಗ ಮತ್ತೊಮ್ಮೆ ಅವಕಾಶ ಲಭ್ಯವಾಗಿದೆ. ಫಲಾನುಭವಿಗಳು ತಮ್ಮ ಪಡಿತರ ಚೀಟಿಗಳಲ್ಲಿ ಯಾವುದೇ ತಿದ್ದುಪಡಿ ಮಾಡಿಸಿಕೊಳ್ಳಬಹುದು.
