ಹಾಸನ: ಹಾಸನ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಯೋಜನೆಯಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ, ಹಾಸನದ ಮಹಿಳಾ ಕಲಾವಿದೆಯರು ರಚಿಸಿರುವ ವಿಭಿನ್ನ ಚಿತ್ರಕೃತಿಗಳು ಪ್ರದರ್ಶನಕ್ಕೆ ತಂದಿದ್ದು, ಪ್ರಕೃತಿ, ಮಹಿಳೆಯರು, ಮಕ್ಕಳು, ಬುದ್ಧನ ಚಿತ್ರಗಳು, ಹಾವಿನ ಜೀವನದ ಹಾದಿ, ಹೂಗಳ ಚಿತ್ರಗಳು, ಕೃಷ್ಣ–ಹಡಗು ಮತ್ತು ರಾಧಾಕೃಷ್ಣರ ಪ್ರೀತಿಯ ನೋಟಗಳಂತಹ ವೈವಿಧ್ಯಪೂರ್ಣ ಕಲಾಕೃತಿಗಳು ಪ್ರದರ್ಶನಗೊಂಡವು.
ದ್ವಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದೆಯರು: ಶೋಭಾ. ಆರ್, ಸೌಮ್ಯ. ಎಸ್, ಅಶ್ವಿನಿ. ಹೆಚ್.ವಿ, ಲತಾ.ಎಲ್.ಜಿ, ಹೇಮಲತಾ, ಮಂಜುಳಾ, ಚಂದ್ರಪ್ರಭ, ಅಕ್ಷರ, ಹೇಮಲತಾ.ಆರ್, ಹಂಸವೇಣಿ, ವೃತಿಕ ಕುಮಾರಿ, ಸ್ಪೂರ್ತಿ, ಕೋಮಲ, ಪ್ರಕೃತಿ ಜಿ.ಆರ್, ಭೂಮಿಕ ಮತ್ತು ನಂದಿನಿ.
ಪ್ರದರ್ಶನವನ್ನು ಯಶಸ್ವಿಯಾಗಿಸಲು ಮತ್ತು ಕಲಾವಿದೆಯರಿಗೆ ಮಾರ್ಗದರ್ಶನ ನೀಡಿದ ಹಿರಿಯ ಕಲಾವಿದರು: ಹಾಸನದ ಬಿ.ಎಸ್. ದೇಸಾಯಿ, ಚನ್ನರಾಯಪಟ್ಟಣದ ಪ್ರಭಾಕರ್. ಎಸ್. ವೈ, ಸುರೇಶ್ ಅತ್ನಿ, ಶಿವಕುಮಾರ್ ಆರ್.

ಕಾರ್ಯಕ್ರಮವನ್ನು ಹೃತ್ಪೂರ್ವಕ ಅಭಿನಂದಿಸಿ ಮಹಿಳಾ ಕಲಾವಿದೆಯರಿಗೆ ಪ್ರೇರಣೆ ನೀಡಿದವರು: ಶ್ರೀ ಗೊರೂರು ಆನಂತರಾಜು (ಸಾಹಿತಿಗಳು), ಹಾಸನ, ಶ್ರೀ ಕೆ.ಎನ್. ಶಂಕರಪ್ಪ ಕಲ್ಯಾಡಿ (ಕಾರ್ಯದರ್ಶಿಗಳು), ಸಂಸ್ಕಾರ ಭಾರತಿ ಹಾಗೂ ಸ್ಥಳೀಯ ಚಿತ್ರಕಲಾವಿದರು.
ಹೊರರಾಜ್ಯ ಮಹಿಳೆಯರ ಸಹಕಾರದಿಂದ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಅತ್ಯುತ್ತಮವಾಗಿ ಆಯೋಜನೆಯಾಯಿತು. ಹಾಸನ ಜಿಲ್ಲೆ ಕಲೆಯ ಬೀಡು ಎಂಬ ಖ್ಯಾತಿಯನ್ನು ಮತ್ತೊಮ್ಮೆ ದೃಢಪಡಿಸಿದ ಈ ಕಾರ್ಯಕ್ರಮವು, ಮಹಿಳೆಯರ ಪ್ರತಿಭೆ ಮತ್ತು ಸೃಜನಶೀಲತೆಗೆ ಬೆಳಕು ಹಂಚಿತು.
