ಕೊರಟಗೆರೆ. ತಾಲ್ಲೂಕಿನ ತೋವಿನಕೆರೆಯಲ್ಲಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಮಕ್ಕಳ ಶಾಲಾ ವಾರ್ಷಿಕೋತ್ಸವ ತುಂಬಾ ಸಡಗರದಿಂದ ನಡೆಯಿತು ಶಾಲೆಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಫೈರೋಜ್ ಬೇಗಂ ರವರು ಉದ್ಘಾಟಿಸಿ ಮಕ್ಕಳಿಗೆ ಶಾರದಾದೇವಿಯು ಒಳ್ಳೆಯ ವಿದ್ಯೆ ವಿನಯ ಮತ್ತು ಜ್ಞಾನವನ್ನು ಕರುಣಿಸಿ ಮಕ್ಕಳು ಮುಂದೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬೆಳೆಯಲಿ ಎಂದು ಹಾರೈಸಿ ದೀಪ ಹಚ್ಚುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮಕ್ಕಳೊಂದಿಗೆ ಶಿಕ್ಷಕರು ಒಳ್ಳೆಯ ಬಾಂಧವ್ಯ ಹೊಂದಿದ್ದರೆ ಮಕ್ಕಳಿಗೆ ಶಿಕ್ಷಣವು ತುಂಬಾ ಅನುಕೂಲವಾಗಿ ಅವರು ಸಹ ಮುಂದೆ ಸಮಾಜಕ್ಕೆ ಒಳ್ಳೆಯ ಬೆಳಕನ್ನು ನೀಡುತ್ತಾರೆ ಎಂದರು. ಶಾಲೆಯ
ಮುಖ್ಯ ಶಿಕ್ಷಕರಾದ ಶ್ರೀ ಸಿದ್ದಪ್ಪ ಎಸ್ ಬಿ ಅವರು ಮಾತನಾಡಿ ಮಕ್ಕಳು ವಿದ್ಯೆಯ ಜೊತೆಗೆ ಸಾಂಸ್ಕೃತಿಕ ನೃತ್ಯ ಕಲೆ ನಾಟಕ ಕಲಿತು ವಿಭಿನ್ನ ವ್ಯಕ್ತಿಗಳಾಗಲಿ ಮುಂದೆ ಸಾಗಬೇಕು ಇನ್ನು ಪರೀಕ್ಷೆ ಪ್ರಾರಂಭವಾಗುತ್ತಿದೆ ಅದರಿಂದ ಶಾರದಾ ಪೂಜೆಯನ್ನು ಮಾಡಿ ಮಕ್ಕಳು ಓದುವುದಕ್ಕೆ ಸಮಯವನ್ನು ಕೊಡಬೇಕು ಮಕ್ಕಳು ವಿಪರೀತ ಒತ್ತಡದಲ್ಲಿ ಪರೀಕ್ಷೆಯ ಬಗ್ಗೆ ಚಿಂತೆಯನ್ನು ಮಾಡದೆ ಹಾಯಾಗಿದ್ದು ಸಮಯ ತೆಗೆದುಕೊಂಡು ಆಸಕ್ತಿ ಪಟ್ಟು ಓದಿದರೆ ಎಲ್ಲರೂ ಉತ್ತೀರ್ಣರಾಗುತ್ತೀರ ಹಾಗೂ ನಮ್ಮ ಶಾಲೆಗೆ ಕೀರ್ತಿ ತರುವಂತಾಗುತ್ತೀರಾ ಎಂದು ವಿದ್ಯಾರ್ಥಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದರು ನೀವು ಚೆನ್ನಾಗಿ ಪರೀಕ್ಷೆ ಬರೆಯಬಲ್ಲಿರಿ ಎಂಬ ವಿಶ್ವಾಸವನ್ನು ಹೊಂದಿ ನೀವು ಶ್ರಮಪಟ್ಟು ಓದಿದರೆ ನಿರೀಕ್ಷಿಸಿದಷ್ಟು ಅಂಕಗಳು ಬರುತ್ತವೆ ಎಂದು ತಿಳಿಸಿ ಮಕ್ಕಳಿಗೆ ಆತ್ಮ ವಿಶ್ವಾಸವನ್ನು ತುಂಬಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಸ್ವಾಗತದಿಂದ ಪ್ರಾರ್ಥನೆ ಭಕ್ತಿಗೀತೆಗಳನ್ನು ಹಾಡಿದರು ವಿವಿಧ ನೃತ್ಯಗಳನ್ನು ಮಾಡಿ ಶಾಲಾ ಮಕ್ಕಳು ತುಂಬಾ ಸಂಭ್ರಮ ಸಂತಸದಿಂದ ಗುರುಗಳಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹ ಶಿಕ್ಷಕರು ಗುರುಬೃಂದದವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶ್ರೀಮತಿ ಫೈರೋಜ್ ಬೇಗಂ ರವರು ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕರಾದ ಸಿದ್ದಪ್ಪ ಎಸ್ ಬಿ,
ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್ ಟಿ ಎ,ನಾಗರಾಜ್ ನಾಯಕ, ಶ್ರೀಮತಿ ರಮ್ಯಾ ಎಸ್ ಆರ್, ಶ್ರೀಮತಿ ಲೇಪಾಕ್ಷಿ ಕೆ, ರಂಗನಾಥ್ ಕೆಆರ್, ಅಂಬಿಕಾ ಎಂ ಎಸ್,ನಾಗವಣಿ ಕೆ,ಹಿಂದೂಮತಿ,ವೀಣಾ ಧನಂಜಯ ಕೆಆರ್, ಶೈಲಜಾ ರತ್ನದೇವಿ,ಶಿವಣ್ಣ ಸಹ ಶಿಕ್ಷಕರು ಎಲ್ಲಾ ಮಕ್ಕಳು ಭಾಗವಹಿಸಿದ್ದರು.
ವರದಿ, ನರಸಿಂಹಯ್ಯ ಹೊಸಕೋಟೆ
