ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ನಾರ್ಗೋನಹಳ್ಳಿ ಗ್ರಾಮ ದೇವತೆ ಶ್ರೀ ಕನ್ನಂಬಾಡಮ್ಮ ಹಬ್ಬದ ಪ್ರಯುಕ್ತ ಗ್ರಾಮದ ಶ್ರೀ ಕನ್ನಂಬಾಡಮ್ಮ ಯುವಕರ ಬಳಗ ಏರ್ಪಡಿಸಿದ ಟೆನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭಕೋರಿ ಮಾತನಾಡಿದರು.
ನಾರ್ಗೋನಹಳ್ಳಿ ಗ್ರಾಮ ದೇವತೆ ಕನ್ನಂಬಾಡಮ್ಮ ಹಬ್ಬದ ಪ್ರಯುಕ್ತ ಗ್ರಾಮದ ಶ್ರೀ ಕನ್ನಂಬಾಡಮ್ಮ ಯುವಕ ಬಳಗ ಒಗ್ಗಟ್ಟಿನಿಂದ ಆರೋಗ್ಯವಂತ ಸಮಾಜಕ್ಕೆ ಸಹಕಾರಿಯಾಗುವ ಕ್ರಿಕೆಟ್ ಕ್ರೀಡೆ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ.ಆರೋಗ್ಯಕರ ಕ್ರೀಡೆಗಳಲ್ಲಿ ಪ್ರತಿಭೆ ಹೊರ ತರಬೇಕು ಅಲ್ಲದೆ, ತೀರ್ಪುಗಾರರು ಕೂಡ ಒತ್ತಡಕ್ಕೆ ಒಳಗಾಗದೆ ಸರಿಯಾದ ರೀತಿಯಲ್ಲಿ ತೀರ್ಪು ನೀಡಿ ಉತ್ತಮ ಕ್ರೀಡಾ ಪಟುಗಳಿಗೆ ಪ್ರೊತ್ಸಾಹ ನೀಡಬೇಕು. ಇದು ಕ್ರೀಡಾಪಟುಗಳು ಕ್ರೀಡಾಕೂಟಗಳು ಗಳಲ್ಲಿ ಸ್ಪರ್ಧಾತ್ಮಕ ಮನೋಬಾವನೆ ಬೆಳೆಸಿಕೊಳ್ಳಲು ಸಹಕಾರಿ ಯಾಗಲಿದೆ. ಆದ್ದರಿಂದ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಮಾನಸಿಕ,ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಮುಖಂಡರಾದ ನಾಗರಾಜು, ಸುರೇಶ್,ಮೋನಿಷಾ, ಸಚಿನ್, ರಾಜು, ವರ್ದನ್, ನಕುಲ್, ಪವನ್, ನಿಖಿತ್, ದರ್ಶನ್, ಸುನಿಲ್, ಅಪ್ಪು, ಶಿವು, ಕಿಶೋರ್, ಪ್ರೀತಮ್, ರಾಜು, ಯೋಗೇಶ್, ರಾಕೇಶ್, ವಿಜಯ್, ಸ್ವಾಮಿ, ಜಗದೀಶ್, ಹರೀಶ್,ಭರತ್, ಪ್ರದೀಪ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
