ಕೆ ಆರ್ ಪೇಟೆ- ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಎಂ,ಬಿ ಚಲುವಯ್ಯಮತ್ತು ಪಾರ್ವತಮ್ಮ ದಂಪತಿಗಳ ಸುಪುತ್ರಿ ರೋಜಾ ಹೆಚ್ ಸಿ ರವರು ಚಿನ್ನದ ಪದಕವನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ರೋಜಾ ರವರು ಸೆಂಟರ್ ಫಾರ್ ಆಫ್ ವುಮೈನ್ ಸ್ಟಡೀಸ್ (ಮಹಿಳಾ ಅಧ್ಯಯನ ಕೇಂದ್ರ)ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಮೈಸೂರಿನ 2025-2026 ನೇ ಸಾಲಿನ 106 ನೇ ಘಟಿಕೋತ್ಸವ ಸಮಾರಂಭದಲ್ಲಿ ಮೈಸೂರುವಿಶ್ವವಿದ್ಯಾನಿಲಯದ (ಮಾನಸಗಂಗೋತ್ರಿ )ಚಿನ್ನದ ಪದಕ ನೀಡಿ ಗೌರವಿಸಿದೆ.
ಇದನ್ನು ಓದು: ಅಂಬೇಡ್ಕರ್ ಆಶಯದಂತೆ ಸರ್ವರಿಗೂ ಸಮಾನತೆ ಸಿಗಬೇಕಿದೆ- ಶಾಸಕ ಹೆಚ್ ಟಿ ಮಂಜು
ಚಿನ್ನದ ಪದಕಕ್ಕೆ ಬಾಜನರಾಗಿರುವ ರೋಜಾ ಹೆಚ್ ಸಿ ರವರಿಗೆ ಶಾಸಕ ಹೆಚ್ ಟಿ ಮಂಜು, ಸಮಾಜ ಸೇವಕರಾದ ಆರ್.ಟಿ. ಓ ಮಲ್ಲಿಕಾರ್ಜುನ್, ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ, ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ತಾಲ್ಲೂಕು ಎಸ್.ಸಿ.ಎಸ್.ಟಿ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಯೋಗೇಶ್, ತಾಲ್ಲೋಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂದ ಅಧ್ಯಕ್ಷ ರಾಜಯ್ಯ,ಸೇರಿದಂತೆ ತಾಲ್ಲೋಕಿನ ಗಣ್ಯರು ಆಭಿನಂದಿಸಿದ್ದಾರೆ.
– ಶ್ರೀನಿವಾಸ್ ಆರ್
