ತುಮಕೂರು: ಸ್ವಾಮಿ ವಿವೇಕಾನಂದರ 163ನೇ ಜನ್ಮದಿನದ ಅಂಗವಾಗಿ ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಸೋಮವಾರ ತುಮಕೂರಿನ ಕೆ.ಆರ್.ಬಡಾವಣೆಯ ಸಂಘದ ಕಚೇರಿಯಲ್ಲಿ ವಿವೇಕಾನಂದರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಹೆಚ್.ರಾಜಣ್ಣ, ಉಪಾಧ್ಯಕ್ಷ ಆದಿಲ್ ಪಾಷಾ, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ರಮ್ಯಾಶ್ರೀ, ಮುಖಂಡರಾದ ಕೃಷ್ಣ, ವಿಜಯಕುಮಾರ್ ಬುಳ್ಳ, ಪಾರ್ವತಿ, ಲಕ್ಷ್ಮೀನಾರಾಯಣ, ಸಿದ್ಧು ಗೋಬಿ, ರಾಜ್ಕುಮಾರ್ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
