ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2026ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಅಧ್ಯಕ್ಷರಾದ ಎಂ.ಪಿ.ಲೋಕೇಶ್ ಅವರು ರೈತರಿಗೆ ವಿತರಣೆಮಾಡುವ ಮೂಲಕ ಮೂಲಕ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಎಂ.ಪಿ.ಲೋಕೇಶ್ ಅವರು ಪ್ರತಿಯೊಂದು ಮನೆಯಲ್ಲಿಯ ಇರಬೇಕಾದ ತೂಗು ಪಂಚಾಂಗವನ್ನು ಕ್ಯಾಲೆಂಡರ್ ಎಂದು ಕರೆಯಲಾಗುತ್ತದೆ. ಕ್ಯಾಲೆಂಡರ್ ಪ್ರಮುಖವಾಗಿ ಅಮೂಲ್ಯವಾದ ಸಮಯದ ಮಹತ್ವವನ್ನು ತಿಳಿಸಿಕೊಡುತ್ತದೆ. ಹಬ್ಬ-ಹರಿದಿನಗಳು, ಗಣ್ಯರ ಜಯಂತಿಗಳು, ಸರ್ಕಾರಿ ರಜಾದಿನಗಳು, ಬ್ಯಾಂಕ್ ರಜಾ ದಿನಗಳು, ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುತ್ತದೆ.
ಮುಸ್ಲಿಮರ ಹಬ್ಬಗಳು, ಹಿಂದೂಗಳ ಹಬ್ಬಗಳು, ಕ್ರಿಶ್ಚಿಯನ್ನರ ಹಬ್ಬಗಳು, ಜೈನ್ನರ ಹಬ್ಬಗಳು ಸೇರಿದಂತೆ ಎಲ್ಲಾ ಧರ್ಮಗಳ ಪ್ರಮುಖ ಹಬ್ಬಗಳ ಬಗ್ಗೆ ಮಾಹಿತಿ ಸೇರಿದಂತೆ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಒಂದು ವರ್ಷದ ಸಮಗ್ರ ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸಲು ಕ್ಯಾಲೆಂಡರ್ ಸಹಕಾರಿಯಾಗಿದೆ. ನಾವೆಲ್ಲರೂ ಬೆಳಿಗ್ಗೆ ಎದ್ದ ಕೂಡಲೇ ಮೊದಲು ಗಡಿಯಾರ ನಂತರ ಕ್ಯಾಲೆಂಡರ್ ಕಡೆಗೆ ಕಣ್ಣಾಡಿಸಿ ದಿನಚರಿಯನ್ನು ಆರಂಭಿಸುತ್ತೇವೆ. ಕ್ಯಾಲೆಂಡರ್ ಇಲ್ಲದೇ ಯಾವುದೇ ಕೆಲಸವನ್ನು ಆರಂಭಿಸುವುದು ಎಲ್ಲರಿಗೂ ಸ್ವಲ್ಪ ಕಷ್ಟವೇ ಆಗುತ್ತದೆ. ಇಂತಹ ಅತ್ಯಮೂಲ್ಯ ವಸ್ತುವಾಗಿ ಪರಿಣಮಿಸಿದೆ.
ಯುಗಾದಿಯಂದು ನಾವು ಪಂಚಾಂಗ ಬದಲಾಯಿಸುತ್ತೇವೆ. ಜನವರಿ 1ರಂದು ಕ್ಯಾಲೆಂಡರ್ ಬದಲಾಯಿಸಿ ದಿನಚರಿ ಆರಂಭಿಸುವುದು ಎಲ್ಲರ ವಾಡಿಕೆಯಾಗಿದೆ ಹಾಗಾಗಿ ಕ್ಯಾಲೆಂಡರ್ ಬಳಕೆ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಹಾಗಾಗಿ ನಮ್ಮ ಸಹಕಾರ ಸಂಘದ ಎಲ್ಲಾ ರೈತರಿಗೂ ಉಚಿತವಾಗಿ ಕ್ಯಾಲೆಂಡರ್ ವಿತರಣೆ ಮಾಡಲಾಗುತ್ತದೆ ಎಲ್ಲರೂ ಸಂಘಕ್ಕೆ ಬೇಟಿ ಪಡೆದುಕೊಳ್ಳಬೇಕು ಎಂದು ಎಂ.ಪಿ.ಲೋಕೇಶ್ ರೈತರು ಹಾಗೂ ಸಂಘದ ಶೇರುದಾರರಲ್ಲಿ ಮನವಿ ಮಾಡಿದರು.
ಈ ಸಂದಭದಲ್ಲಿ ಸಂಘದ ಉಪಾಧ್ಯಕ್ಷೆ ಮಂಗಳಮ್ಮ, ನಿರ್ದೇಶಕರುಗಳಾದ ಡಿ.ಬಿ.ಮಹೇಶ್, ಎಂ.ಆರ್.ರಾಮಚಂದ್ರು, ಎಂ.ಪಿ.ವಿಜಯ್ಕುಮಾರ್, ಮೇಸ್ತ್ರೀ ಶ್ರೀನಿವಾಸ್, ಎಂ.ಸಿ.ರವಿಕುಮಾರ್, ಸಂಜಯ್, ಎಂ.ಆರ್.ಹೇಮಾ, ಎಂ.ಜೆ.ಸತೀಶ್ ಕುಮಾರ್, ಸುನಂದಮ್ಮ ಮರಿಯಪ್ಪ, ಬೇಬಿಬಸವರಾಜು, ಸಂಘದ ಸಿಇಓ ಎಂ.ಆರ್.ಅನುರಾಧ, ಮಾರಾಟ ಗುಮಾಸ್ತ ಆರ್.ಸುರೇಶ್, ಸಿಬ್ಬಂದಿಗಳಾದ ಎಂ.ಎಚ್.ಪ್ರಕಾಶ್, ಎಂ.ಎಸ್.ವಿನಯ್, ಎ.ಆರ್.ರಶ್ಮಿ, ಹಾಲಿನ ಡೇರಿ ಅಧ್ಯಕ್ಷ ಮಂಜುನಾಥ್, ಬಾಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ್ ಆರ್
================================

[…] ಕೆ.ಆರ್.ಪೇಟೆ : ತಾಲ್ಲೂಕಿನ ಮಡುವಿನಕೋಡಿ ಗ್ರ… […]