ತುಮಕೂರು : ನಮ್ಮ ದೇಶದಲ್ಲಿ ಹಣವಂತರ ಸಂಖ್ಯೆ ಹೆಚ್ಚಿದೆ. ಅದರೆ ಒಳ್ಳೆಯ ಸಹಾಯ ಮಾಡುವ ಮನಸ್ಥಿತಿ ಇರುವವರು ಕೆಲವರೇ ಮಾತ್ರ. ಅಂತಹುದರಲ್ಲಿ ವೋಡೆ ಪ್ರತಿಷ್ಠಾನವೂ ಒಂದಾಗಿದೆ ಎಂದು ಹೇರಿಟೇಜ್ ಫೌಂಡೇಷನ್ ಸಿಇಓ ಶ್ರೀಮತಿ ಕಲ್ಪನಾ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಕೃಷಿಕ್ ಪೌಂಢೇಷನ್ ಸಭಾಂಗಣದಲ್ಲಿ ವುಡೇ ಪ್ರತಿಷ್ಠಾನ ಬೆಂಗಳೂರು ವತಿಯಿಂದ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಶಿಕ್ಷಣಕ್ಕೆ ಮಾಡುವ ಸಹಾಯ ಎಲ್ಲ ಸಹಾಯಕ್ಕಿಂತಲೂ ಶ್ರೇಷ್ಠವಾದುದ್ದು ಎಂದರು.
ನಾನು ಕೂಡ ಒಂದು ಶಿಕ್ಷಣ ಸಂಸ್ಥೆಯ ಸಿಇಓ ಆಗಿ ಕೆಲಸ ಮಾಡುತ್ತೇನೆ.ಆದರೆ ಹೆಚ್ಚಿನದಾಗಿ ಶ್ರೀಸತ್ಯಸಾಯಿ ಸೇವಾಶ್ರಮದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು, ಬಡವರಿಗೆ, ನಿರ್ಗತಿಕರಿಗೆ ತನ್ನ ಕೈಲಾದ ಸಹಾಯ ಹಸ್ತ ಚಾಚುತ್ತಿದ್ದೇನೆ. ಈ ಗುಣ ನನ್ನ ಮಾವನವರಾದ ಹಾಲಪ್ಪ ಮತ್ತು ನನ್ನ ಪತಿ ಮುರುಳೀಧರಹಾಲಪ್ಪ ಅವರಿಂದ ಕಲಿತಿದ್ದು,ವುಡೇ ಪ್ರತಿಷ್ಠಾನದ ಜೊತೆಗೆ ಮೊದಲಿನಿಂದಲೂ ಸಂಪರ್ಕವಿದೆ.ಶಿಕ್ಷಣಕ್ಕಾಗಿ ಸಾಕಷ್ಟು ಖರ್ಚು ಮಾಡುತಿದ್ದಾರೆ. ಅವರಿಂದ ಸಾವಿರಾರು ಮಕ್ಕಳಿಗೆ, ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅನುಕೂಲವಾಗುತ್ತಿದೆ.ಅವರು ಮಾಡುವ ಸೇವೆಯೂ ಸಾರ್ಥಕ ಎನಿಸುತ್ತದೆ ಎಂದು ಶ್ರೀಮತಿ ಕಲ್ಪನಾ ಮುರುಳೀಧರ ಹಾಲಪ್ಪ ನುಡಿದರು.
ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ವ್ಯವಸ್ಥೆಯ ವಿರುದ್ಧ ಈಜುವುದನ್ನು ಇಂದಿನ ಮಕ್ಕಳು ಕಲಿಯಬೇಕು.ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಅಪ್ಪನ ಆಸ್ತಿ ಹಂಚಿಕೆ ವೇಳೆ ಸಬ್ ರಿಜಿಸ್ಟಾರ್ ಕಚೇರಿಯಲ್ಲಾದ ಕಹಿ ಅನುಭವವನ್ನೇ ಸವಾಲಾಗಿ ತೆಗೆದುಕೊಂಡು, ಐಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿದ್ದಾರೆ. ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.ಮಕ್ಕಳು ಮೊಬೈಲ್ನಿಂದ ಹೊರಬಂದು ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತನ ಹುದ್ದೆ ಅಲಂಕರಿಸುವ ಕನಸು ನಿಮ್ಮದಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವುಡೇ ಪ್ರತಿಷ್ಟಾನದ ಶ್ರೀಮತಿ ಅನುಪಮ ಮಾತನಾಡಿ, ಒಂದು ಒಳ್ಳೆಯ ಉದ್ದೇಶದಿಂದ ನಮ್ಮ ಪ್ರತಿಷ್ಠಾನ ಬಡ, ನಿರ್ಗತಿಕ, ಏಕ ಪೋಷಕ ಹಾಗೂ ವಿಕಲಚೇತನ ಹೆಣ್ಣು ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ಧನ ಸಹಾಯ ಮಾಡುತ್ತಿದೆ.ಇದರ ಸದುಪಯೋಗ ಪಡೆದುಕೊಂಡು, ಮಕ್ಕಳು ಸ್ವಾವಲಂಭಿ ಜೀವನ ನಡೆಸಿದರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿಲ್ಲ ಎಂದರು.
ವೇದಿಕೆಯಲ್ಲಿ ಪ್ರೊ.ಕೆ.ಚಂದ್ರಣ್ಣ, ನಾಗರತ್ನಮ್ಮ, ಶ್ರೀಮತಿ ಶೀಲಾರಾಜು, ಶ್ರೀಮತಿ ಸೌಮ್ಯ ಪ್ರದೀಪ್, ಶ್ರೀಮತಿ ಹೆಚ್.ವಿ.ಸುಗುಣ, ಶ್ರೀಮತಿ ಉಮಾದೇವಿ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
