ತುಮಕೂರು:ಜಿಲ್ಲಾ ನ್ಯಾಯಾಂಗ ಇಲಾಖೆಯ ನೌಕರರು 1964ಕ್ಕೂ ಮೊದಲಿನಿಂದಲೂ ವಿವಿಧ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈಗ ಸುಮಾರು 500ಜನ ನೌಕರರು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ನ್ಯಾಯಾಂಗ ಇಲಾಖೆಯ ನೌಕರರು ತಮ್ಮ ನೂತನ ವಸತಿ ಗೃಹಗಳನ್ನು ಕಟ್ಟಲು ಕನಿಷ್ಠ 5 ಎಕರೆ ಜಮೀನು ಮಂಜೂರು ಮಾಡಲು ಈ ಹಿಂದೆ ಸಹ ಜಿಲ್ಲಾಡಳಿತಕ್ಕೆ ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಬರುತ್ತಿತ್ತು,ಆದರೆ ಈಗ ರಾಜ್ಯ ಉಚ್ಛನ್ಯಾಯಾಲಯಕ್ಕೆ ನೌಕರರು ಮನವಿ ಸಲ್ಲಿಸಿದ್ದರಿಂದ ನೌಕರರ ಮನವಿ ನ್ಯಾಯಯುತವಾಗಿದ್ದು ಜಿಲ್ಲಾಡಳಿತ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ವಹಿಸತಕ್ಕದ್ದು ಎಂದು ಪತ್ರ ಬರೆದಿದ್ದು ಅದರಂತೆ ಜಿಲ್ಲಾ ನೌಕರರ ವಸತಿ ಗೃಹಗಳನ್ನು ಕಟ್ಟಲು 5ಎಕರೆ ಜಮೀನನ್ನು ತಾಲ್ಲೋಕಿನ ಅಮಲಾಪುರ ಗ್ರಾಮದಲ್ಲಿ ಈಗಾಗಲೇ ಜಿಲ್ಲಾ ನ್ಯಾಯಾಲಯ,ನ್ಯಾಯಾಧೀಶರುಗಳ ವಸತಿ ಗೃಹಗಳನ್ನು ಕಟ್ಟಲು ಜಾಗ ಮಂಜೂರು ಆಗಿದ್ದು ಅದರ ಪಕ್ಕದಲ್ಲಿ ನಮಗೂ ಸಹ 5ಎಕರೆ ಜಮೀನು ಮಂಜೂರು ಮಾಡಿ ನಮಗೆ ವಸತಿ ಗೃಹಗಳನ್ನು ಕಟ್ಟಲು ಅನುವು ಮಾಡಿಕೊಡಬೇಕು
ನಮ್ಮ ನ್ಯಾಯಯುತ ಬೇಡಿಕೆಯನ್ನು ಜಿಲ್ಲಾಡಳಿತ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾ ನ್ಯಾಯಾಂಗ ಇಲಾಖೆಯ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಎಂ.ಕೆ.ಜಗದೀಶ್,ಉಪಾಧ್ಯಕ್ಷರಾದ ಎಸ್.ಶಿವಣ್ಣ, ಕಾರ್ಯದರ್ಶಿ ಚಿದಾನಂದಮೂರ್ತಿ.ಆರ್,ಖಜಾಂಚಿ ಸಿ.ಕೆ.ದಿನೇಶ್,ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಹರೀಶ್.ಡಿ.ಆರ್, ದಸ್ತಗೀರ್,ಮುಂತಾದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ರವರಿಗೆ ಮನವಿ ಸಲ್ಲಿಸಿದರು.
ವರದಿ : ಕೆ ಬಿ ಚಂದ್ರಚೂಡ್
