ಕೊರಟಗೆರೆ :- ಪ್ರಾಥಮಿಕ ಹಂತದಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶ್ರುತಿಯನ್ನು ಪಡೆಯಲು ಸಾಧ್ಯವಿದೆ ಎಂದು ತಾಲೂಕ್ ಶಿಕ್ಷಣಾಧಿಕಾರಿ ಪೈರೋಜ್ ಬೇಗಮ್ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಬೊಮ್ಮಲದೇವಿಪುರ (ಬಿ ಡಿ ಪುರ ) ಕ್ಲಸ್ಟರ್ ಹಂತದ ಎಫ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಟ್ಟೇನಹಳ್ಳಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಅವಕಾಶವನ್ನು ನೀಡುವ ಮೂಲಕ ಸಮುದಾಯದೊಳಗಿನ ವಿವಿಧ ಭಾಗಿದಾರರ ಭಾಗವಹಿಸಿಕೆಯನ್ನು ಉತ್ತೇಜಿಸಬೇಕೆನ್ನುವುದು ಇಲಾಖೆಯ ಆಶಯವಾಗಿದೆ ಎಂದರು .
ಸಮೂಹ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿಪತಿ ಸಿಆರ್ ಪ್ರಾಸ್ತವಿಕವಾಗಿ ಮಾತನಾಡಿ ವಿಭಿನ್ನ ಕಲಿಕೆಯ ವೇಗ ಮತ್ತು ಶೈಲಿಯನ್ನು ಹೊಂದಿರುವ ಮಕ್ಕಳು ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ತೊಡಗಿಕೊಂಡಾಗ ವೈವಿಧ್ಯಮಯವಾದ ವಿಧಾನಗಳಿಂದ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ , ಕಲಿಕಾ ಹಬ್ಬದ ಕಥೆ ಹೇಳುವುದು, ಆಹಾರ ಮತ್ತು ಪೌಷ್ಟಿಕಾಂಶ,ಸಂತೋಷದಾಕ ಗಣಿತ , ಗಟ್ಟಿ ಓದು, ಕೈ ಬರಹ, ಮೆಮೊರಿ ಹಂಟ್, ರಸಪ್ರಶ್ನೆ ಚಟುವಟಿಕೆ ಕಾರ್ನರ್ ಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ರವಿಕುಮಾರ್ T. K,ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ರಾಮೇಗೌಡ ರ್, GLPS ಲಿಂಗಧವೀರನಹಳ್ಳಿ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ವಾಸವಿದೇವಿ ರವರಿಗೆ ಬೀಳ್ಕೊಡುಗೆ ನೀಡಲಾಯಿತು. ಹಾಗೂ ಬೇರೆ ಶಾಲೆಗಳಿಂದ ಬಿ ಡಿ ಪುರ ಕ್ಲಸ್ಟರ್ ನ ವಿವಿಧ ಶಾಲೆಗಳಿಗೆ ವರ್ಗಾವಣೆಗೊಂಡು ಬಂದಿರುವ ಶಿಕ್ಷಕರಿಗೆ ಸ್ವಾಗತ ಕೋರಲಾಯಿತು, ಸೆಲ್ಫಿ ಕಾರ್ನರ್, ಸುಗ್ಗಿಯ ಮಾದರಿ, ಪೌಷ್ಟಿಕಾಂಶ ಮಾದರಿ ಉತ್ತಮವಾಗಿ ತಯಾರಿಸಲಾಗಿತ್ತು. ಮಕ್ಕಳಿಗೆ ಚಟುವಟಿಕೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾರತಿ ನಿರೂಪಣೆ ನೆರವೇರಿಸಿದರೆ, ರಾಜಣ್ಣಸರ್ ಸ್ವಾಗತ ಕೋರಿದರು, ಚಟ್ಟೆನಹಳ್ಳಿ ಶಾಲೆಯ SDMC ಅಧ್ಯಕ್ಷರಾದ ತಿಮ್ಮರಾಜು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಈಶ್ವರ್, ಪಿಡಿಒ ಶಿವಕುಮಾರ್ ರವರು,
ಮುಖ್ಯ ಶಿಕ್ಷಕರಾದ ನಾಗರಾಜು ಕೋಟಪ್ಪ ವಿಜಯಂಬಿಕೆ,ನರಸಮ್ಮ, ಉಮೇಶ್ ಸರ್ ಹಾಗೂ ಸಹಶಿಕ್ಷಕರಾದ ಕವಿತಾ, ರಾಧಿಕಾ, ಮಂಜುನಾಥ್, ರಘು, ಹೇಮಲತಾ, ಮಲ್ಲಿಕಾರ್ಜುನಯ್ಯ, ಸುರೇಶ್, ದೊಡ್ಡಯ್ಯ, ಮಾರುತೇಶ್ ಹಾಗೂ ಊರಿನ ಗ್ರಾಮಸ್ಥರು, SDMC ಸದಸ್ಯರು, ಗ್ರಾಮ ಪಂಚಾಯತಿಯ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ವರದಿ : ಶ್ರೀನಿವಾಸ್ ಕೊರಟಗೆರೆ
