ಕೆ.ಆರ್.ಪೇಟೆ,ಮಾ.09: ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮಮ್ಮ ಅವರ ಮೇಲೆ ಅಂಗನವಾಡಿ ಕಾರ್ಯಕರ್ತರೊಬ್ಬರು ಸುಳ್ಳು ಜಾತಿ ನಿಂಧನೆ ದೂರು ನೀಡಿರುವುದನ್ನು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಖಂಡಿಸಿದರು.
ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕೆ.ಬಿ.ಧನಲಕ್ಷ್ಮಿ ಅವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ 100ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಗಂಜಿಗೆರೆ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಡಿ.ಸುಜಾ ಅವರು ತಮ್ಮನ್ನು ಬೇರೆ ಕೇಂದ್ರಕ್ಕೆ ವರ್ಗಾವಣೆ ಮಾಡಿಸಿಕೊಡಲಿಲ್ಲ ಎಂಬ ಸಣ್ಣ ಕಾರಣಕ್ಕಾಗಿ ಯಾವುದೇ ತಪ್ಪು ಮಾಡದೇ ಇದ್ದರೂ ಮೇಲ್ವಿಚಾರಕಿ ಪದ್ಮಮ್ಮ ಅವರು ಜಾತಿ ನಿಂಧನೆ ಮಾಡಿದ್ದಾರೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿ ಎಫ್.ಐ.ಆರ್. ಮಾಡಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಗಂಜಿಗೆರೆ ಅಂಗನವಾಡಿ ಕೇಂದ್ರದಲ್ಲಿ ಸರಿಯಾಗಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇರುವ ಕಾರಣ ಮೇಲ್ವಿಚಾರಕಿಗೆ ಮೇಲ್ವಿಚಾರಕಿ ಬೇಟಿ ನೀಡಿದ ವರದಿಯನ್ನು ಸಲ್ಲಿಸಿ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡುವಂತೆ ನೋಟೀಸ್ ಜಾರಿ ಮಾಡಿರುತ್ತಾರೆ. ಇದನ್ನೇ ನೆಪಮಾಡಿಕೊಂಡು ಆರ್.ಪದ್ಮಮ್ಮ ಅವರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಾಲ್ಲೂಕಿನ ಹಲವಾರು ಅಂಗನವಾಡಿ ಕಾರ್ಯಕರ್ತೆಯರ ಸಹಿಯನ್ನು ನಕಲು ಮಾಡಿರುವ ಡಿ.ಸುಜಾ ದೂರು ನೀಡಿರುತ್ತಾರೆ. ಈ ವಿಚಾರ ತಿಳಿದು ಪದ್ಮಮ್ಮ ಈ ರೀತಿ ಮೇಲಧಿಕಾರಿಗಳಿಗೆ ಸುಳ್ಳು ದೂರು ನೀಡುವ ನಡಾವಳಿಕೆ ಸರಿಯಲ್ಲ. ಏನೇ ಇದ್ದರೂ ನಮ್ಮೊಂದಿಗೆ ಚರ್ಚಿಸಬೇಕಿತ್ತಲ್ಲವೇ ಎಂದು ತಿಳುವಳಿಕೆ ನೀಡಿದ್ದಾರೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಡಿ.ಸುಜಾ ದುರುದ್ದೇಶದಿಂದ ಪದ್ಮಮ್ಮ ವಿರುದ್ದ ಸುಳ್ಳು ಜಾತಿ ನಿಂಧನೆ ದೂರು ದಾಖಲಿಸಿರುತ್ತಾರೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಉತ್ತಮ ಅಧಿಕಾರಿಗಳಾದ ಅಂಗನವಾಡಿ ಮೇಲ್ವಿಚಾರಕಿ ಪದ್ಮಮ್ಮ ವಿರುದ್ದ ಮಾಡಿರುವ ಸುಳ್ಳು ದೂರನ್ನು ತಿರಸ್ಕರಿಸುವ ಮೂಲಕ ಉತ್ತಮ ಅಧಿಕಾರಿ ಎಂದು ತಾಲ್ಲೂಕಿನಲ್ಲಿ ಪ್ರಶಂಸೆಗೆ ಒಳಗಾಗಿರುವ ಆರ್.ಪದ್ಮಮ್ಮ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೆ.ಆರ್.ಪೇಟೆಗೆ ಬೇಟಿ ನೀಡಿದ್ದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳಾದ ಪಿ.ಸುಶೀಲ, ಕೃಷ್ಣವೇಣಿ, ಕೆ.ಜೆ.ರೂಪಾ, ಹೆಚ್.ಕೆ.ಜ್ಯೋತಿ, ವಿನೋಧ, ಎ.ಎಸ್.ಸಾವಿತ್ರಿ, ವಲ್ಲೀದೇವಿ, ಶಶಿಕಲಾ, ಮಮತಾ ಸೇರಿದಂತೆ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿ ಅಂಗನವಾಡಿ ಇಲಾಖೆಯ ಮೇಲ್ವಿಚಾರಕಿ ಆರ್.ಪದ್ಮಮ್ಮ ಅವರ ವಿರುದ್ದ ಸುಳ್ಳು ದೂರು ದಾಖಲಿಸಿ, ಅವರ ಹೆಸರಿಗೆ ಕೆಟ್ಟ ಹೆಸರು ತರಲು ಪಿತೂರಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಡಿ.ಸುಜಾ ಅವರ ನಡಾವಳಿಕೆಗಳನ್ನು ಖಂಡಿಸಿದರು.
– ಶ್ರೀನಿವಾಸ್ ಆರ್.
