ಕೊರಟಗೆರೆ :- ಪಟ್ಟಣದ 4ನೇ ವಾರ್ಡನ ಹಿಂದುಳಿದ ಬಲಿಜ ಸಮುದಾಯದ ಕೆ.ಎಸ್. ಲಕ್ಷ್ಮೀಶ್ ಸಿವಿಲ್ ನ್ಯಾಯಧೀಶರ ಪರೀಕ್ಷೆಯಲ್ಲಿ 25 ನೇ ರ್ಯಾಂಕ್ ಗಳಿಸಿದ್ದಾರೆ.
ಕೊರಟಗೆರೆ ಪಟ್ಟಣದ 4 ನೇ ವಾರ್ಡನ ಗಿರಿನಗರದ ವಾಸಿ ಶ್ರೀನಿವಾಸ ಮತ್ತು ಯಶೋಧಮ್ಮನವರ ಪುತ್ರ ಕೆ.ಎಸ್. ಲಕ್ಷ್ಮೀಶ್ 2025 ಮತ್ತು 2026 ಸಾಲಿನಲ್ಲಿ ನಡೆದ ಸಿವಿಲ್ ನ್ಯಾಯಧೀಶರ ಪರೀಕ್ಷೆಯಲ್ಲಿ 25 ನೇ ರ್ಯಾಂಕ್ ಪಡೆದು ಸಿವಿಲ್ ನ್ಯಾಯಧೀಶರಾಗಿ ಅಯ್ಕೆಯಾಗಿದ್ದರೆ, ತಂದೆ ಶ್ರೀನಿವಾಸ್ ಸಾಮಿಲ್ನಲ್ಲಿ ಮರಕೂಯ್ಯುವ ಕೆಲಸ ತಾಯಿ ಯಶೋಧಮ್ಮ ಮನೆಯಲ್ಲಿ ಬೀಡಿ ಸುತ್ತುವ ಕೆಲಸ ಮಾಡಿಕೊಂಡು ಮೂರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗುವಿನೊಂದಿಗೆ ಗುಡಿಸಿಲಿನಲ್ಲಿ ವಾಸ ಮಾಡಿ ಇತ್ತೀಚೆಗೆ ಒಂದು ಪುಟ್ಟಮನೆಯನ್ನು ಕಟ್ಟಕೊಂಡಿದ್ದರು, ಬಡತನ ಸಾಧನೆಗೆ ಅಡ್ಡಿ ಬರುವುದಿಲ್ಲ ಎಂದು ಇವರ ಮಗ ಕೆ.ಎಸ್. ಲಕ್ಷ್ಮೀಶ್ ತಮ್ಮ 26 ನೇ ವಯಸ್ಸಿಗೆ ಸಿವಿಲ್ ನ್ಯಾಯಧೀಶರ ಪರೀಕ್ಷೆಯಲ್ಲಿ ಸಾಧಿಸಿ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ಬಲಿಜ ಸಮುದಾಯದಿಂದ ಲಕ್ಷ್ಮೀಶ್ ರವರನ್ನು ಸನ್ಮಾನಿಸಲಾಯಿತು ನಂತರ ಕೆ.ಎಸ್. ಲಕ್ಷ್ಮೀಶ್ ಮಾತನಾಡಿ ನನ್ನ ತಂದೆ ತಾಯಿಗಳ ಆಶೀರ್ವಾದ ಮತ್ತು ಶ್ರಮದಿಂದ ಈ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯಲು ಕಾರಣ ಎಂದರು, ತಂದೆ ಶ್ರೀನಿವಾಸ್ ಮಾತನಾಡಿ ನಾನು ಒಂದನೇ ತರಗತಿಯನ್ನು ಓದಿಲ್ಲ ಕೂಲಿ ಮತ್ತು ವ್ಯವಸಾಯ ಮಾಡಿ ಮಗನನ್ನು ಕಷ್ಟು ಪಟ್ಟು ಓದಿಸಿದೆ ಅವನು ಇವತ್ತು ಸಮಾಜದಲ್ಲಿ ಸ್ಥಾನ ಗಳಿಸಿರುವುದು ಸಂತೋಷ ತಂದಿದೆ ಎಂದರು, ತಾಯಿ ಯಶೋಧಮ್ಮ ಮಾತನಾಡಿ ನಾವು ಬಡತನದಲ್ಲಿ ಇದ್ದು ನನ್ನ ಮಗನನ್ನು ಓದಿಸಿ ಅವನ ಸಾಧನೆ ನನಗೆ ಹೆಮ್ಮೆ ತಂದಿದೆ ನನ್ನ ಮಗನಿಂದ ಸಮಾಜಕ್ಕೆ ಒಳ್ಳೆಯದಾಗಲಿ ಎಂದರು,
ಈ ಸಂದರ್ಭದಲ್ಲಿ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್, ನಿರ್ದೇಶಕರುಗಳಾದ ಕೆ.ವಿ.ಪುರುಷೋತ್ತಮ, ಕೆ.ಅರ್.ತಿಮ್ಮರಾಜು, ಗೋವಿಂದಪ್ಪ, ಯುವ ಬಲಿಜ ಸಂಘದ ದೇವರಾಜು ಸನ್ಮಾನಿಸಿದರು.
ವರದಿ : ಶ್ರೀನಿವಾಸ್ ಆರ್
