ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಸಾಧುಗೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪದ್ಮಅಣ್ಣೇಗೌಡ,ಉಪಾಧ್ಯಕ್ಷರಾಗಿ ಪಾರ್ವತಮ್ಮ ಲೇಟ್ ರಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಅನಿತಾಮಂಜೇಗೌಡ,ಉಪಾಧ್ಯಕ್ಷರಾಗಿದ್ದ ಚಂದ್ರಕಲಾರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ಚುನಾವಣೆ ನಿಗದಿಯಾದ ಹಿನ್ನೆಲೆ ಅಧ್ಯಕ್ಷ ಸ್ಥಾನ ಬಯಸಿ ಪದ್ಮಅಣ್ಣೇಗೌಡ ಉಪಾಧ್ಯಕ್ಷ ಸ್ಥಾನ ಬಯಸಿ ಪಾರ್ವತಮ್ಮ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರೆ ಉಳಿದ ಯಾವ ಸದಸ್ಯರು ತಮ್ಮ ನಾಮಪತ್ರವನ್ನು ಸಲ್ಲಿಸದ ಕಾರಣ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪದ್ಮ ಮಂಜೇಗೌಡ ನೂತನ ಉಪಾಧ್ಯಕ್ಷರಾಗಿ ಪಾರ್ವತಮ್ಮ ಲೇಟ್ ರಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಂಘದ ಕಾರ್ಯದರ್ಶಿ ಪವಿತ್ರತಿಮ್ಮೇಗೌಡ ಚುನಾವಣಾ ಪ್ರಕ್ರಿಯೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷೆ ಪದ್ಮ ಅಣ್ಣೇಗೌಡ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷರಾಗಲು ಸಹಕರಿಸಿದ ನಮ್ಮ ಗ್ರಾಮದ ಮುಖಂಡರು ಹಾಗೂ ಸಂಘದ ಸರ್ವ ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು.ಹಾಲು ಉತ್ಪಾದಕರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು.ಸಂಘವು ಉಳಿದರೆ ನಾವೆಲ್ಲರೂ ಉಳಿದಂತೆ. ನನ್ನ ಆಡಳಿತ ಅವಧಿಯಲ್ಲಿ ಪ್ರಮುಖವಾಗಿ ಅವಶ್ಯಕತೆ ಇರುವ ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ದೇಶಕರು ಮತ್ತು ಗ್ರಾಮಸ್ಥರ ಸಹಕಾರ ಪಡೆದುಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಗ್ರಾಮದ ಮುಖಂಡ ಎಸ್.ಎಂ ಲೋಕೇಶ್ ಅವರು ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸಂಘದಲ್ಲಿ ರಾಜಕಾರಣ ಬೆರಸದೇ ಪಕ್ಷಾತೀತವಾಗಿ ಪಾಲ್ಗೊಂಡು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಅವಿರೋಧ ಆಯ್ಕೆ ಪ್ರಕಟ ಆಗುತ್ತಿದಂತೆ ಗ್ರಾಮಸ್ಥರು, ಬೆಂಬಲಿಗರು,ಹಾರ ತುರಾಯಿಗಳನ್ನು ಹಾಕಿ ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಿಸಿದರು.
ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರುಗಳಾದ ಎ.ಬಿ.ಪ್ರೇಮ ಚಂದ್ರಹಾಸೇಗೌಡ,ರೇಖಾಲೋಕೇಶ್, ಅನ್ನಪೂರ್ಣ ನಂಜುಂಡೇಗೌಡ,ಹೇಮಮಂಜು,ರಾಜೇಗೌಡ, ಹಾಗೂ ಗ್ರಾಮದ ಮುಖಂಡರಾದ ಅಣ್ಣೇಗೌಡ,ಸುಂದ್ರೇಗೌಡ,ನಾಗೇಶ್, ರಮೇಶ್,ರಾಜೇಗೌಡ, ನರಸಿಂಹೇಗೌಡ,ಗಣೇಶ್, ಗ್ರಾಮ ಪಂಚಾಯತಿ ಸದಸ್ಯ ಕುಮಾರ್,ಲೋಕೇಶ್, ಕೋಳಿಮಂಜು, ನಂಜುಂಡೇಗೌಡ ರಘು, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
