ಬೆಂಗಳೂರು: ರಾಜ್ಯ ಸರ್ಕಾರ ನೀಡುವ 2020 ಹಾಗೂ 2021ನೇ ಸಾಲಿನ ಪ್ರತಿಷ್ಠಿತ ಡಾ.ರಾಜ್ಕುಮಾರ್ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಟಿ ಡಾ.ಜಯಮಾಲ ಹಾಗೂ ಸಾಹಿತಿ ಸಾ.ರಾ.ಗೋವಿಂದು ಅವರಿಗೆ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ನಿರ್ದೇಶಕರಾದ ಎಂ.ಎಸ್.ಸತ್ಯು ಹಾಗೂ ಕೆ.ಶಿವರುದ್ರಯ್ಯ ಅವರಿಗೆ, ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಿನಿಮಾ ಛಾಯಾಗ್ರಾಹಕರಾದ ಪ್ರಗತಿ ಅಶ್ವತ್ಥನಾರಾಯಣ ಮತ್ತು ಎಂ.ಕೆ.ಸುಂದರರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದನ್ನು ಓದಿ: Watch Video-ಹಾಸನ: ಭೂ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾಧಿಕಾರಿ ಕಾರು ಜಪ್ತಿ
ಈ ಗಣ್ಯರು ಚಿತ್ರರಂಗಕ್ಕೆ ನೀಡಿರುವ ಅನನ್ಯ ಕಲಾಸೇವೆ ಮತ್ತು ಸಾಧನೆಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದ್ದು, ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಯುವ ಕಲಾವಿದರು ಹಾಗೂ ತಾಂತ್ರಿಕರಿಗೆ ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಈ ಸಾಧಕರಿಗೆ ಗೌರವ ಸಲ್ಲಿಸುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಅವರ ಮುಂದಿನ ಬದುಕು ಇನ್ನಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಅವರು ಶುಭ ಹಾರೈಸಿದ್ದಾರೆ.
