ಕೊರಟಗೆರೆ :- ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಹಿಂದಿನ ಶೈಕ್ಷಣಿಕ ವರ್ಷದ ಕಳಪೆ ಫಲಿತಾಂಶದಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾಧ್ಯಂತ ಪ್ರಯಾಣಿಸುತ್ತಿದ್ದು, ಗುರುವಾರ ತಾಲೂಕಿನ ಹಲವು ಪ್ರೌಢ ಶಾಲೆಗಳು ಹಾಗೂ ವಸತಿ ಶಾಲೆಗೆ ದಿಡೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಪೂರ್ವ ಸಿದ್ಧತಾ ಪರೀಕ್ಷೆಯ ಅಂಕಿ ಅಂಶ ಪಡೆದು ಶಿಕ್ಷಕರುಗಳಿಗೆ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದ ಶುಭ ಕಲ್ಯಾಣ್ ನೇರವಾಗಿ ತರಗತಿಗಳಿಗೆ ಧಾವಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದರು, ಸರಾಸರಿ 38% ಫಲಿತಾಂಶ ಕಂಡು ಸಿಡಿ ಮಿಡಿಗೊಂಡು ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಚೇತರಿಕೆ ಕಾಣಬೇಕು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದರು.
ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನೇ ಪೂರ್ವಸಿದ್ಧತಾ ಪರೀಕ್ಷೆಗಳ ಅಂಕಿ ಅಂಶಗಳು ಸೇರಿದಂತೆ ಸ್ವತಃ ವಿದ್ಯಾರ್ಥಿಗಳನ್ನೇ ಬೋರ್ಡು ಮುಂದೆ ಕರಸಿ ಗಣಿತ ವಿಷಯದ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದಲ್ಲದೆ ಇನ್ನೂ ಪರೀಕ್ಷೆಗೆ ಕಾಲಮಿತಿ ಇದ್ದು ಅಷ್ಟರಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ತಾಕಿತು ಮಾಡಿದರು.

ಶಿಕ್ಷಕರುಗಳಿಗೆ ಸ್ವತಃ ಪಾಠ ತೆಗೆದುಕೊಂಡ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್
ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳ ಸಮೀಪಕ್ಕೆ ಬಂದು ಅನುತ್ತೀರ್ಣರಾಗಿರುವ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳಕ್ಕೆ ಎಲ್ಲಾ ಶಿಕ್ಷಕರು ಶ್ರಮ ವಹಿಸುವಂತೆ ಕಿವಿಮಾತು ಹೇಳಿದರು.

ಬೈಚಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಬಗ್ಗೆ ವಿದ್ಯಾರ್ಥಿಗಳಿಂದ ಕೂಲಂಕುಶವಾಗಿ ಮಾಹಿತಿ ಕಲೆ ಹಾಕಿದರು, ವಿಜ್ಞಾನದ ವಿಷಯದಲ್ಲಿ ಒಂದಷ್ಟು ವಿದ್ಯಾರ್ಥಿಗಳಿಗೆ ಪ್ರತಿ ಪ್ರೌಢಶಾಲೆಯಲ್ಲಿ ಹಿನ್ನಡೆ ಕಂಡುಬರುತ್ತದೆ ವಿಜ್ಞಾನ ಮತ್ತು ಗಣಿತದ ಬಗ್ಗೆ ಹೆಚ್ಚು ಶ್ರಮವಹಿಸಿ ಈ ವಸತಿ ಶಾಲೆಯಲ್ಲಿ ಒಂದಷ್ಟು ವಾತಾವರಣ ಉತ್ತಮವಾಗಿದೆ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸಹ ಸುಧಾರಣೆ ಕಂಡಂತೆ ಕಂಡುಬರುತ್ತಿದೆ ಫಲಿತಾಂಶ ಮತ್ತಷ್ಟು ಹೆಚ್ಚಳಕ್ಕೆ ಶಿಕ್ಷಕರುಗಳು ಶ್ರಮಿಸಬೇಕು ಎಂದು ಎಚ್ಚರಿಕೆ ನೀಡಿದರು.

ಕೊರಟಗೆರೆ ಜೂನಿಯರ್ ಕಾಲೇಜ್ ಪ್ರೌಢಶಾಲೆ ಹಾಗೂ ಬೈಚಾಪುರ ಮುರಾರ್ಜಿ ವಸತಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭ ಕಲ್ಯಾಣ್ ಹಿತನುಡಿ ನುಡಿದು ಈ ಬಾರಿಯ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಒಂದು ತಿಂಗಳು ಬಾಕಿ ಉಳಿದಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಗಮನಹರಿಸಬೇಕು, ಮಕ್ಕಳಿಗೆ ಪರೀಕ್ಷೆ ತೇರ್ಗಡೆಗೆ ಅನುಕೂಲವಾಗುವಂತ ಸಾಮಾನ್ಯ ಜ್ಞಾನವನ್ನು ಶಿಕ್ಷಕರು ಸರಳವಾಗಿ ಹೇಳಿಕೊಡುವಂತಾಗಬೇಕು, ವಿಶೇಷ ತರಗತಿಗಳ ಮೂಲಕ ಅವರ ಕಲಿಕಾ ಗುಣಮಟ್ಟವನ್ನು ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು , ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಚಿಂತನೆಗಳಿಂದ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ ಎಂದು ಶಿಕ್ಷಕರುಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಿತ ನುಡಿ ನುಡಿದರು.
*ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ*
ಕೊರಟಗೆರೆ ಪಟ್ಟಣದ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಶುಭ ಕಲ್ಯಾಣ್ ಮಕ್ಕಳ ಹಾಜರಾತಿ ಪುಸ್ತಕ, ಪ್ರತಿದಿನದ ಮೆನು ಮಾದರಿಯಲ್ಲಿ ತಿಂಡಿ ಹಾಗೂ ಊಟ ಸಮರ್ಪಕವಾಗಿ ನಿರ್ವಹಣಾಯಾಗುತ್ತಿದೆ ಎಂದು ಪರಿಶೀಲಿಸಿ, ಯಾರಪ್ಪ ವಿದ್ಯಾರ್ಥಿಗಳು ನೆಲದ ಮೇಲೆ ಮಲಗದ ರೀತಿಯಲ್ಲಿ ಎಚ್ಚರಿಕೆವಹಿಸಿ ಸಮರ್ಪಕವಾಗಿ ಆಶಯ ಓದಿಕೆಯನ್ನು ನೀಡುವಂತೆ ಆದೇಶಿಸಿದ್ದಲ್ಲದೆ ಶೌಚಾಲಯ ಹಾಗೂ ಅಡುಗೆ ಮನೆಯನ್ನ ವೀಕ್ಷಿಸಿ ಇದೇ ಮಾದರಿಯಲ್ಲಿ ಇತರೆ ವಸತಿ ಶಾಲೆಗಳು ಶುಚಿತ್ವ ಕಾಪಾಡಿಕೊಂಡು ನಿರ್ವಹಣೆ ಮಾಡುವಂತೆ ತಾಲೂಕು ಮಟ್ಟದ ಅಧಿಕಾರಿಗೆ ತಿಳಿಸಿದರು.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಧಾರಿಸಲು ಹಾಗೂ ಉತ್ತಮ ಮಟ್ಟದಲ್ಲಿ ಫಲಿತಾಂಶ ಬರುವ ನಿಟ್ಟಿನಲ್ಲಿ ತಾಸಿಲ್ದಾರ್ ಮಂಜುನಾಥ್ ಹಾಗೂ ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಎಲ್ಲಾ ಪ್ರೌಢಶಾಲೆ ಗಳಿಗೂ ಭೇಟಿ ನೀಡಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಬಾರಿ ಭೇಟಿ ನೀಡಬೇಕು ಎಂದು ಸೂಚಿಸುತ್ತಿರದಲ್ಲದೆ ಶಿಕ್ಷಕರುಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಫಲಿತಾಂಶ ಇಡೀ ಜಿಲ್ಲೆಗೆ ಕೊರಟಗೆರೆ ಮಾದರಿಯಾಗಬೇಕು ಶಿಕ್ಷಕರುಗಳಿಗೆ ಕಿವಿ ಮಾತು ಹೇಳಿದರು.
*ಒಳ ಕ್ರೀಡಾಂಗಣ ವೀಕ್ಷಣೆ*
ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿರುವ ಟೆನ್ನಿಸ್ ಬಾಲ್ ಒಳ ಕ್ರೀಡಾಂಗಣ ಗುಣಮಟ್ಟ ಪರೀಕ್ಷಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಒಂದಷ್ಟು ಕಾಮಗಾರಿಗಳ ಬಗ್ಗೆ ಎಚ್ಚರಿಕೆ ನೀಡಿ ಗುಣಮಟ್ಟ ಕಾಮಗಾರಿಯ ಜೊತೆಗೆ ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಸಿಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ನಂತರಾಮು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಉಮೇಶ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಯಮುನಾ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
