ಬೆಂಗಳೂರು, 10 ಜನವರಿ 2026: ದಕ್ಷಿಣ ಭಾರತದ ಮುಂಚೂಣಿಯ ರಿಯಲ್ ಎಸ್ಟೇಟ್ ಸಂಸ್ಥೆಯಾದ ಸುಮಧುರ ಗ್ರೂಪ್, 2026 ಆರ್ಥಿಕ ವರ್ಷದಲ್ಲಿ ಪೂರ್ವ ಮತ್ತು ಉತ್ತರ ಬೆಂಗಳೂರಿನಲ್ಲಿ ಆರು ಐಷಾರಾಮಿ ವಸತಿ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಯೋಜನೆಗಳು ಸುಮಾರು 8 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ₹10,000 ಕೋಟಿ ಆದಾಯದ ಗುರಿಯನ್ನು ಹೊಂದಿವೆ. ವಸತಿ ಸಮುಚ್ಛಯ ಮತ್ತು ನಿವೇಶನ ಅಭಿವೃದ್ಧಿಯನ್ನು ಒಳಗೊಂಡ ಈ ಯೋಜನೆಗಳು ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಯೋಜನೆಗಳಾಗಿವೆ.
ಸುಮಧುರ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಶ್ರೀ ಮಧುಸೂದನ್ ಜಿ, ಹೇಳುವಂತೆ:
“ಬೆಂಗಳೂರಿನಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುವ ಆರು ಐಷಾರಾಮಿ ಯೋಜನೆಗಳೊಂದಿಗೆ 2026ನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಹೆಮ್ಮೆ. ಐಷಾರಾಮಿ ವಸತಿ ಮಾರುಕಟ್ಟೆಗಾಗಿ ಜನರ ಒಲವು ಸ್ಪಷ್ಟವಾಗಿದೆ. ಈ ಯೋಜನೆಗಳಲ್ಲಿ ವಿಶಾಲ ಮನೆಗಳು, ಹಸಿರು ಪರಿಸರ, ಮತ್ತು ಅಂತರ್ರಾಷ್ಟ್ರೀಯ ದರ್ಜೆಯ ಕ್ಲಬ್ಹೌಸ್ ಹಾಗೂ ಕ್ರೀಡೆ, ಫಿಟ್ನೆಸ್, ಮನೋರಂಜನೆ ಸೌಲಭ್ಯಗಳು ಲಭ್ಯವಿವೆ.”
ಪ್ರಮುಖ ಯೋಜನೆಗಳು:
- ಫೋಲಿಯಂ ಬೈ ಸುಮಧುರ (ಹಂತ 4), ವೈಟ್ಫೀಲ್ಡ್: ರೆಸಾರ್ಟ್ ಶೈಲಿಯ ಜೀವನ, ಬೃಹತ್ ಕ್ಲಬ್ಹೌಸ್, ಅಂತರ್ರಾಷ್ಟ್ರೀಯ ದರ್ಜೆಯ ಫಿಟ್ನೆಸ್ ಮತ್ತು ಕ್ರೀಡೆ ಸೌಲಭ್ಯ.
- ಸುಮಧುರ ಎಡಿಶನ್, ಸಿದ್ದಾಪುರ (ವೈಟ್ಫೀಲ್ಡ್): ಕ್ಲಾಸಿಕ್ ಬ್ರಿಟಿಷ್ ವಾಸ್ತುಶಿಲ್ಪದಿಂದ ಪ್ರೇರಿತ, ಸಾಂಪ್ರದಾಯಿಕ ಸೌಂದರ್ಯ ಮತ್ತು ಸಮಕಾಲೀನ ಜೀವನಶೈಲೆಯ ಸಂಗಮ.
- ಸುಮಧುರ ಸೋಲೇಸ್, ಮಾರತಹಳ್ಳಿ: ಕೆರೆಯ ಹತ್ತಿರ, ನೈಸರ್ಗಿಕ ಬೆಳಕು, ವಿಶಾಲತೆ ಮತ್ತು ಆಧುನಿಕ ಐಷಾರಾಮಿ ಜೀವನ.
- ಇತರ ಯೋಜನೆಗಳು: ಸುಮಧುರ ಎಲಿಜಿಯಂ (ಪಣತ್ತೂರು), ಸೋಲಿಯಾ ಬೈ ಸುಮಧುರ (ರಾಚೇನಹಳ್ಳಿ), ಮತ್ತು ಸುಮಧುರ ಪನೋರಮಾ ಹಂತ 2 (ದೇವನಹಳ್ಳಿ).
ಈ ಯೋಜನೆಗಳು 90 ಎಕರೆ ಪ್ರದೇಶದಲ್ಲಿ ಹರಡಿಕೊಂಡು, 400ಕ್ಕೂ ಹೆಚ್ಚು ಪ್ಲಾಟ್ಗಳು ಮತ್ತು 4,000ಕ್ಕೂ ಅಧಿಕ ವಸತಿ ಘಟಕಗಳನ್ನು ಒಳಗೊಂಡಿವೆ. ವೈಟ್ಫೀಲ್ಡ್, ಪಣತ್ತೂರು, ಮಾರತಹಳ್ಳಿ–ತುಬರಹಳ್ಳಿ, ರಾಚೇನಹಳ್ಳಿ ಮತ್ತು ದೇವನಹಳ್ಳಿ ಪ್ರಮುಖ ಸ್ಥಳಗಳಲ್ಲಿ ಇವು ಲಭ್ಯವಾಗಲಿವೆ.
