ತುಮಕೂರು: ನಗರದ ಬನಶಂಕರಿ, ಶಾಂತಿನಗರ, ಅಮರಜ್ಯೋತಿನಗರ, ಸದಾಶಿವನಗರ, ವೀರಸಾಗರ, ಕುರಿಪಾಳ್ಯ, ಸರಸ್ವತಿಪುರಂ, ಮರಳೂರು, ಮರಳೂರು ದಿಣ್ಣೆ ವಸತಿಗಳ ಹಿಂದು ಸಮಾಜೋತ್ಸವ ಸಮಿತಿಯಿಂದ ಗುರುವಾರ ಸಂಜೆ ಕುಣಿಗಲ್ ರಸ್ತೆಯಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು.
ರಿಂಗ್ ರಸ್ತೆಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಭಾರತಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕಾರದ ವೀರಬಸವ ಸ್ವಾಮೀಜಿ, ಹಿಂದೂಗಳು ಹಿಂದೂ ಧರ್ಮದ ಹಬ್ಬವನ್ನು ಆಚರಿಸುತ್ತಿರುವ ಇಂದು ಪುಣ್ಯದ ದಿನ. ಇಂತಹ ಭರತ ಖಂಡದಲ್ಲಿ ಜನಿಸಿದ ನಾವೇ ಪುಣ್ಯವಂತರು. ಹಿಂದೂ ಧರ್ಮದ ಶ್ರೇಷ್ಠ ಆಚಾರವಿಚಾರ, ಸಂಸ್ಕೃತಿ, ಸಂಸ್ಕಾರದ ಶ್ರೇಷ್ಠತೆ ಜಗತ್ತಿಗೆ ಮಾದರಿಯಾಗಿವೆ. ಅನೇಕ ರಾಷ್ಟçಗಳು ಭಾತರೀಯ ಸಂಸ್ಕೃತಿಗೆ ಮಾರುಹೋಗಿವೆ ಎಂದು ಹೇಳಿದರು.
ಭಾರತದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪತ್ತಿನ ಮೇಲೆ ದೌರ್ಜನ್ಯ ನಡೆದರೂ ಯಾವುದೇ ಪರಿಣಾಮವಾಗದೆ ಯಾವುದಕ್ಕೂ ಧಕ್ಕೆಯಾಗದ ರೀತಿಯಲ್ಲಿ ದೇಶ ಮುನ್ನಡೆಯುತ್ತಿದೆ. ಅಲೆಕ್ಸಾಂಡರನು ಭಾರತದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅರಿಸ್ಟಾಟಲ್ ಅವನಿಗೆ ಹೇಳಿದ್ದ, ನೀನು ಆ ದೇಶದ ಯಾವುದೇ ಸಂಪತ್ತು ತರುವ ಬದಲು ಭರತಖಂಡದ ಮಣ್ಣು, ಗಂಗೆ, ಒಬ್ಬ ಗುರುವನ್ನು ತೆಗೆದುಕೊಂಡು ಬಾ ನಿನ್ನ ದೇಶ ಉದ್ಧಾರವಾಗುತ್ತದೆ ಎಂದು. ಅಂದರೆ ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ಶ್ರೇಷ್ಠತೆ ಆಗಲೇ ಜಗತ್ತಿಗೆ ತಿಳಿದಿತ್ತು ಎಂದರು.
ಶಾಂತಿ, ಸೌಹಾರ್ದತೆ, ಸಹಬಾಳ್ವೆ ಬಯಸುವ ಹಿಂದೂ ಸಂಸ್ಕೃತಿ ಪ್ರಪಂಚಕ್ಕೇ ಮಾದರಿ, ಮಣ್ಣನ್ನು, ನೀರನ್ನು ಗಿಡಮರವನ್ನು, ಮನುಷ್ಯನನ್ನು ದೇವರೆಂದು ಪೂಜಸುವ ಸಂಸ್ಕಾರದ ದೇಶ ನಮ್ಮದು. ಹಿಂದೂ ಸಮಾಜೋತ್ಸವ ಆಚರಣೆಯು ಸಮಾಜದಲ್ಲಿ ಹಿಂದುತ್ವ ಭಾವನೆಯನ್ನು ಮತ್ತಷ್ಟು ಬಲಪಡಿಸುವುದು, ಸಮಾಜದ ಬಗ್ಗೆ ಒಗಟ್ಟು ಮೂಡಿಸಲು ಸಹಕಾರಿಯಾಗಿದೆ ಎಂದು ಸ್ವಾಮೀಜಿ ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಗುರುಸಿದ್ಧಪ್ಪ, ಕೆಂಬಾಳ್ ರವೀಂದ್ರ, ರಂಗನಾಥ್ ಲಾಡ್, ಮನೋಹರ ಮಠದ್, ಟಿ.ಸಿ.ಶಿವಕುಮಾರ್, ಕೆ.ವೇದಮೂರ್ತಿ, ಟಿ.ಹೆಚ್.ಹನುಮಂತರಾಜು, ಬೆಳ್ಳಿ ಲೋಕೇಶ್, ಧರಣೇಂದ್ರಕುಮಾರ್, ಕೃಷ್ಣಮೂರ್ತಿ, ಬಂಬೂ ಮೋಹನ್, ಕುಮಟೇಶ್, ಕಡ್ಡಿ ಕುಮಾರ್, ನಿಸರ್ಗ ರಮೇಶ್, ಪ್ರೀತಮ್, ಆಟೋಯಡಿಯೂರಪ್ಪ, ಕುಮಾರ್, ಹರೀಶ್, ಗಂಗಾಧರ್, ಶಂಕರ್, ಜ್ಯೋತಿಪ್ರಕಾಶ್, ಬನಶಂಕರಿಬಾಬು, ವೆಂಕಟೇಶಾಚಾರ್, ಹನುಮಂತರಾಜು, ಕೇಬಲ್ ಮಂಜು, ದೇವರಾಜು, ನಂದಿ ಪ್ರಭಾಕರ್, ಕಾಮಕೃಷ್ಣ, ಕುಮಾರ್, ಉಮೇಶ್, ಸತೀಶ್ ಸೇರಿದಂತೆ ಈ ಭಾಗದ ವಿವಿಧ ಸಂಘಸAಸ್ಥೆಗಳ ಪ್ರಮುಖರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
