ರಾಮನಾಥಪುರ- ಪುರಾಣ ಪ್ರಸಿದ್ಧ ದೇವಾಲಯಗಳ ಬೀಡು ಎನಿಸಿರುವ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರದ ಶ್ರೀ ಉತ್ತರಾಧಿ ಮಠದ ಶ್ರೀ ರಘವೇಂದ್ರಸ್ಬಾಮಿಗಳವರ ರಥೋತ್ಸವದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರ ಸಮ್ಮುಖದಲ್ಲಿ ಇಂದು ಮಂಗಳವಾರ ದೇವಾಲಯದ ವ್ಯವಸ್ಥಾಪಕರು ಕನಕಾಚಾರ್ಯರ ನೇತೃತ್ವದಲ್ಲಿ ಅದ್ದೂರಿಯಾಗಿ ರಥೋತ್ಸವ ನೆರವೇರಿತು.
ರಾಮನಾಥಪುರದ ಶ್ರೀ ರಾಘವೇಂದ್ರ ವೈಭವೋತ್ಸವದ ಪ್ರಯುಕ್ತ ರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳಿಂದ ಅಲಂಕೃತಗೊಂಡಿತ್ತು. ಹಗಲು 12 ಗಂಟೆಗೆ ಸರಿಯಾಗಿ ಶ್ರೀ ಉತ್ತರಾಧಿಮಠದ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿ ವಿವಿಧ ಪುಪ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 25 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಭಕ್ತರ ಸಮಯದಲ್ಲಿ ಮಂಗಳ ವಾಧ್ಯಗಳೊಂದಿಗೆ ಹಷ್ರೋದ್ವಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ಕಾವೇರಿ ನದಿ ಸೇತುವೆಯವರೆವಿಗೂ ಹಾಗೂ ಅಲ್ಲಿಂದ ಮತ್ತೆ ಇಲ್ಲಿಯ ಶ್ರೀ ಸುಬ್ರಹ್ಮಣ್ಯಸ್ಬಾಮಿ ದೇವಾಲಯದ ಸುತ್ತ ಪ್ರದಕ್ಷಣೆ ನಂತರ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ನಿಲ್ಲಿಸಿದರು.
ಇಂದು ರಥೋತ್ಸವದ ಪ್ರಯುಕ್ತ ಇಲ್ಲಿಯ ಉತ್ತರಾಧಿ ಮಠದಲ್ಲಿ ಶ್ರೀಗುರು ರಾಘವೇಂದ್ರಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗ ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾಧಿಗಳು, ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು. ಶ್ರೀಸ್ವಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಶ್ರೀ ರಾಘವೇಂದ್ರಸ್ವಾಮಿ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ವೈಭವೋತ್ಸವ, ಶ್ರೀ ರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಹಾಗೂ ಮಹಾ ರಥೋತ್ಸವ ಮತ್ತು ಮಹಾಮಂಗಳಾರತಿ ನಂತರ ಬಂದಂತಹ ಭಕ್ತರು ಪ್ರಸಾದದ ವ್ಯವಸ್ಥೆಯನ್ನು ದೇವಾಲಯದ ವ್ಯವಸ್ಥಾಪಕರು ಕನಕಾಚಾರ್ಯರು ವ್ಯವಸ್ಥೆ ಮಾಡಿದ್ದರು.
ವರದಿ : ಕುಮಾರಸ್ವಾಮಿ
