ಟಿ.ನರಸೀಪುರ : ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ.ಮೊಟ್ಚ ಮೊದಲ ಭಾರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಸಿ.ಸಿ.ಘಟಕ ಆರಂಭಗೊಂಡಿದ್ದು,ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಎನ್.ಸಿ.ಸಿ.ಮಹತ್ತರ ಪಾತ್ರ ವಹಿಸುತ್ತದೆ ಹಾಗಾಗಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ನಿವೃತ್ತ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ.ನಟರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕಿನಲ್ಲೇ ಪ್ರಪ್ರಥಮ ಭಾರಿಗೆ ಸರ್ಕಾರಿ ಕಾಲೇಜಿನಲ್ಲಿ ಆರಂಭಗೊಳ್ಳುತ್ತಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ 16 ನೇ ಕರ್ನಾಟಕ ಬೆಟಾಲಿಯನ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಶಿಸ್ತು ಮತ್ತು ಸಮರ್ಪಣಾ ಮನೋಭಾವ ಹೊಂದಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ವಿ.ಉದಯಕುಮಾರ್ ರವರು ತಮ್ಮ ಸ್ವ ಹಿತಾಸಕ್ತಿ ಹಾಗೂ ಪರಿಶ್ರಮದಿಂದ ಎನ್ ಸಿ ಸಿ ಘಟಕವನ್ನು ತಮ್ಮ ಕಾಲೇಜಿಗೆ ತಂದಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಇದರ ಲಾಭವನ್ನು ಟಿ.ನರಸೀಪುರ ತಾಲ್ಲೂಕು ಸೇರಿದಂತೆ ಪಕ್ಕದ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಕೆಲವು ತಾಲ್ಲೂಕಿನ ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು.

ಮೈಸೂರು ಇನ್ನಿತರೆ ಜಿಲ್ಲೆಗಳಿಗೆ ಹೋಗಿ ಖಾಸಗಿ ಕಾಲೇಜುಗಳಿಗೆ ದಾಖಲಾಗುವ ಮುನ್ನಾ ಇಲ್ಲಿಗೆ ಬಂದು ಕಾಲೇಜಿನಲ್ಲಿರುವ ಅನುಕೂಲಗಳನ್ನು ನೋಡಿ ನಿಮಗೆ ಎಲ್ಲಾ ರೀತಿಯಲ್ಲೂ ಸರಿ ಹೊಂದುವ, ಪೋಷಕರಿಗೆ ಹೊರೆಯಾಗದ ರೀತಿ ಇದೆ.ಹೋಗಿ,ಬರುವ ಸಮಯವನ್ನು ಉಳಿಸಬಹುದು.ನೂರಕ್ಕೆ ನೂರು ಫಲಿತಾಂಶವಿರುವ ಇಂತಹ ಸರ್ಕಾರಿ ಕಾಲೇಜನ್ನು ಮಿಸ್ ಮಾಡ್ಕೊಬೇಡಿ ಎಂದರು.

ಬೆಂಗಳೂರು ಗ್ರೂಪ್ ಕ್ಯಾಪ್ಟನ್ ಇಂಡಿಯನ್ ಏರ್ ಫೋರ್ಸ್ ನ ವಿ.ಎಸ್.ಶಿವರಾಜ್ ಮಾತನಾಡಿ ಎನ್ಸಿಸಿ ಎಂದರೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್.ಇದು ಭಾರತದ ಸಶಸ್ತ್ರ ಪಡೆಗಳ ಯುವ ವಿಭಾಗವಾಗಿದ್ದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತವಾಗಿ ಸೇರಲು ಅವಕಾಶ ನೀಡುತ್ತದೆ.ಇದರ ಮುಖ್ಯ ಗುರಿ ಯುವಕರಲ್ಲಿ ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ಸಮಾಜಸೇವೆ ಮನೋಭಾವ ಬೆಳೆಸಿ ಅವರನ್ನು ಸಮರ್ಥ ನಾಗರಿಕರನ್ನಾಗಿ ರೂಪಿಸುವುದು.ಎನ್ಸಿಸಿ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಅಂಶಗಳನ್ನು ಒಳಗೊಂಡ ತ್ರಿ-ಸೇವಾ ಸಂಸ್ಥೆಯಾಗಿದ್ದು, ಕೆಡೆಟ್ಗಳಿಗೆ ಮೂಲಭೂತ ಮಿಲಿಟರಿ ತರಬೇತಿ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎನ್ ಸಿ ಸಿ ಗೆ ದಾಖಲಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಪ್ರಮಾಣ ಪತ್ರ ನೀಡಲಾಯಿತು.ಹಾಗೂ ಎನ್.ಸಿ.ಸಿ.ನಾಮಫಲಕ ಹಾಗೂ ಕೊಠಡಿ ಉದ್ಘಾಟನೆಯನ್ನು ಆಗಮಿಸಿದ್ದ ಗಣ್ಯರು ನೆರವೇರಿಸಿದರು.

ಪ್ರಾಂಶುಪಾಲರಾದ ಡಾ.ಹೆಚ್.ವಿ.ಉದಯಕುಮಾರ್,16 ಕರ್ನಾಟಕ ಬೆಟಾಲಿಯನ್ ಮೈಸೂರಿನ ಎನ್.ಸಿ.ಸಿ ಭೋಧಕ ಲೋಕೇಶ್, ಎನ್.ಸಿ.ಸಿ.,ಸಿ.ಟಿ.ಒ ಡಾ.ಅಮೀತ್,ಮೈಸೂರು ನಾರಿ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಮುರಳೀಧರ್,ಸಿಡಿಸಿ ಸದಸ್ಯ ಪ್ರವೀಣ್ ಕುಮಾರ್,ಹಳೆಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಸೋಸಲೆ ರಾಜಣ್ಣ,ಲೈಬ್ರರಿಯನ್ಡಾ .ಪುಟ್ಟಸ್ವಾಮಿ ಡಾ.ರೇಷ್ಮಾಚೆಂಗಪ್ಪ, ಡಾ.ಕೆಂಪರಾಜು,ಡಾ.ಮುತ್ತಮ್ಮ,ಕೆ.ಕೆ.ರಾಮಮೂರ್ತಿ, ರಾಘವೇಂದ್ರ ಪ್ರಸಾದ್,ಅನಂತಪದ್ಮನಾಭನ್,ನಂಜುಂಡಸ್ವಾಮಿ, ರಾಮಣ್ಣ,ಮಹೇಶ್,ಶಿವಕುಮಾರ್, ಪುಟ್ಟಸ್ವಾಮಿ, ಕಿರಣ್ ಕುಮಾರ್, ಪ್ರದೀಪ್,ಇಮ್ರಾನ್ ಪಾಷಾ,ಭಾನುಪ್ರಕಾಶ್,ಶಿವಪ್ರಸಾದ್ ಸೇರಿದಂತೆ ಇತರರಿದ್ದರು.

ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ (PG) ಕೋರ್ಸ್ಗಳಿಗೆ ಪ್ರವೇಶ ಪಡೆಯುವಾಗ ಅಂಕಗಳ ಮೀಸಲಾತಿ/ಆದ್ಯತೆ ನೀಡಲಾಗುತ್ತದೆ.ಸರ್ಕಾರಿ ಉದ್ಯೋಗಗಳು ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳು (CRPF, BSF ಇತ್ಯಾದಿ), ಅರೆಸೇನಾ ಪಡೆಗಳಲ್ಲಿ ಆದ್ಯತೆ ಸಿಗುತ್ತದೆ.ಮಿಲಿಟರಿ ಸೇವೆ ಕಮಾಂಡೆಂಟ್ ಡಿಫೆನ್ಸ್ ಸರ್ವೀಸ್ ಲಿಖಿತ ಪರೀಕ್ಷೆಯಿಂದ ವಿನಾಯಿತಿ ಮತ್ತು ಎಸ್ ಎಸ್ ಬಿ ಸಂದರ್ಶನಕ್ಕೆ ನೇರ ಕರೆ (C ಪ್ರಮಾಣ ಪತ್ರದೊಂದಿಗೆ A/B ಗ್ರೇಡ್ ಪಡೆದವರಿಗೆ).
ಕಾರ್ಪೊರೇಟ್ ವಲಯ ಹಲವು ದೊಡ್ಡ ಕಂಪನಿಗಳು ಎನ್ಸಿಸಿ ‘C’ ಪ್ರಮಾಣ ಪತ್ರ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುತ್ತವೆ.
– ವಿ.ಎಸ್.ಶಿವರಾಜ್
ಗ್ರೂಪ್ ಕ್ಯಾಪ್ಟನ್
ಇಂಡಿಯನ್ ಏರ್ ಫೋರ್ಸ್
ಬೆಂಗಳೂರು.
ಎಂ.ನಾಗೇಂದ್ರಕುಮಾರ್
