ರಾಮನಾಥಪುರ- ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜೆ.ಡಿ.ಎಸ್. ಕಾರ್ಯಕರ್ತರ ಸದಸ್ಯತ್ವವನ್ನು ನೊಂದಣಿ ಮಾಡುವಂತೆ ಕಾರ್ಯಕರ್ತರಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಮನವಿ ಮಾಡಿದರು.
ರಾಮನಾಥಪುರದ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ರಾಮನಾಥಪುರ ಹೋಬಳಿ ಮಟ್ಟದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಇಂದು ಬುಧವಾರ ಚಾಲನೆ ನೀಡಿದ ಅವರು ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆಯನ್ನು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಜೆಡಿಎಸ್ ಕಾರ್ಯಕರ್ತರ ಸದಸ್ಯತ್ವವನ್ನು ನೊಂದಣಿ ಮಾಡುವಂತೆ ಮನವಿ ಮಾಡಿದ ಅವರು ಮುಂಬರುವ ವಿಧಾನ ಸಭೆ ಚುನಾವಣೆ 2028 ಕ್ಕೆ ಬರಲಿದ್ದು ಎನ್.ಡಿ.ಎ. ಮೈತ್ರಿ ಸರ್ಕಾರ ರಚನೆಯಾಗಲಿದ್ದು ಕೇಂದ್ರ. ಸಚಿವರಾದ ಎಚ್ ಡಿ. ಕುಮಾರಸ್ವಾಮಿ ಅ ವರು ಮುಖ್ಯಮಂತ್ರಿ ಮಾಡಲು ಜೆಡಿಎಸ್ ನ ಎಲ್ಲಾ ಕಾರ್ಯಕರ್ತ ಬಂಧುಗಳು ಪಕ್ಷವನ್ನು ಸದೃಢ ಮಾಡುವಂತೆ ಪಕ್ಷದ ಬಲವರ್ಧನೆ ಮಾಡುವಂತೆ ಎ. ಮಂಜು ಜೆ.ಡಿ.ಎಸ್. ನ ಎಲ್ಲಾ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಜೆ.ಡಿ.ಎಸ್. ಮುಖಂಡರಾದ ಹೊನ್ನವಳ್ಳಿ ಸತೀಶ್, ಅರ್.ಎಸ್.ನರಸಿಂಹಮೂರ್ತಿ, ಮಲ್ಲಾದಪುರ ರಾಜೇಗೌಡರು, ಜವರೇಗೌಡರು, ಮಹೇಂದ್ರಕುಮಾರ್, ಜಿ.ಸಿ. ಮಂಜೇಗೌಡ, ಕುಮಾರಸ್ವಾಮಿ, ಹೇಮಂತ್ ಕುಮಾರ್, ಮಧು, ಜಗದೀಶ್, ಗುಂಡಣ್ಣ, ಸಿದ್ದರಾಜು, ಎಂ.ಅರ್. ಶ್ರೀನಿವಾಸ್, ಭರತ, ವಿನುಗೌಡ, ಶಿವೇಗೌಡ ಮುಂತಾದವರು ಇದ್ದರು.
ವರದಿ : ಕುಮಾರಸ್ವಾಮಿ, ರಾಮನಾಥಪುರ
