ಟಿ.ನರಸೀಪುರ : ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ನಡೆದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಭಾಗಿತ್ವವಹಿಸಿದ ಮಾಜಿ ಸಚಿವರ ಹಾಗೂ ಸಂಸದರಾದ ಸಿ. ಎಸ್. ಪುಟ್ಜರಾಜು ರವರನ್ನು ಗ್ರಾಮದ ಪ್ರಮುಖರು ಮೂಗೂರಿನ ಅಮ್ಮ ನವರ ಸೇವಾ ಸಮಿತಿ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಎಂ ಡಿ ಲೋಕೇಶ್, ಮುಖಂಡರಾದ ಎಂ ಪಿ ಮರಿಸ್ವಾಮಿ, ಚಂದ್ರಪ್ಪ, ಮಾದೇಶ್, ಬಾಲ ಶಂಕರ್, ಮಲ್ಲಿಕಾರ್ಜುನ, ಶಾಂತ ನಾಗರಾಜು, ಇತರರು ಉಪಸ್ಥಿತರಿದ್ದರು.
ವರದಿ : ಎಂ.ನಾಗೇಂದ್ರಕುಮಾರ್
