ತುಮಕೂರು: ಟೀಮ್ ಸ್ಯಾಷೋಲಿಕ್ಸ್ ಮತ್ತು ವಿನಟೆಜ್ ಇವೆಂಟ್ಸ್ ವತಿಯಿಂದ ಮಾರ್ಚ್ 22 ರಂದು ತುಮಕೂರಿನ ಸಿದ್ದಗಂಗಾ ಬಡಾವಣೆಯಲ್ಲಿರುವ ತುಮಕೂರು ಬ್ಯಾಡ್ಮಿಟನ್ ಅಕಾಡೆಮಿಯ ಬ್ಯಾಡ್ಮಿಟನ್ ಅಂಕಣದಲ್ಲಿ ನಡೆಯುವ ತುಮಕೂರು ಬ್ಯಾಡ್ಮಿಟನ್ ಲೀಗ್-2026ರ ಟ್ರೋಫಿ ಆನಾವರಣ ಹಾಗೂ ಆಟಗಾರರ ಹರಾಜು ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು.
ನಗರದ ಹರ್ಬನ್ರೆಸಾರ್ಟ್ ನಲ್ಲಿಟೀಮ್ ಸ್ಯಾಷೋಲಿಕ್ಸ್ಮತ್ತು ವಿನಟೆಜ್ಇವೆಂಟ್ಸ್ವತಿಯಿಂದ ಆಯೋಜಿಸಿದ್ದ ತುಮಕೂರು ಬ್ಯಾಡ್ಮಿಟನ್ ಲೀಗ್-2026 ರ ಟ್ರೋಫಿಆನಾವರಣ ಮತ್ತುಆಟಗಾರರ ಹರಾಜು ಪ್ರಕ್ರಿಯೆಗೆತುಮಕೂರು ಪೊಲೀಸ್ಇಲಾಖೆಯ ಸಶಸ್ತç ಮೀಸಲು ಪಡೆಯ ಡಿವೈಎಸ್ಪಿ ಕೆ.ಎಲ್.ಪರಮೇಶ್, ವಿದ್ಯಾವಾಹಿನಿ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಹಾಗೂ ಸರಕಾರಿ ನೌಕರರ ಸಂಘದ ರಾಜ್ಯಕ್ರೀಡಾ ಕಾರ್ಯದರ್ಶಿ ಮೋಹನ್ಕುಮಾರ್ ಅವರುಗಳು ದೀಪ ಬೆಳಗಿಸಿ, ಟ್ರೋಫಿ ಆನಾವರಣಗೊಳಿಸಿ ಚಾಲನೆ ನೀಡಿದರು.
ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪಕುಮಾರ್ ಮಾತನಾಡಿ, ಸುಮಾರು 144 ಜನ ಪ್ರೊಪೇಷನಲ್ಆಟಗಾರರನ್ನು ಹೊಂದಿರುವಟೀಮ್ ಸ್ಯಾಷೋಲಿಕ್ಸ್ ನವರು ಇಂತಹದೊಂದು ಕ್ರೀಡಾಚಟುವಟಿಕೆಗೆ ಚಾಲನೆ ನೀಡಿರುವುದು ಹೆಮ್ಮೆಯ ವಿಚಾರ, ನಾನು ವಿದ್ಯಾರ್ಥಿಯಾಗಿದ್ದಾಗ ಹವ್ಯಾಸಿಯಾಗಿ ಷಟಲ್ ಬ್ಯಾಡ್ಮಿಟನ್ ಆಟವಾಡುತ್ತಿದ್ದೆ.ಮೊದಲನೇ ಲೀಗ್ ಚಾಂಪಿಯನ್ಸ್ನಲ್ಲಿ ಪುರುಷರಿಗೆ ಮಾತ್ರ ಅವಕಾಶವಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಅವಕಾಶ ದೊರೆಯಲಿ. ಆ ಮೂಲಕ ಕ್ರೀಡೆಎಲ್ಲರನ್ನು ಒಂದುಗೂಡಿಸಿ, ಪರಸ್ವರ ಪ್ರೀತಿ, ಸ್ನೇಹ, ಸೌಹಾರ್ಧತೆಯನ್ನು ಮೂಡಿಸಲಿ ಎಂದರು.
ಮಾರ್ಚ್22 ರಿಂದ ಆರಂಭವಾಗುವ ತುಮಕೂರು ಬ್ಯಾಡ್ಮಿಟನ್ ಲೀಗ್-2026 ಕ್ರೀಡಾಕೂಟದಲ್ಲಿ ಕುಣಿಗಲ್ ಪ್ಯಾಂರ್ಸ್, ಜಿ.ಆರ್.ಚಾಲೆಂಜರ್ಸ್, ಉಲ್ಫ್ ಫ್ಯಾಕ್ಸ್, ಥಂಡರ್ ಸ್ಯಾಷರ್, ತುಮಕೂರು ಪವರ್ ಸ್ಯಾಷರ್, ಷಟಲ್ ಸ್ಟ್ರೈಕರ್ಸ್ ,ಗುಬ್ಬಿ ವಾರಿಯರ್ಸ್,ಎಸ್.ಎಸ್.ಸ್ಟ್ರೈಕರ್ಸ್, ಜಿಲ್ಲೆಯ 8 ಕ್ರೀಡಾ ತಂಡಗಳು ಭಾಗವಹಿಸಲಿದ್ದು,ಮೊದಲ ಸ್ಥಾನ ಪಡೆದತಂಡದ ಮಾಲೀಕರಿಗೆ 70ಸಾವಿರ ನಗದು ಮತ್ತು ಟ್ರೋಫಿ, ಎರಡನೇ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ಮತ್ತು ಟ್ರೋಫಿ ದೊರೆಯಲಿದೆ.ಅಲ್ಲದೆ ಆಟಗಾರರಿಗೆ ವೈಯುಕ್ತಿಕವಾಗಿ ಮೊದಲು ಮೂರು ಸ್ಥಾನ ಪಡೆಯುವ ಆಟಗಾರರಿಗೆ ಕ್ರಮವಾಗಿ 3 ಸಾವಿರ, ಎರಡು ಸಾವಿರ ಮತ್ತುಒಂದು ಸಾವಿರ ನಗದು ಬಹುಮಾನ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಟೀಮ್ ಸ್ಯಾಷೋಲಿಕ್ಸ್ ಮತ್ತು ವಿನಟೆಜ್ ಇವೆಂಟ್ಸ್ ಉಮೇಶ್, ಸ್ವಾಮಿ, ಲಿಖಿತ್, ರೆಡ್ಡಿ, ಗೌತಮ್, ಜೋತಿಪ್ರಕಾಶ್(ಜೆಪಿ) ಅವರುಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
