ತುಮಕೂರು: ರಾಜ್ಯ ಅಗ್ನಿವಂಶಕ್ಷತ್ರಿಯ ತಿಗಳ ಯೂತ್ ಫೋರ್ಸ್ 5ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಯುವ ಸಂಕಲ್ಪ ಕಾರ್ಯಕ್ರಮ ನಗರದ ಹನುಮಂತಪುರದಲ್ಲಿ ನಡೆಯಿತು.ಈ ವೇಳೆ ಯೂತ್ ಫೋರ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ನಡೆದು, ಸಂಘಟನೆಯ ಸೇವಾ ಚಟುವಟಿಕೆ ಮುಂದುವರೆಸುವ ಸಂಕಲ್ಪ ಮಾಡಿದರು.
ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ತಿಗಳ ಸಮಾಜದ ಯಜಮಾನರಾದ ಹನುಮಂತರಾಜು, ನಮ್ಮ ಸಮಾಜದ ಯವಕರು ಜಾಗೃತರಾಗಬೇಕು, ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ಇಂದು ಯಾವುದೇ ಸಮಾಜ ಮೇಲೆ ಬರಲು ಶಿಕ್ಷಣವೇ ಅಸ್ತç, ಸಮಾಜದ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಟ್ಟು ಅವರು ಉನ್ನತ ಸ್ಥಾನಮಾನ ಪಡೆಯಲು ನೆರವಾಗಬೇಕುಎಂದು ಹೇಳಿದರು.
ಸಮಾಜದ ಹಿರಿಯರಾದ ಟಿ.ಎಲ್.ಕುಂಭಯ್ಯ ಮಾತನಾಡಿ, ತಿಗಳ ಸಮಾಜವು ನಮ್ಮದೇ ಆದ ಸಂಸ್ಕೃತಿ, ಸಂಪ್ರದಾಯಗಳನ್ನು ಹೊಂದಿದೆ.ಯುವಕರು ಹಿರಿಯರ ಮಾರ್ಗದರ್ಶನ ಪಡೆದು ಸಮಾಜಕಟ್ಟುವ, ಸಮಾಜವನ್ನು ಒಗ್ಗೂಡಿಸುವ, ಕಷ್ಟದಲ್ಲಿರುವವರಿಗೆ ಸಹಾಯಾಸ್ತ ಚಾಚುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಯೂತ್ ಫೋರ್ಸ್ನ ಅಧ್ಯಕ್ಷ ಕೆ.ಆರ್.ಮಾರುತಿ ಮಾತನಾಡಿ, ಶ್ರೀಮಂತ ಸಂಸ್ಕೃತಿ ಹೊಂದಿರುವ ನಮ್ಮ ತಿಗಳ ಸಮಾಜವನ್ನು ಸಶಕ್ತವಾಗಿ ಕಟ್ಟಿಬೆಳೆಸಲು ಯುವಕರು ಸಂಕಲ್ಪ ಮಾಡಬೇಕು.ಹಿರಿಯರ ಸಹಕಾರದೊಂದಿಗೆ ಸಮಾಜ ಸೇವಾಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಹೆಚ್.ಆರ್.ಮಂಜುನಾಥ್ ನಗರಪಾಲಿಕೆ ಮಾಜಿಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್.ಜಯರಾಮ್,ರೇವಣ್ಣಸಿದ್ಧಯ್ಯ, ರವೀಶ್ಜಹಂಗೀರ್, ಎನ್.ಎಸ್.ಶಿವಣ್ಣ, ಎಸ್.ಕೆ.ಸಿದ್ದಯ್ಯ, ಗಂಗಣ್ಣ, ಕೃಷ್ಣಯ್ಯ, ವೀರಣ್ಣ, ಶ್ರೀಕಾಂತ್, ಉಮೇಶ್, ಅನಂತಕೃಷ್ಣ, ರವಿಕುಮಾರ್, ರಾಮು, ಗೋವಿಂದರಾಜು, ಪ್ರಾಣೇಶ್, ನವಿತಾರವಿಕುಮಾರ್ ವಿವಿಧ ಮುಖಂಡರು ಭಾಗವಹಿಸಿದ್ದರು.ಈ ವೇಳೆ ಸಮಾಜದ ಮುಖಂಡರು ಅಗ್ನಿಶ್ರೀ ಕಪ್-2026ರ ಲೋಗೋ ಅನಾವರಣ ಮಾಡಿದರು.
– ಕೆ.ಬಿ.ಚಂದ್ರಚೂಡ
