ಬೇಲೂರು : ಬೇಲೂರು ಪಟ್ಟಣದ ಬಂಟೇನಹಳ್ಳಿ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಲೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ನೇತೃತ್ವದ ತಂಡ ಬಂಟೇನಹಳ್ಳಿಯ ಫಾರೆಸ್ಟ್ ಕಚೇರಿ ಸಮೀಪ ಸ್ಕೂಟಿಯಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಶಶಾಂಕ್ (ಬಂಟೇನಹಳ್ಳಿ ನಿವಾಸಿ) ಹಾಗೂ ದಿಲೀಪ್ (ಹೊಸನಗರ ನಿವಾಸಿ) ಎಂಬ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ತಪಾಸಣೆ ವೇಳೆ ಅವರ ಬಳಿ ಸುಮಾರು 220 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅಂದಾಜು ಮೌಲ್ಯ ರೂ. 50,000 ಎಂದು ತಿಳಿದುಬಂದಿದೆ.
