ಕೆ.ಆರ್.ಪೇಟೆ,ಫೆ.11:ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಸುತ್ತದೆ. ಅದರಲ್ಲೂ ಒಳಾಂಗಣ ಕ್ರೀಡೆಗಳಿಂದ ಹವಾಮಾನದ ತೊಂದರೆಗಳಿಲ್ಲದೆ ಸ್ಥಿರವಾದ ಮೇಲ್ಮೆöÊನಲ್ಲಿ ಆಟವಾಡುವುದರಿಂದ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಒಳಾಂಗಣ ಕ್ರೀಡೆಗಳಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಎಂದು ಶಾಸಕರಾದ ಹೆಚ್.ಟಿ.ಮಂಜು ಅವರು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶಂಕರ್ ಸ್ಪೋಟ್ಸ್ ಅಕಾಡೆಮಿಯು ಶಂಕರ್ ಒಳಾಂಗಣ ಕ್ರೀಡಾಂಣದಲ್ಲಿ ಆಯೋಜಿಸಿದ್ದ ಕೆ.ಆರ್,ಪೇಟೆ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತಾವೂ ಸಹ ಷಟಲ್ ಬ್ಯಾಡ್ಮಿಂಟನ್ ಆಟ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ಆಡುವ ಕ್ರೀಡೆಗಳಾದ ಟೇಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಚೆಸ್ ಪಂದ್ಯಾವಳಿ, ಈಜು, ಸ್ಕಿಪ್ಪಿಂಗ್, ಲೋಡೋ ಹಾಗೂ ಕೇರಂ ಕ್ರೀಡೆಗಳು ಜನಪ್ರಿಯ ಒಳಾಂಗಣ ಕ್ರೀಡೆಗಳಾಗಿವೆ. ಒಳಾಂಗಣ ಕ್ರೀಡೆಗಳನ್ನು ಮನೆಗಳು, ಸಮುದಾಯ ಕೇಂದ್ರಗಳು, ಸ್ಪೋಟ್ಸ್ ಕ್ಲಬ್ ಒಳಾಂಗಣ ಕ್ರೀಡೆಗಳನ್ನು ಸಮತಟ್ಟಾದ ಜಾಗದಲ್ಲಿ ಮಳೆ ಬಿಸಿಲುಗಳಿಂದ ಸುರಕ್ಷಿತ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ಯಾವುದೇ ಕಾಲದಲ್ಲಿಯೂ ಆಟವಾಡುವ ಮೂಲಕ ದೈನಂದಿನ ಜಂಜಾಟದಿಂದ ಕೆಲವು ಗಂಟೆಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಮೆದುಳಿಗೆ ಚುರುಕುತನವನ್ನು ನೀಡಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ ಹಾಗಾಗಿ ಹೆಚ್ಚಿನ ಕ್ರೀಡಾಸಕ್ತರು ಒಳಾಂಗಣ ಕ್ರೀಡೆಗಳನ್ನು ಇಷ್ಟಪಡುತ್ತಾರೆ.
ಈ ಹಿನ್ನೆಲೆಯಲ್ಲಿ ನಮ್ಮ ಕೆ.ಆರ್.ಪೇಟೆ ಪಟ್ಟಣದ ಉದ್ಯಮಿಗಳಾದ ಕೆ.ಟಿ.ಶಂಕರ್ ಅವರು ಸ್ವತಃ ಕ್ರೀಡಾಪಟುವಾಗಿದ್ದು ತಮ್ಮ ಸ್ವಂತ ಜಾಗದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡೆಗಳನ್ನು ಆಗಾಗ್ಗೆ ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಈ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಹಕಾರ ನೀಡುತ್ತಿದ್ದಾರೆ. ಯುವಕರು ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಸಹಕಾರಿಯಾಗಿವೆ ಈ ನಿಟ್ಟಿನಲ್ಲಿ ಶಂಕರ್ ಸ್ಪೋಟ್ಸ್ ಅಕಾಡೆಮೆ ಮುಖ್ಯಸ್ಥರಾದ ಕೆ.ಟಿ.ಶಂಕರ್ ಅವರು ಯುವ ಜನರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಇಲ್ಲಿ ಸೇರಿರುವ ಕ್ರೀಡಾಪಟುಗಳೇ ಸಾಕ್ಷಿಯಾಗಿದ್ದಾರೆ ಎಂದು ಶಾಸಕರು ಶಂಕರ್ ಸ್ಪೋಟ್ಸ್ ಅಕಾಡೆಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮುಖಂಡರಾದ ಮನ್ಮುಲ್ ನಿರ್ದೇಶಕರುಗಳಾದ ಡಾಲು ರವಿ, ಎಂ.ಬಿ.ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ಕುಮಾರ್, ಕಿಕ್ಕೇರಿ ಸೊಸೈಟಿ ಮಾಜಿ ಅಧ್ಯಕ್ಷ ಸಾಸಲು ಈರಪ್ಪ, ಡಾಬಾ ಮಂಜು, ಮಾಜಿ ಪುರಸಭಾ ಸದಸ್ಯರಾದ ಬಿ.ಜಿ.ಗಿರೀಶ್, ಮಾಜಿ ಪುರಸಭಾ ಸದಸ್ಯರಾದ ಗಿರೀಶ್, ವಿಶ್ವನಾಥ್, ಸೌಭಾಗ್ಯ ಉಮೇಶ್, ಸಲಾವುದ್ದೀನ್, ದೊದ್ದನಕಟ್ಟೆ ಮಂಜುನಾಥ್, ಬಸ್ ಯೋಗೇಶ್, ಪ್ರಾಂಶುಪಾಲ ಕೆ.ಪ್ರಸನ್ನಕುಮಾರ್, ವಕೀಲ ಪ್ರಸನ್ನ, ತರಬೇತುದಾರರಾದ ಕೆ.ಟಿ.ಶಂಕರ್ ಮತ್ತು ದೀಪಾ ಶಂಕರ್ ಹಾಗೂ ಶಂಕರ್ ಸ್ಪೋಟ್ಸ್ ಅಕಾಡೆಮಿಯ ಹಿರಿಯ-ಕಿರಿಯ ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು, ಮುಖಂಡರಾದ ಆರ್.ಟಿ.ಓ.ಮಲ್ಲಿಕಾರ್ಜುನ್, ಕಿಕ್ಕೇರಿ ಸುರೇಶ್, ಡಾಲು ರವಿ, ಎಂ.ಬಿ.ಹರೀಶ್, ಎಸ್.ಅಂಬರೀಶ್, ಮಲ್ಲೇನಹಳ್ಳಿ ಮೋಹನ್, ಉದ್ಯಮಿ ಪುರ ವಿಶ್ಬನಾಥ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ಕುಮಾರ್ ಅವರನ್ನು ಶಂಕರ್ ಸ್ಪೋಟ್ಸ್ ಅಕಾಡೆಮಿಯ ಮುಖ್ಯಸ್ಥರಾದ ಕೆ.ಟಿ.ಶಂಕರ್ ಮತ್ತು ದೀಪಶ್ರೀಶಂಕರ್ ಅವರು ಅಕಾಡೆಮೆ ಪರವಾಗಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
– ಶ್ರೀನಿವಾಸ್ ಆರ್.
