ಇತ್ತೀಚಿನ ದಿನಗಳಲ್ಲಿ ನಕಲಿ ಲೋನ್ ಆಯಪ್ಗಳ ಹಾವಳಿ ಮತ್ತು ಕಿರುಕುಳ ಸ್ವಲ್ಪ ಕಡಿಮೆಯಾದಂತೆ ಕಂಡರೂ, ಇವುಗಳ ಜಾಲಕ್ಕೆ ಸಿಲುಕಿ ನರಳುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಈ ಹಿಂದೆ ನಡೆದ ಇಂತಹ ಭೀಕರ ಘಟನೆಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹೈದರಾಬಾದ್ನ ಸನತ್ನಗರದ 46 ವರ್ಷದ ಆಯುರ್ವೇದ ವೈದ್ಯರೊಬ್ಬರು ನಕಲಿ ಲೋನ್ ಆಯಪ್ ನಿರ್ವಾಹಕರಿಂದ ಬರೊಬ್ಬರಿ 36.16 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ನಡೆದಿದ್ದೇನು?
ಈ ಘಟನೆಯು 2025ರ ಆಗಸ್ಟ್ನಲ್ಲಿ ಆರಂಭವಾಗಿತ್ತು. ಸಂತ್ರಸ್ತ ವೈದ್ಯರು ಮೊದಲು ಎರಡು ಲೋನ್ ಆಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಸಣ್ಣ ಮೊತ್ತದ ಸಾಲ ಪಡೆದಿದ್ದರು. ಆದರೆ, ಲೋನ್ ಆಯಪ್ ನಿರ್ವಾಹಕರು ವೈದ್ಯರ ಅನುಮತಿಯಿಲ್ಲದೆಯೇ ಅವರ ಖಾತೆಗೆ ದೊಡ್ಡ ಮೊತ್ತದ ಹಣವನ್ನು ಜಮೆ ಮಾಡಲಾರಂಭಿಸಿದರು.
ಬ್ಲ್ಯಾಕ್ ಮೇಲ್ ತಂತ್ರ
• ಪೋಟೋ ಮಾರ್ಫಿಂಗ್: ಸಾಲದ ಮೊತ್ತವನ್ನು ಏಳು ದಿನಗಳಲ್ಲಿ ಮರುಪಾವತಿ ಮಾಡಬೇಕೆಂದು ಮೊದಲು ತಿಳಿಸಲಾಗಿತ್ತು. ಆದರೆ ಆರನೇ ದಿನದಿಂದಲೇ ಬೆದರಿಕೆ ಕರೆಗಳು ಬರತೊಡಗಿದವು.
• ಡೇಟಾ ಕಳ್ಳತನ: ಆಯಪ್ ಇನ್ಸ್ಟಾಲ್ ಮಾಡುವಾಗ ಕಾಂಟ್ಯಾಕ್ಟ್ ಮತ್ತು ಫೋಟೋ ಗ್ಯಾಲರಿ ಆಕ್ಸೆಸ್ ಪಡೆದಿದ್ದ ವಂಚಕರು, ವೈದ್ಯರ ಫೋಟೋಗಳನ್ನು ಅಶ್ಲೀಲ ಚಿತ್ರಗಳೊಂದಿಗೆ ಮಾರ್ಫಿಂಗ್ ಮಾಡಿದ್ದರು.
• ಬೆದರಿಕೆ: ಹಣ ನೀಡದಿದ್ದರೆ ಈ ಮಾರ್ಫಿಂಗ್ ಮಾಡಿದ ಫೋಟೋಗಳನ್ನು ವೈದ್ಯರ ಪರಿಚಯಸ್ಥರಿಗೆ ಮತ್ತು ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ 36 ಲಕ್ಷಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ.
ಹಣಕಾಸಿನ ನಷ್ಟ:
ಈ ವಂಚನೆ ಸೆಪ್ಟೆಂಬರ್ 2025 ರಿಂದ ಫೆಬ್ರವರಿ 2026 ರವರೆಗೆ ಮುಂದುವರಿದಿದೆ. ಈ ಅವಧಿಯಲ್ಲಿ ವೈದ್ಯರ ಖಾತೆಗೆ 29 ಲಕ್ಷ ರೂಪಾಯಿ ಜಮೆಯಾಗಿತ್ತು. ಆದರೆ ವಂಚಕರ ಬ್ಲ್ಯಾಕ್ಮೇಲ್ಗೆ ಹೆದರಿ ವೈದ್ಯರು ಬಡ್ಡಿ ಸಮೇತ ಒಟ್ಟು 64 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಅಂತಿಮವಾಗಿ ಅವರು 36.16 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ವೈದ್ಯರ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318 (4) (ವಂಚನೆ), 319 (2), 338 (ಫೋರ್ಜರಿ), 340 (2) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66(C), 66(D), 67(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರ
