ಚನ್ನರಾಯಪಟ್ಟಣ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಟೀ ಶರ್ಟ್ ಬಿಡುಗಡೆ ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆಯ ಜೊತೆಗೆ ಸ್ನೇಹ ಹಾಗೂ ಸೌಹಾರ್ದತೆ ಮುಖ್ಯ ಎಂದರು.
ಕ್ರೀಡೆ ಎಂಬುದು ಮನರಂಜನೆಯಾಗಿರಬೇಕು ಅಷ್ಟೇ. ಗೆಲುವು ಹಾಗೂ ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸೋತ ತಕ್ಷಣ ಆತ್ಮಸ್ಥೆರ್ಯ ಕಳೆದುಕೊಳ್ಳಬಾರದು. ಗೆಲುವು ಒಂದು ಗುರಿಯಾಗಿರಬೇಕು ಹೊರತು ಗೆಲುವೇ ಉದ್ದೇಶವಾಗಿರಬಾರದು. ಸೋಲಿನ ನಂತರ ಗೆಲುವು ಇದ್ದೇ ಇರುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್.ದೀಪ ಮಾತನಾಡಿ, ಕ್ರೀಡಾಪಟುಗಳಲ್ಲಿ ಶ್ರದ್ದೆ, ಶಿಸ್ತು ಹಾಗೂ ಕಠಿಣ ಪರಿಶ್ರಮ ಅಗತ್ಯವಿದೆ. ನಿರಂತರ ಅಭ್ಯಾಸದಿಂದ ಯಾವುದೇ ಕ್ರೀಡೆಯಲ್ಲಿ ಭಾಗವಹಿಸಿದರೆ ಸಾಧನೆಯ ಗುರಿ ಸುಲಭವಾಗಲಿದೆ ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಟೀ ಶರ್ಟ್ ಬಿಡುಗಡೆಗೊಳಿಸಿ ಟ್ರೋಫಿ ಅನಾವರಣ ಮಾಡಿದರು.
ತಾಲ್ಲೂಕು ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಉಪಾಧ್ಯಕ್ಷರಾದ ಕೆ.ಪಿ.ಪುಟ್ಟರಾಜು, ನಂದನ್, ಕಾರ್ಯದರ್ಶಿಗಳಾದ ಜಯಕುಮಾರ್, ನಾಗೇಂದ್ರ.ರಾ.ಯ., ಖಜಾಂಚಿ ಎಂ.ಎಲ್.ನಾಗೇಶ್, ನಿಕಟಪೂರ್ವ ಅಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಎಂ.ನಟೇಶ್, ಪಾಂಡುರಂಗ, ಸದಸ್ಯರಾದ ಹಿ.ಕೃ.ಚಂದ್ರು, ಮಂಜುನಾಥ್ ಹಂಚೀಹಳ್ಳಿ, ಐ.ಕೆ. ಮಂಜುನಾಥ್, ಪ್ರದೀಪ್, ಗೋವಿಂದ್, ಗೋವಿಂದ ರಾಜ್, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಇದ್ದರು.
