ಟಿ.ನರಸೀಪುರ : ವಿಪಕ್ಷ ನಾಯಕ ಆರ್.ಅಶೋಕ್ ರವರು ಕೊಟ್ಟ ಮಾತಿನಂತೆ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸದಂತೆ ಸದನದಲ್ಲಿ ಪ್ರಶ್ನೆ ಮಾಡಿ ಸಂಬಂಧಿಸಿದ ರೇಷ್ಮೆ ಸಚಿವರಿಂದ ಕ್ರೀಡಾಂಗಣ ನಿರ್ಮಾಣ ಕೈ ಬಿಡುತ್ತಿರುವುದಾಗಿ ಘೋಷಣೆ ಮಾಡಿಸಿದ್ದಾರೆ.
ಕಾರ್ಮಿಕರ ಸಂಘಟಿತ ಹೋರಾಟ,ತೋಟದಪ್ಪ ಬಸವರಾಜು ಹಾಗೂ ಅರ್ಜುನ್ ರವರ ಉಪವಾಸ ಸತ್ಯಾಗ್ರಹ,ರೈತ ಸಂಘದ ಕಿರಗಸೂರು ಶಂಕರ್ ರವರ ನೇತೃತ್ವದಲ್ಲಿ ನಿರಂತರ ಹೋರಾಟ,ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಹೋರಾಟ ಸಂಘಗಳು ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆ,ಜೊತೆಗೆ ಮೈಸೂರು ಲೋಕಸಭಾ ಸಂಸದರಾದ ಯದುವೀರ್ ಒಡೆಯರ್ ರವರು ಕಾರ್ಮಿಕರಿಗೆ ನೀಡಿದ ಅಭಯ ಹಸ್ತ,ಮಾಜಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹರವರ ನಿರ್ಭೀತಿಯ ಮಾತುಗಳು ಅಂತಿಮವಾಗಿ ವಿಪಕ್ಷ ನಾಯಕ ಆರ್.ಅಶೋಕ್ ರವರು ಸ್ಥಳಕ್ಕೆ ಬಂದು ಉಪವಾಸ ನಿರತರನ್ನು ಕೈ ಬಿಡಿಸಿ, ಕಾರ್ಮಿಕರಿಗೆ ಧೈರ್ಯ ತುಂಬಿ ಯಾವುದೇ ಕಾರಣಕ್ಕೂ ಸಿಲ್ಕ್ ಫ್ಯಾಕ್ಟರಿ ಸ್ಥಳದಲ್ಲಿ ಕ್ರೀಡಾಂಗಣ ಮಾಡಲು ಬಿಡುವುದಿಲ್ಲ ನಿಮ್ಮ ಜೊತೆಗೆ ನಾನಿದ್ದೇನೆ ನಿಮ್ಮ ಹೋರಾಟ ಮುಂದುವರಿಸಿ ಎಂದು ಹೇಳಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಿಸಿದ ರೇಷ್ಮೆ ಸಚಿವರು ಆ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಿಲ್ಲವೆಂದು ಹೇಳಿಕೆ ಕೊಟ್ಟ ನಂತರ ಕಾರ್ಮಿಕರು ಅನಿರ್ದಿಷ್ಟಾವಧಿ ಕುಳಿತಿದ್ದ ಮುಷ್ಕರ ವಾಪಸ್ಸು ಪಡೆದಿದ್ದು ಕಳೆದ 18 ದಿನಗಳ ಹೋರಾಟಕ್ಕೆ ತೆರೆ ಬಿದ್ದಿದೆ.

ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯರವರು ಸಿಲ್ಕ್ ಫ್ಯಾಕ್ಟರಿ ಸ್ಥಳಕ್ಕೆ ಬಂದಾಗ ಕಾರ್ಮಿಕರಲ್ಲಿ ಸಂಚಲನ ಉಂಟು ಮಾಡಿತ್ತು.ಖುದ್ದು ಸ್ಥಳ ವೀಕ್ಷಣೆ ಮಾಡಿ ಕಾರ್ಮಿಕರಿಗೆ ಭರವಸೆ ಮಾತುಗಳನ್ನಾಡಿ ಕಾರ್ಮಿಕರ ಹಿತಾಸಕ್ತಿಗೆ ದಕ್ಕೆ ಬಾರದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು.ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕ್ರೀಡಾಂಗಣ ಮಾಡುವುದೊ,ಬೇಡವೋ ಎಂಬುದನ್ನು ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದರು.ಜೊತೆಗೆ ನಮ್ಮ ಕ್ಷೇತ್ರದ ಮತದಾರರಿಗೆ ತೊಂದರೆ ಕೊಟ್ಟು ಕ್ರೀಡಾಂಗಣ ನಿರ್ಮಿಸುವ ಇರಾದೆ ಇಲ್ಲಾ ಎಂದಿದ್ದರು ಎಂಬುದನ್ನು ಸ್ಮರಿಸಬಹುದು.

ವರದಿ – ಎ.ಎಂ.ನಾಂಗೇಂದ್ರ ಕುಮಾರ್
